Actor Zaid Khan: ಜನವರಿಯಲ್ಲಿ ದರ್ಶನ್ಗೆ ಜಾಮೀನು ಸಿಗುವ ನಿರೀಕ್ಷೆಯಿದೆ. ಇಲ್ಲದಿದ್ರೆ ನಾನೇ ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ ಎಂದು ನಟ ಝೈದ್ ಖಾನ್ ಹೇಳಿದ್ದಾರೆ.

Actor Zaid Khan: ದರ್ಶನ್ ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆಯಿದ್ದು, ಜಾಮೀನು ಸಿಗದಿದ್ದರೆ ತಾವು ಖುದ್ದಾಗಿ ಜೈಲಿಗೆ ಹೋಗಿ ದರ್ಶನ್ ಅಣ್ಣನ ಆಶೀರ್ವಾದ ಪಡೆದು ಬರುತ್ತೇನೆ ಎಂದು ನಟ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಹೇಳಿದ್ದಾರೆ.
ಹಾವೇರಿಯಲ್ಲಿ ‘ಕಲ್ಟ್’ ಪ್ರಮೋಷನ್: ದರ್ಶನ್ ಅಣ್ಣನಿಗೆ ಜನವರಿಯಲ್ಲಿ ಬೇಲ್ ವಿಶ್ವಾಸ
ಹಾವೇರಿಯಲ್ಲಿ ನಡೆದ ಕಲ್ಟ್ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋವಿನ ನಡುವೆಯೂ ದರ್ಶನ್ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ನೀಡಿದ್ದಾರೆ.
ದರ್ಶನ ಎಂಬ ಹೆಸರಿನಿಂದ ಸಿನಿಮಾ ಮಾಡಿದರೆ ಅದು ಸಕ್ಸಸ್ ಆಗೇ ಆಗುತ್ತದೆ. ಈ ಮಾತನ್ನು ನಾನು ಡೆವಿಲ್ ಸಿನಿಮಾ ನೋಡಿ ಕಲಿತೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.
ದರ್ಶನ್ ಹೆಸರೇ ಸಕ್ಸಸ್ ಬ್ರ್ಯಾಂಡ್
ಇನ್ನೂ, ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜಕೀಯ ಕಾಂಟ್ರವರ್ಸಿಗಳು ನನ್ನ ಸಿನಿಮಾಗೆ “ಖಂಡಿತವಾಗಿಯೂ ಪರಿಣಾಮವಾಗಿದೆ. ನನ್ನ ಹಿಂದಿನ ಸಿನಿಮಾಗೆ ಅವರ ರಾಜಕೀಯ ಬೆಳವಣಿಗೆಯಿಂದ ತೊಂದರೆಯಾಗಿದೆ.
ಜಮೀರ್ ಅವರ ರಾಜಕೀಯ ಕಾಂಟ್ರವರ್ಸಿಗಳ ಕಾರಣದಿಂದ ನನ್ನ ಸಿನಿಮಾವನ್ನು ಕೆಲವರು ಬಾಯ್ಕಾಟ್ ಮಾಡಿದರು. ಮನಸ್ಸಿನಲ್ಲಿ ಕೆಲವು ಮಾತುಗಳಿವೆ, ಆದರೆ ಅವನ್ನು ಈಗ ಹೇಳಲು ಸಾಧ್ಯವಿಲ್ಲ. ಗೆದ್ದ ಮೇಲೆ ಹೇಳಿದರೆ ಅದಕ್ಕೆ ತೂಕ ಇರುತ್ತದೆ. ಗೆದ್ದ ಬಳಿಕ ಎಲ್ಲವನ್ನೂ ಹೇಳುತ್ತೇನೆ” ಎಂದರು.
ಇದನ್ನೂ ಓದಿ : ಜೈಲಿನಲ್ಲಿರುವ ದರ್ಶನ್ಗೆ ಹೆಚ್ಚುವರಿ ಸೌಲಭ್ಯ ನೀಡಲು ಇಂದು ಕೋರ್ಟ್ ತೀರ್ಪು!

ಪೈರಸಿ ಮಾಡಿದ್ರೆ ಬಿಡಲ್ಲ: ಕಠಿಣ ಎಚ್ಚರಿಕೆ ನೀಡಿದ ಝೈದ್ ಖಾನ್
ಪೈರಸಿ ಕುರಿತು ಪ್ರತಿಕ್ರಿಯಿಸಿದ ಅವರು, “ಪೈರಸಿ ಮಾಡುವವರು ಮಾಡಲಿ, ಬೇಡ ಅಂದ್ರೆ ಬಿಡ್ತಾರಾ? ಅದು ಅವರ ಕೆಲಸ. ಆದರೆ ಅಪ್ಪಿತಪ್ಪಿ ಸಿಕ್ಕಿಬಿದ್ದರೆ ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.
ಕಲ್ಟ್ ಸಿನಿಮಾದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಝೈದ್ ಖಾನ್, ಪ್ರೇಕ್ಷಕರ ಬೆಂಬಲವೇ ತಮ್ಮ ಗೆಲುವಿನ ಶಕ್ತಿ ಎಂದು ಅಭಿಪ್ರಾಯಪಟ್ಟರು.
MUST WATCH: DEVIL COLLECTION ?| ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸ್ತಿದೆ DEVIL – 2ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?




