
NEWDELHI:ಕೊರೊನಾ ನಂತರದ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದ ಆನ್ಲೈನ್ ಹಾಗೂ ದೂರ ಶಿಕ್ಷಣದ ವಲಯಕ್ಕೆವಿಶ್ವವಿದ್ಯಾಲಯ ಅನುದಾನ ಆಯೋಗ (UGC)ಇದೀಗ ನಿಯಂತ್ರಣ ಹೇರಿದೆ. ಯೋಗ, ಪ್ರವಾಸೋದ್ಯಮ ಮತ್ತು ಆತಿಥ್ಯ (Hospitality) ಸೇರಿದಂತೆ ಹಲವು ವಿಷಯಗಳಲ್ಲಿ ಆನ್ಲೈನ್ ಹಾಗೂ ದೂರ ಶಿಕ್ಷಣವನ್ನು ನಿಷೇಧಿಸುವ ಕುರಿತು ಯುಜಿಸಿ ಅಧಿಸೂಚನೆ ಹೊರಡಿಸಿದೆ.
ಹೌದು..UGC 2025 ಜುಲೈ–ಆಗಸ್ಟ್ ಸೆಷನ್ ರಿಂದ ಈ ನಿಷೇಧ ಪ್ರಭಾವಿ ಆಗಲಿದೆ. ಈ ಕುರಿತಂತೆ 2024ರ ಸೆಪ್ಟೆಂಬರ್ 18ರಂದು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಅಧಿಸೂಚನೆಯಂತೆ, ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗ, ಪ್ರವಾಸೋದ್ಯಮ (Tourism), ಆತಿಥ್ಯ ಸೇವೆ (Hospitality) ವಿಷಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಆನ್ಲೈನ್ ಅಥವಾ ದೂರ ಶಿಕ್ಷಣದ ಮೂಲಕ ಪ್ರವೇಶವನ್ನು ನೀಡಲಾಗದು ಎಂದು ಹೇಳಿದ್ದಾರೆ.
ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಅವರ ಪ್ರಕಾರ, ಈ ವಿಷಯಗಳು ಪ್ರಾಯೋಗಿಕ ತರಬೇತಿ, ಲ್ಯಾಬ್ ವರ್ಕ್ ಮತ್ತು ನೈಜ ಅನುಭವಕ್ಕೆ ಆಧಾರಿತವಾಗಿರುವುದರಿಂದ, ಆನ್ಲೈನ್ ಅಥವಾ ದೂರಶಿಕ್ಷಣದ ಮೂಲಕ ಗುಣಮಟ್ಟದ ಶಿಕ್ಷಣ ನೀಡುವುದು ಅಸಾಧ್ಯ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯುಜಿಸಿ ಈಗಾಗಲೇ ಅನುಮತಿ ನೀಡಿರುವ ಯಾವುದೇ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳು ಈ ನಿಷೇಧಕ್ಕೆ ಒಳಪಡುವಂತೆಯೇ ಆಗಿದ್ದು, ಅವುಗಳ ಅನುಮತಿಗಳೂ ಹಿಂಪಡೆಯಲಾಗುತ್ತವೆ ಎಂದು ತಿಳಿಸಲಾಗಿದೆ.




