Kitchen Recipe : ಉತ್ತರ ಭಾರತದ ಡಾಬಾಗಳಲ್ಲಿ ದೊರೆಯುವ ಎಣ್ಣೆ-ಮಸಾಲೆ ಸುವಾಸನೆಯ Paneer Bhurji Gravy ಈಗ ನಿಮ್ಮ ಮನೆಯಲ್ಲೇ ಸುಲಭವಾಗಿ ತಯಾರಿಸಲು ಸಾಧ್ಯ.

Kitchen Recipe : ಬೇಕಾಗುವ ಪದಾರ್ಥಗಳು
ಮುಖ್ಯ ಪದಾರ್ಥಗಳು
- ಪನ್ನೀರ್ – 300 ಗ್ರಾಂ (ತುರಿ)
- ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ)
- ಟೊಮೆಟೋ – 2 (ಸಣ್ಣದಾಗಿ ಹೆಚ್ಚಿದ)
- ಹಸಿಮೆಣಸಿನಕಾಯಿ – 3
- ಶುಂಠಿ – ಸ್ವಲ್ಪ
- ಕೊತ್ತಂಬರಿಸೊಪ್ಪು – ಸ್ವಲ್ಪ
- ನಿಂಬೆರಸ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
ಮಸಾಲೆ ಮತ್ತು ಇತರ ಪದಾರ್ಥಗಳು
- ಕಡಲೇಹಿಟ್ಟು – 2 ಚಮಚ
- ಅರಿಶಿಣಪುಡಿ – ಅರ್ಧ ಚಮಚ
- ಬ್ಲಾಕ್ ಸಾಲ್ಟ್ – ಅರ್ಧ ಚಮಚ
- ಕಸೂರಿ ಮೇಥಿ – 1 ಚಮಚ
- ದನಿಯಾಪುಡಿ – 1 ಚಮಚ
- ಅಚ್ಚಖಾರದಪುಡಿ – 1 ಚಮಚ
- ಗರಂ ಮಸಾಲ – 1 ಚಮಚ
- ಕಾಶ್ಮೀರಿ ಚಿಲ್ಲಿ ಪೌಡರ್ – 1 ಚಮಚ
- ಜೀರಿಗೆ – ಅರ್ಧ ಚಮಚ
- ಮೊಸರು – ¾ ಬಟ್ಟಲು
- ಹಾಲು – ¼ ಬಟ್ಟಲು
- ತುಪ್ಪ – 4 ಚಮಚ
- ಬೆಣ್ಣೆ – 2 ಚಮಚ
ಮಾಡುವ ವಿಧಾನ – Step-by-Step Preparation
1. ಕಡಲೇಹಿಟ್ಟಿನ ಮಸಾಲೆ ಮಿಶ್ರಣ
ಮೊದಲಿಗೆ ಪ್ಯಾನ್ನಲ್ಲಿ 2 ಚಮಚ ಕಡಲೇಹಿಟ್ಟು ಹಾಕಿ ಲೋ ಫ್ಲೇಮ್ನಲ್ಲಿ ಸುವಾಸನೆ ಬರುವವರೆಗೂ ಹುರಿಯಿರಿ.
ಸ್ವಲ್ಪ ಬಣ್ಣ ಬದಲಾದಾಗ ಒಂದು ಬೌಲ್ಗೆ ತೆಗೆದುಕೊಳ್ಳಿ.
ಈ ಹುರಿದ ಕಡಲೇಹಿಟ್ಟಿಗೆ:
- ಅರಿಶಿಣ
- ಬ್ಲಾಕ್ ಸಾಲ್ಟ್
- ಕಸೂರಿ ಮೇಥಿ
- ದನಿಯಾಪುಡಿ
- ಅಚ್ಚಖಾರದಪುಡಿ
- ಗರಂ ಮಸಾಲ
ಇವೆಲ್ಲ ಸೇರಿಸಿ ಚೆನ್ನಾಗಿ ಪುಡಿ ಮಾಡಿ.
ಈ ಪೌಡರ್ಗೆ ಮೊಸರು + ಹಾಲು ಸೇರಿಸಿ ಮೃದುವಾದ ಮಸಾಲೆ ಮಿಶ್ರಣ ತಯಾರಿಸಿ.
2. ಡಾಬಾ ಸ್ಟೈಲ್ ಕಾಶ್ಮೀರೀ ರೆಡ್ ತಡ್ಕಾ
ಪ್ಯಾನ್ನಲ್ಲಿ 2 ಚಮಚ ತುಪ್ಪ ಹಾಕಿ.
ತುಪ್ಪ ಕರಗಿದ ನಂತರ ಕಾಶ್ಮೀರಿ ಚಿಲ್ಲಿ ಪೌಡರ್ ಹಾಕಿ ಬೆಚ್ಚಗೆ ಮಾಡಿ.
ಸ್ಟೌವ್ ಆಫ್ ಮಾಡಿ ಈ ತಡ್ಕಾನ್ನನ್ನು ಮೊಸರಿನ ಮಸಾಲೆ ಮಿಶ್ರಣಕ್ಕೆ ಸೇರಿಸಿ.
ಇದರಿಂದ ಡಾಬಾ ಸ್ಟೈಲ್ ಸುವಾಸನೆ ಬರುತ್ತದೆ.
3. ಈರುಳ್ಳಿ-ಟೊಮೆಟೋ ಬೇಸ್ ತಯಾರಿ
ಮತ್ತೊಂದು ಪ್ಯಾನ್ನಲ್ಲಿ:
- 2 ಚಮಚ ತುಪ್ಪ
- 2 ಚಮಚ ಬೆಣ್ಣೆ
ಹರಿದು ಬಿಸಿ ಮಾಡಿಕೊಳ್ಳಿ.
ನಂತರ:
- ಜೀರಿಗೆ
- ಈರುಳ್ಳಿ
- ಹಸಿಮೆಣಸಿನಕಾಯಿ
- ಶುಂಠಿ
ಇವೆಲ್ಲ ಹಾಕಿ ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಿ.
ಇದಕ್ಕೆ ಟೊಮೆಟೋ ಸೇರಿಸಿ ಮೆತ್ತಗೆ ಆಗುವವರೆಗೆ ಬೇಯಿಸಿ.
4. ಮಸಾಲೆ ಸೇರಿಸಿ ಗ್ರೇವಿ ತಯಾರಿಸಿ
ಈರುಳ್ಳಿ-ಟೊಮೆಟೋ ಬೇಸ್ಗೆ ತಯಾರಿಸಿದ ಮೊಸರು-ಕಡಲೇಹಿಟ್ಟು ಮಸಾಲೆ ಮಿಕ್ಸ್ ಸೇರಿಸಿ.
ನಂತರ ಉಪ್ಪು ಮತ್ತು ಕೊತ್ತಂಬರಿ ಹಾಕಿ 2-3 ನಿಮಿಷ ಬೇಯಿಸಿ.
ಸ್ವಲ್ಪ ಬಿಸಿ ನೀರು (¼ ಕಪ್) ಸೇರಿಸಿ ಗ್ರೇವಿಯನ್ನು ಕುದಿಸಿಕೊಳ್ಳಿ.
(ಐಚ್ಛಿಕ: ಹಸಿ ಬಟಾಣಿ ಸೇರಿಸಬಹುದು)
5. ಪನ್ನೀರ್ ಸೇರಿಸಿ ಅಂತಿಮ ಕುದಿತ
ಗ್ರೇವಿ ಕುದಿ ಬರಲು ಶುರುವಾದಾಗ ಪನ್ನೀರ್ ತುರಿ ಸೇರಿಸಿ.
ಸ್ವಲ್ಪ ಬಿಸಿ ನೀರು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
ಕೊನೆಯಲ್ಲಿ ನಿಂಬೆರಸ ಹಾಕಿದರೆ ಸುಪರ್ ಪಂಜಾಬಿ ಮತ್ತು ಡಾಬಾ ಫ್ಲೇವರ್ ಬರುತ್ತದೆ.
ಸವಿಯಲು ಸಿದ್ಧ – ರುಚಿಕರ ಡಾಬಾ ಸ್ಟೈಲ್ ಪನ್ನೀರ್ ಬುರ್ಜಿ ಗ್ರೇವಿ
ಈ Dhaba Style Paneer Bhurji Gravy ನಾನ್, ರೋಟಿ, ಜೋಳ ರೊಟ್ಟಿ, ಚಪಾತಿ, ಪುಲ್ಕಾ ಜೊತೆಗೆ ಸವಿಯಬಹುದು.
ಸುವಾಸನೆ, ರುಚಿ ಮತ್ತು ಡಾಬಾ ಫ್ಲೇವರ್ – ಮನೆಲ್ಲೇ ರೆಸ್ಟ್ರೆಂಟ್ ಅನುಭವ!




