ಪ್ರೇಮಿಗಳ ಪರ ಮಾತನಾಡಿದ್ದಕ್ಕೆ ಮಾರಕಾಸ್ತ್ರದಿಂದ ಇರಿದು ಇಬ್ಬರ Murder ಮಾಡಿದ್ದಾರೆ.

ಪ್ರೇಮಿಗಳ ಪರ ಮಾತನಾಡಿದ್ದಕ್ಕೆ ಮಾರಕಾಸ್ತ್ರದಿಂದ ಇರಿದು ಇಬ್ಬರನ್ನು Murder ಮಾಡಿರುವ ಘಟನೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜೈ ಭೀಮ್ ನಗರದಲ್ಲಿ ನಡೆದಿದೆ. ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹತ್ಯೆಯಾದವರನ್ನು ನಗರದ ಕಿರಣ್ (25) ಮತ್ತು ಮಂಜುನಾಥ್ (45) ಎಂದು ಗುರುತಿಸಲಾಗಿದೆ.

ಇದನ್ನು ಓದಿ : ಆಂಧ್ರದಲ್ಲಿ ಭೀಕರ Accident – 8 ಜನ ಸಾವು
ಪ್ರೇಮಿಗಳ ವಿಚಾರಕ್ಕೆ ರಕ್ತಪಾತ
2 ದಿನದ ಹಿಂದೆ ಮನೆ ತೊರೆದಿದ್ದ ಪ್ರೇಮಿಗಳು ಶುಕ್ರವಾರ ಸಂಜೆ ಹಳೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗನ ಸ್ನೇಹಿತರ ಮೇಲೆ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ದಾಳಿ ಮಾಡಿದ್ದಾರೆ. ಜಗಳ ನಿಲ್ಲಿಸಲು ಹೋದಾಗ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾರೆ.

ಹತ್ಯೆ, ಕಾರಣವೇನು?
ಹುಡುಗಿ ಹುಡುಗನೊಂದಿಗೆ ಓಡಿ ಹೋಗುವಾಗ ಇವರಿಬ್ಬರು ಸಹಕರಿಸಿದ್ದಾರೆ ಎಂಬ ಕಾರಣಕ್ಕೆ ದಾಳಿ ನಡೆದಿರುವುದು ತಿಳಿದುಬಂದಿದೆ. ಇನ್ನು ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನು ನೋಡಿ : ತುಮಕೂರಿಗರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರ — ಪೊಲೀಸರು ವಶಕ್ಕೆ ಪಡೆದಿರೋ ಗಾಂಜಾ ಕಥೆ ಕೇಳಿದ್ರೆ ಶಾಕ್ ಆಗ್ತೀರಾ




