
BANGALORE : ಕೋರ್ಟ್ ಆದೇಶವಿದ್ದರೂ ಕೂಡ ಹೆಚ್ಚುವರಿ ದಿಂಬು, ಹಾಸಿಗೆ ಮೊದಲಾದ ಮೂಲಭೂತ ಸೌಲಭ್ಯಗಳನ್ನು ನೀಡದಿರುವುದಕ್ಕೆ ಸಂಬಂಧಿಸಿ ಜೈಲಾಧಿಕಾರಿಗಳ ವಿರುದ್ಧ ನಟ ದರ್ಶನ್ ಪರ ವಕೀಲರು ಸೆಷನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ಗೆ ಕಾನೂನುಬದ್ಧ ಸೌಲಭ್ಯಗಳು ಸಿಗದೆ, ಕಳೆದ ಒಂದು ತಿಂಗಳಿನಿಂದ ಕ್ವಾರಂಟೈನ್ ಬ್ಯಾರೆಕ್ನಲ್ಲಿ ನಿರ್ಬಂಧಿತ ಸ್ಥಿತಿಯಲ್ಲಿ ಇರಿಸಲಾಗಿದೆ ಎಂಬ ಆರೋಪವಿದೆ.
ವಕೀಲರ ಪ್ರಕಾರ, ದರ್ಶನ್ ಮುಂದೆ 24 ಗಂಟೆಗಳ ಕಾಲ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ಇದು ಖಾಸಗಿ ಜೀವನದ ಹಕ್ಕಿಗೆ ಧಕ್ಕೆ ತರುತ್ತದೆ. ಜೈಲಿನೊಳಗಿನ ದೈನಂದಿನ ಚಟುವಟಿಕೆಗಳಲ್ಲೂ ಸ್ವಾತಂತ್ರ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಎಲ್ಲವನ್ನೂ ಪರಿಶೀಲಿಸಿದ ನ್ಯಾಯಾಲಯ ಇಂದು ಈ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ನೀಡಲಿದೆ. ಜೈಲಿನಲ್ಲೂ ನೆಮ್ಮದಿಯ ನಿದ್ದೆಗೆ ಹಕ್ಕು ಬೇಕೆಂಬ ಪ್ರಶ್ನೆಗೆ ನ್ಯಾಯಾಲಯದ ತೀರ್ಪು ಉತ್ತರ ನೀಡಲಿದೆಯೇ ಎಂಬುದು ಈಗ ಕುತೂಹಲದ ವಿಷಯ.




