ನಟ Darshan ಪತ್ನಿ ವಿಜಯಲಕ್ಷ್ಮೀ ಅವರು ಡಿ-ಬಾಸ್ ಅಭಿಮಾನಿಗಳ ಪರ ಬ್ಯಾಟ್ ಬೀಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’ ಸಕ್ಸಸ್ ಕಂಡಿರುವುದು ತುಂಬಾನೇ ಖುಷಿ ನೀಡುತ್ತಿದೆ ಎಂದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹೇಳಿದ್ದಾರೆ. ದರ್ಶನ್ ಇಲ್ದಿದ್ರೂ, ಫ್ಯಾನ್ಸ್ ಸಿನಿಮಾನಾ ಮೆರೆಸ್ತಿದ್ದಾರೆ. ಚಿತ್ರನ ತಲೆಮೇಲೆ ಎತ್ಕೊಂಡು ಮೆರೆಸ್ತಾರೆ ಇದೇ ಸಾಕ್ಷಿ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿದ್ದಾರೆ.
ಭರ್ಜರಿ ಸಕ್ಸಸ್
ಡಿಕಂಪನಿ Instagram Page ನಲ್ಲಿ ಬಿಡುಗಡೆ ಮಾಡಿರುವ Promo Video ದಲ್ಲಿ ವಿಜಯಲಕ್ಷ್ಮೀ ಅವರು ‘ಡೆವಿಲ್’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಡೆವಿಲ್ ಸಿನಿಮಾ ಭರ್ಜರಿ Success ಕಂಡಿದೆ. ದರ್ಶನ್ ಅವರನ್ನು ಹಾಗೂ ಅವರ ಸಿನಿಮಾಗಳನ್ನು ಅಭಿಮಾನಿಗಳು ಸದಾ ತಲೆಮೇಲೆ ಇಟ್ಟುಕೊಂಡು ಮೆರೆಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಚಿನ್ನದ ಬೆಲೆ ಹೊಸ ದಾಖಲೆ – ಬೆಳ್ಳಿ ಬೆಲೆ ಇಳಿಕೆ
ಮಹಿಳೆಗೆ ಹೇಗೆ ಗೌರವ ಕೊಡಬೇಕು ಅಂತ ಗೊತ್ತಿದೆ
ಇದೇ ವೇಳೆ, Darshan ಅಭಿಮಾನಿಗಳ ಪರವಾಗಿ ವಿಜಯಲಕ್ಷ್ಮೀ ಬ್ಯಾಟ್ ಬೀಸಿದ್ದು, ದರ್ಶನ್ ಫ್ಯಾನ್ಸ್ಗೆ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. ಅವರು ಹೇಗೆ ವರ್ತಿಸಬೇಕು ಎಂಬ ಅರಿವು ಕೂಡ ಅವರಿಗಿದೆ. Negative ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಡಿಸೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾದ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, Box Office ನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇದನ್ನು ನೋಡಿ : ನ್ಯೂ ಇಯರ್ ಪಾರ್ಟಿಗೆ ಪಬ್ ಬುಕ್ ಮಾಡೋ ಮುನ್ನ ಎಚ್ಚರ – ಏಕೆ ಗೊತ್ತೇ?




