ಇಂಡಿಗೋ ಸಮಸ್ಯೆಯಿಂದ ಪರದಾಡ್ತಿದ್ದ ಪ್ರಯಾಣಿಕರಿಗೆ ಬಿಗ್ ರಿಲೀಫ್: ರೈಲ್ವೇ ಇಲಾಖೆಯಿಂದ ಗುಡ್ನ್ಯೂಸ್.

IndiGo Airlines ನ ಕಾರ್ಯಾಚರಣಾ ಬಿಕ್ಕಟ್ಟು ದೇಶದಾದ್ಯಂತ ಸಾವಿರಾರು ಪ್ರಯಾಣಿಕರನ್ನು ಗೊಂದಲಕ್ಕೆ ತಳ್ಳಿರುವ ನಡುವೆ, ವಿಮಾನ ರದ್ದು, ಗಂಟೆಗಟ್ಟಲೆ ವಿಳಂಬ ಹಾಗೂ ಟಿಕೆಟ್ ದರಗಳ ಭಾರಿ ಏರಿಕೆಯ ಸಮಸ್ಯೆ ತೀವ್ರಗೊಂಡಿದೆ. ದಿನಕ್ಕೆ 30–50 ವಿಮಾನಗಳು ರದ್ದಾಗುತ್ತಿರುವುದರಿಂದ ದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತ್ತಾ, ಅಹಮದಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈ ಸ್ಥಿತಿಯಲ್ಲಿ ಭಾರತೀಯ ರೈಲ್ವೇ ಇಲಾಖೆ ತ್ವರಿತ ನಿರ್ಧಾರ ತೆಗೆದುಕೊಂಡು ದೇಶದಾದ್ಯಂತ ಒಟ್ಟು 89 ವಿಶೇಷ ರೈಲುಗಳನ್ನು ಮೂರು ದಿನಗಳ ಕಾಲ ಓಡಿಸಲು ಘೋಷಿಸಿದೆ. ಇದರಿಂದ ಸಂಕಷ್ಟದಲ್ಲಿದ್ದ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಸಹಾಯ ದೊರೆಯಲಿದೆ.
ಬೆಂಗಳೂರಿನಿಂದಲೇ ಇಂದು 7 ವಿಶೇಷ ರೈಲುಗಳು
ಇಂದು ಬೆಂಗಳೂರಿನಿಂದ ಕೆಳಗಿನ 7 ವಿಶೇಷ ರೈಲುಗಳು ಕಾರ್ಯಾಚರಣೆ ಆರಂಭಿಸುತ್ತಿವೆ.
- ಬೆಂಗಳೂರು – ಚೆನ್ನೈ
- ಯಶವಂತಪುರ – ಹಜರತ್ ನಿಜಾಮುದ್ದೀನ್ (ದೆಹಲಿ)
- ಬೆಂಗಳೂರು – ಪುಣೆ
- ಬೆಂಗಳೂರು – ಎರ್ನಾಕುಲಂ
- ಬೆಂಗಳೂರು – ವಿಶಾಖಪಟ್ಟಣಂ
- ಬೆಂಗಳೂರು ಕಂಟೋನ್ಮೆಂಟ್ – ಅಜ್ಮೀರ್
- ಯಲಹಂಕ – ಸಂತ್ರಾಗಾಚಿ (ಕೊಲ್ಕತ್ತಾ)
ಈ ಎಲ್ಲಾ ರೈಲುಗಳು ಸಂಪೂರ್ಣ AC Coach ಗಳನ್ನು ಹೊಂದಿದ್ದು, ತಕ್ಷಣದ ಬುಕಿಂಗ್ಗೆ IRCTC ಆಪ್ ಮತ್ತು ವೆಬ್ಸೈಟ್ನಲ್ಲಿ ವಿಶೇಷ ಕೋಟಾ ಲಭ್ಯ.
ಪ್ರಮುಖ ನಗರಗಳಿಗೆ ಸಂಪರ್ಕ
ದೆಹಲಿ, ಮುಂಬೈ, ಕೊಲ್ಕತ್ತಾ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳು ಸಂಚಾರ ಮಾಡಲಿವೆ. ಕೇಂದ್ರ ರೈಲ್ವೇ ಸಚಿವ Ashwini Vaishnav ಅವರು “ಪ್ರಯಾಣಿಕರ ತೊಂದರೆಯನ್ನು ಗಮನಿಸಿ ತಕ್ಷಣವೇ 89 ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಇದು ಮೂರು ದಿನಗಳ ಕಾಲ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಗೋವಾದಲ್ಲಿ Fire Accident – 25 ಮಂದಿ ಸಜೀವ ದಹನ

ಪ್ರಯಾಣಿಕರಿಗೆ ನಿರಾಳ!
IndiGo Airlines ಬಿಕ್ಕಟ್ಟಿನಿಂದ ವಿಮಾನ ಟಿಕೆಟ್ ದರಗಳು 50% ಏರಿಕೆ ಕಂಡಿದ್ದು,
- ಬೆಂಗಳೂರು–ಪುಣೆ ₹7,000
- ಬೆಂಗಳೂರು–ಮುಂಭೈ ₹8,000 ತನಕ ತಲುಪಿವೆ.
ಇದರ ನಡುವೆ ರೈಲು ಟಿಕೆಟ್ ದರಗಳು ಸ್ಥಿರವಾಗಿರುವುದು ಪ್ರಯಾಣಿಕರಿಗೆ ದೊಡ್ಡ ಮಟ್ಟದ ಸಹಾಯವಾಗಿದೆ. “ವಿಮಾನ ರದ್ದಾಗಿ ಗೊಂದಲದಲ್ಲಿದ್ದಾಗ ರೈಲು ವಿಶೇಷ ಸೇವೆ ದೊಡ್ಡ ನೆರವಾಯಿತು” ಎಂದು ಬೆಂಗಳೂರಿನ ಪ್ರಯಾಣಿಕ Rajesh ತಿಳಿಸಿದ್ದಾರೆ.
ಇನ್ನಷ್ಟು ವಿಶೇಷ ರೈಲುಗಳ ಸಾಧ್ಯತೆ
ರೈಲ್ವೇ ಮೂಲಗಳ ಪ್ರಕಾರ, ಇಂಡಿಗೋದ ಬಿಕ್ಕಟ್ಟು ಮುಂದುವರಿದಲ್ಲಿ ಮತ್ತಷ್ಟು ವಿಶೇಷ ರೈಲುಗಳನ್ನು ಓಡಿಸುವ ಯೋಜನೆ ಇದೆ. ಸ್ಲೀಪರ್ ಹಾಗೂ ಎಸಿ ಕೋಚ್ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.
ಪ್ರಯಾಣಿಕರಿಗೆ ಸೂಚನೆ
ತಕ್ಷಣ IRCTC ಆಪ್/ವೆಬ್ಸೈಟ್ನಲ್ಲಿ ಬುಕ್ ಮಾಡಿಕೊಳ್ಳಿ
ಎಲ್ಲಾ ರೈಲುಗಳಲ್ಲಿ ಎಸಿ ಕೋಚ್ಗಳು ಮಾತ್ರ
ಸೀಟುಗಳು ಶೀಘ್ರ ತುಂಬುತ್ತಿರುವುದರಿಂದ advance booking ಶಿಫಾರಸು

ಇದನ್ನು ನೋಡಿ : ಹಾಸನದ ಹೃದಯತಜ್ಞ ವೈದ್ಯ DR. SHARIF ವಿರುದ್ಧ ಬೇಜವಾಬ್ದಾರಿ ಅನ್ನೋ ಗಂಭೀರ ಆರೋಪ




