Haveri : ಕಾಮುಕ ಶಿಕ್ಷಕನಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ.

ಶಿಕ್ಷಕ ಅಂದ್ರೆ ದೇವ ಸಮ, ಶಿಕ್ಷಕರು ಜ್ಞಾನದ ದಾರಿ ತೋರಿಸುವ ದೇವರ ನೆರಳು ಇದ್ದಂತೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕಾದ್ರೆ ಶಿಕ್ಷಕನ ಪಾತ್ರ ದೊಡ್ಡದಾಗಿರುತ್ತೆ. ಆದ್ರೆ ಶಿಕ್ಷಕನೇ ಹಾದಿ ತಪ್ಪಿದ್ರೆ ಸಮಾಜ ಯಾವ ರೀತಿ ಹಾದಿ ತಪ್ಪುತ್ತೆ ಅನ್ನೋದನ್ನ ನಾವು ಹೇಳಬೇಕಿಲ್ಲ.
ಇಲ್ಲೊಬ್ಬ ಶಿಕ್ಷಕ ತನ್ನ ಮಕ್ಕಳಂತೆ ಇರುವ ವಿದ್ಯಾರ್ಥಿನಿಯರಿ ಕಿರುಕುಳ ನೀಡಿದ್ದಾನೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ದೇ ಕಾಮುಕ ಶಿಕ್ಷಕನಿಗೆ ಸಾರ್ವಜನಿಕರು ತಕ್ಕಶಾಸ್ತಿ ಮಾಡಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ.
ಇವನು ಪಾಠ ಕಲಿಸುವ ಶಿಕ್ಷಕನಲ್ಲ..ಕಾಮ ಪಿಶಾಚಿ
ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟು, ಧರ ದರ ಏಳೆದುಕೊಂಡು ಹೋಗ್ತಾ ಇರೋ ವ್ಯಕ್ತಿಯ ಹೆಸರು ಜಗದೀಶ್ ಅಂತಾ. Haveri ಜಿಲ್ಲೆಯ ಸವಣೂರು ಪಟ್ಟಣದ ಉರ್ದು ಶಾಲೆಯ ಶಿಕ್ಷಕ. ವೃತ್ತಿ ಧರ್ಮ, ಮಾನವೀಯತೆ ಇದಿದ್ರೆ ಇವತ್ತು ಉತ್ತಮ ಶಿಕ್ಷಕನಾಗಿ ಇರ್ತಿದ್ದ. ಆದ್ರೆ ಮಕ್ಕಳಿಗೆ ಒಳ್ಳೆಯ ಬುದ್ದಿ ಹೇಳುವ ಶಿಕ್ಷಕ ಹಾದಿ ತಪ್ಪಿ, ಶಾಲಾ ವಿದ್ಯಾರ್ಥಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಮೂರು ಕಾಸಿಗೆ ಮರ್ಯಾದೆ ಕಳೆದುಕೊಂಡಿದ್ದಾನೆ. ಮಾಡಿದ ಪಾಪದ ಕೆಲಸಕ್ಕೆ ಶಿಕ್ಷಕ ಜಗದೀಶ್ನನ್ನು ಪೋಷಕರು ಹಾಗೂ ಸಾರ್ವಜನಿಕರು ದರ ದರನೇ ಎಳೆದುಕೊಂಡು ಹೋಗಿದ್ದಾರೆ.
ಇದನ್ನು ಓದಿ : Dina Bhavishya : ದಿನ ಭವಿಷ್ಯ 11 ಡಿಸೆಂಬರ್ 2025

ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಜನರು
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಉರ್ದು ಶಾಲೆಯಲ್ಲಿ ಶಿಕ್ಷಕನಾಗಿರೋ ಜಗದೀಶ್, ಶಾಲಾ ವಿದ್ಯಾರ್ಥಿಯರ ಖಾಸಗಿ ಅಂಗಗಳನ್ನು ಮುಟ್ಟಿ, ತನ್ನ ತೀಟೆಯನ್ನು ತೀರಿಸಿಕೊಳ್ಳುತ್ತಿದ್ನಂತೆ ಅಂತಾ ಊರಿನ ಗ್ರಾಮಸ್ಥರು ಹಾಗೂ ಪೋಷಕರು ಆರೋಪ ಮಾಡಿದ್ರು. ಇನ್ನು ಅದ್ಯಾವಾಗ ಶಿಕ್ಷಕನ ಕಾಮಚೇಷ್ಠೆ ಬಗ್ಗೆ ಜನರಿಗೆ ಗೊತ್ತಾಯ್ತೋ, ಸೀದಾ ಸ್ಕೂಲ್ ಹತ್ತಿರ ಹೋಗಿ ಶಿಕ್ಷಕನಿಗೆ ಧರ್ಮದೇಟು ಕೊಟ್ಟು, ಚಪ್ಪಲಿ ಹಾರ ಹಾಕಿ, ಶಾಲೆಯಿಂದ ಪೊಲೀಸ್ ಠಾಣೆವರೆಗೂ ಮೆರವಣಿಗೆ ಮೂಲಕ ಶಿಕ್ಷಕನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಮುಕ ಶಿಕ್ಷಕನಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ
ನೀಚ ಶಿಕ್ಷಕನ ಕೆಲಸಕ್ಕೆ ಜನರ ಆಕ್ರೋಶ ಹೆಚ್ಚಾಗಿದ್ದು, ದಾರಿಯುದ್ಧಕ್ಕೂ ಶಿಕ್ಷಕನಿಗೆ ಧರಧರ ಹೊಡೆದುಕೊಂಡು ಬಂದಿದ್ದಾರೆ. ಸದ್ಯ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ. ಅದೇನೆ ಆಗಲಿ ಶಿಕ್ಷಕ ಅಂದ್ರೆ ದೇವ ಸಮಾನ ಅಂತಾರೆ, ಆದ್ರೆ ಶಿಕ್ಷಕನಾಗಿದ್ದುಕೊಂಡು ಶಿಕ್ಷಕ ವೃತ್ತಿಗೆ ಅಧರ್ಮ ತರುವಂತ ಕೆಲಸ ಮಾಡಿದ್ದು ಮಾತ್ರ ದುರಂತ.

ಇದನ್ನು ನೋಡಿ : THE DEVIL MOVIE | ತುಮಕೂರಿನಲ್ಲಿ ದಚ್ಚು ಅಭಿಮಾನಿಗಳ ಅಬ್ಬರ- ಕ್ರೇಜ್ ನೋಡಿ ಉರ್ಕೊಳ್ಳೊರು ಉರ್ಕೊಳಿ




