Chikkaballapura : ಪ್ರೇಮಿಗಳ ಬಾಳಿಗೆ ಬೆಳಕಾದ Sub-Inspector

ಇತ್ತೀಚಿನ ದಿನಗಳಲ್ಲಿ ಯುವ ಪ್ರೇಮಿಗಳು ಮನೆಯವರನ್ನು ಎದುರು ಹಾಕಿಕೊಂಡು ಪ್ರೀತಿಸುತ್ತಾರೆ. ಮನೆಯವರು ಒಪ್ಪದಿದ್ದಾಗ ದೇವಸ್ಥಾನಕ್ಕೆ ಹೋಗಿ ಮದುವೆ ಆಗಿಬಿಡ್ತಾರೆ. ಮತ್ತೆ ಕೆಲವೊಮ್ಮೆ ಪೊಲೀಸರ ಮೊರೆ ಹೋಗಿ ನಮಗೆ ರಕ್ಷಣೆ ಬೇಕು ಎಂದು ಬೇಡಿಕೊಳ್ತಾರೆ.
ಇತ್ತ Chikkaballapura ಜಿಲ್ಲೆಯ ಶಿಡ್ಲಘಟ್ಟದ ಸಿದ್ಧಾರ್ಥ ನಗರದ ನಿವಾಸಿಗಳಾದ ಯುವ ಪ್ರೇಮಿಗಳು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಓಡಿ ಹೋಗಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಈ ಸಂಬಂಧವಾಗಿ ಎರಡು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ Complent ದಾಖಲಾಗಿತ್ತು. ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು ಪ್ರೇಮಿಗಳನ್ನು ಪತ್ತೆ ಹಚ್ಚಿದ್ದರು.
ಪ್ರೇಮಿಗಳ ಬಾಳಿಗೆ ಬೆಳಕಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್
ಪ್ರೇಮಿಗಳಿಬ್ಬರು ಪ್ರೀತಿಸಿ, ಮನೆಯವರು ಒಪ್ಪದಿದ್ದಾಗ ಧರ್ಮಸ್ಥಳದಲ್ಲಿ ಮದುವೆಯಾಗಿದ್ರು. ಕಂಪ್ಲೈಂಟ್ ಕೊಟ್ಟಿದ್ದ ಕಾರಣ, ಶಿಡ್ಲಘಟ್ಟ ಪೊಲೀಸರು ಪ್ರೇಮಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು. ಇಬ್ಬರೂ ತಮ್ಮ ಇಷ್ಟದಂತೆ ಮದುವೆಯಾಗಿರುವುದನ್ನು ಖಚಿತಪಡಿಸಿಕೊಂಡ ನಂತರ, ಮಹಿಳಾ ಪ್ರಪಂಚ ಶಕ್ತಿ ರಾಜ್ಯ ಅಧ್ಯಕ್ಷರ ಮುಖಂಡತ್ವದಲ್ಲಿ ನವ ವಧುವವರು ಹೂವಿನ ಹಾರವನ್ನು ಬದಲಾಯಿಸಿಕೊಂಡು, ಕಾನೂನು ಬದ್ಧವಾಗಿ ಜೊತೆಯಾಗಿರಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಇದನ್ನು ಓದಿ : ಪುಟ್ಟ ಬಾಲಕಿ ಬಾಳಿಗೆ ಯಮನಾದ ಬಸ್

ಇವರಿಬ್ಬರು ಧರ್ಮಸ್ಥಳದಲ್ಲಿ ಮಧುವೆಯಾಗಿದ್ದರು
ಇನ್ನು ಈ ಕುರಿತು ಸ್ವತಃ PSI ವೇಣುಗೋಪಾಲ್ ಮಾತನಾಡಿ, ಇವರಿಬ್ಬರು ಕೂಡ ಧರ್ಮಸ್ಥಳದಲ್ಲಿ ಮಧುವೆಯಾಗಿದ್ದರು. ಕಂಪ್ಲೈಂಟ್ ಬಂದ ಕಾರಣ ನಾವು ಹೋಗಿ ಅವರನ್ನು ಕರೆದುಕೊಂಡು ಬಂದಿದ್ದೇವು. ಇದೀಗ ಪೊಲೀಸ್ ಠಾಣೆಯ ಮುಂದೆ ಎಲ್ಲರ ಸಮ್ಮುಖದಲ್ಲಿ ಹಾರವನ್ನು ಬದಲಾಯಿಸಿಕೊಂಡಿದ್ದಾರೆ ಎಂದರು.
ನೂತನ ದಂಪತಿಗಳಿಗೆ ಹೆಲ್ಮೆಟ್ ನೀಡಿ ಆಶೀರ್ವಾದ
ಇದೇ ವೇಳೆ ವೇಣುಗೋಪಾಲ್ ಅವರು, ಯುವ ಪ್ರೇಮಿಗಳಿಗೆ ಹೆಲ್ಮೆಟ್ ವಿತರಿಸಿ, ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಸಲಹೆ ನೀಡಿದರು. ಈ ವೇಳೆ ಸಿಹಿ ವಿತರಿಸಲಾಯಿತು. ಬಂದಿದ್ದವರೆಲ್ಲ ನವ ಜೋಡಿಗಳಿಗೆ ಆಶೀರ್ವಾದ ಮಾಡಿದರು.

ಇದನ್ನು ನೋಡಿ : ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್ ವಾರ್ಡನ್ ನೇಮಕಕ್ಕೆ ಕ್ರಮ – ಜಮೀರ್




