ಜಗಳೂರಿನ ಹಲವು ಗ್ರಾಮಗಳಲ್ಲಿ Earthquake.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕ ಮಲ್ಲನಹೊಳೆ ಹಾಗೂ ದಿಬ್ಬದ ಹಳ್ಳಿ ಗ್ರಾಮದಲ್ಲಿ ನೆನ್ನೆ ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಘಟನೆ ವರದಿಯಾಗಿದೆ.
ಭಾರೀ ಶಬ್ದದೊಂದಿಗೆ ಏಕಾಏಕಿ Earthquake ಸಂಭವಿಸಿದ್ದು, ಮನೆಗಳಲ್ಲಿ ಇದ್ದ ಪಾತ್ರೆಗಳು ಹಾಗೂ ಇತರೆ ಸಾಮಗ್ರಿಗಳು ನೆಲಕ್ಕೆ ಬಿದ್ದಿವೆ. ಮನೆಗಳ ಪೀಠೋಪಕರಣಗಳು ಅಲುಗಾಡಿದ್ದು, ಕೆಲವೆಡೆ ಮಾಳಿಗೆ ಮನೆಗಳ ಮೇಲ್ಚಾವಣಿಯ ಮಣ್ಣು ಕುಸಿದು ಬಿದ್ದಿದೆ.
ಇದನ್ನು ಓದಿ : Darshan ಫ್ಯಾನ್ಸ್ ಪರ ಬ್ಯಾಟ್ ಬೀಸಿದ ವಿಜಯಲಕ್ಷ್ಮೀ
ಬೆಚ್ಚಿಬಿದ್ದ ಗ್ರಾಮಸ್ಥರು
ಜಗಳೂರು ತಾಲೂಕಿನ ದೊರೆಸಾಲು ಭಾಗದ ಹಲವು ಗ್ರಾಮಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಘಟನೆಯಿಂದ ಭಯಭೀತರಾದ ಗ್ರಾಮಸ್ಥರು ಮನೆಗಳಿಂದ ಹೊರಬಂದು ರಸ್ತೆಗಳಲ್ಲಿ ನಿಂತು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಅಲುಗಾಡಿದ್ದು, ಬಸ್ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಗಾಬರಿಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಘಾತ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ.

ಭೂಕಂಪನ ಅನುಭವ
ಇನ್ನು ಚಳ್ಳಕೆರೆ ತಾಲೂಕಿನ ಕೊಲಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಹಾಗೂ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ, ದಿಬ್ಬಜಹಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಲಘು Earthquake ಅನುಭವವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಪಡೆದ CPI ಸಿದ್ರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದು, ಆತಂಕ ಪಡಬಾರದೆಂದು ಮನವಿ ಮಾಡಿದ್ದಾರೆ.

ಇದನ್ನು ನೋಡಿ : ರಾಜಕೀಯ ಪ್ರವೇಶದ ಬಗ್ಗೆ ಮೌನ ಮುರಿದ ಕಿಚ್ಚ ಸುದೀಪ್




