ಭೀಕರ ರಸ್ತೆ Accident ಆಂಧ್ರಪ್ರದೇಶದಲ್ಲಿ ಸಂಭವಿಸಿದೆ.

ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 8 ಜನರು ಮೃತಪಟ್ಟಿದ್ದಾರೆ. ಅಲ್ಲೂರಿ ಜಿಲ್ಲೆಯ ಚಿಂತೂರು-ಮರೆಡುಮಿಲ್ಲಿ ಘಾಟ್ ರಸ್ತೆಯ ರಾಜುಗರಿಮೆಟ್ಟ ತಿರುವಿನಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ.
8 ಮಂದಿ ದಾರುಣ ಸಾವು
ಚಿತ್ತೂರು ಜಿಲ್ಲೆಯ ಖಾಸಗಿ ಪ್ರಯಾಣಿಕ ಬಸ್ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ. ಬಸ್ ಯಾತ್ರಿಕರಿಂದ ತುಂಬಿತ್ತು ಎಂದು ತೋರುತ್ತದೆ. ಭದ್ರಾಚಲಂ ರಾಮ ದೇವಾಲಯದ ದರ್ಶನ ಮುಗಿಸಿ ಅನ್ನಾವರಂ ಕಡೆಗೆ ತೆರಳುತ್ತಿದ್ದಾಗ ಈ ಭೀಕರ Accident ಸಂಭವಿಸಿದೆ. ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನು ನೋಡಿ : VISHWAS JEWELLERS ನಿಂದ MUSICAL NIGHT – ಅಬ್ಬಬ್ಬಾ…ಯಾರ್ ಯಾರ್ ಬರ್ತಿದಾರೆ ಗೊತ್ತಾ

ಗಾಯಾಳುಗಳನ್ನು ಚಿಂತೂರು ಆಸ್ಪತ್ರೆಗೆ ಸ್ಥಳಾಂತರ
ಬಸ್ನಲ್ಲಿ ಪ್ರಯಾಣಿಸುತ್ತಿದ್ದವರು ಚಿತ್ತೂರು ಜಿಲ್ಲೆಯವರು ಎಂದು ವರದಿಯಾಗಿದೆ. ಚಿಂತೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳದಲ್ಲಿ ಪ್ರಯಾಣಿಕರು ಕಿರುಚಾಟ ಕೇಳಿದೆ. ಬಸ್ನಲ್ಲಿ ಒಟ್ಟು 35 ಪ್ರಯಾಣಿಕರು ಮತ್ತು ಇಬ್ಬರು ಚಾಲಕರು ಇದ್ದರು.
ಈ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಚಿಂತೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಿಂದಾಗಿ ಚಿಂತೂರು-ಮರೆಡುಮಿಲ್ಲಿ ಘಾಟ್ ರಸ್ತೆಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಇದನ್ನು ಓದಿ : ಸಬ್ಸಿಡಿ ಮಂಜೂರಿಗಾಗಿ ಲಂಚಕ್ಕೆ ಡಿಮ್ಯಾಂಡ್ – DIC ಜಂಟಿ ಅಧಿಕಾರಿಗಳು ಲೋಕಾ ಬಲೆಗೆ




