Yellapur Murder Case : ಮದುವೆಗೆ ಒಪ್ಪದ ಮಹಿಳೆಯನ್ನು ಯುವಕನೊಬ್ಬ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.

Yellapur Murder Case : ಮೃತ ಮಹಿಳೆಯ ಪರಿಚಯ
ಹತ್ಯೆಗೊಳಗಾದ ಮಹಿಳೆಯನ್ನು ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾ ಎಂದು ಪೊಲೀಸರು ಗುರುತಿಸಿದ್ದಾರೆ.
ರಂಜಿತಾ ಸುಮಾರು 10 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದು, ಒಂದು ಮಗುವಿನ ತಾಯಿಯಾಗಿದ್ದರು. ಅವರು ತಮ್ಮ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದರು.
ಇದಲ್ಲದೆ, ರಂಜಿತಾ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ವಿಚ್ಛೇದನದ ಕೆಲ ತಿಂಗಳ ಬಳಿಕ ರಫೀಕ್ ಎಂಬ ಯುವಕನೊಂದಿಗೆ ರಂಜಿತಾಳಿಗೆ ಗೆಳೆತನ ಬೆಳೆದಿದ್ದು, ನಂತರ ಅದು ಪ್ರೀತಿಗೆ ತಿರುಗಿತ್ತು.
ಆರಂಭದಲ್ಲಿ ಇಬ್ಬರ ಕುಟುಂಬಗಳ ನಡುವೆ ಸಹ ಒಳ್ಳೆಯ ಬಾಂಧವ್ಯ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ ಎನ್ನಲಾಗಿದೆ.
ಇದನ್ನು ಓದಿ : ಭೀಕರ ಕಾರು Accident – ಶಿಕ್ಷಕ ದಾರುಣ ಸಾವು
ಮದುವೆಗೆ ಒತ್ತಡ
ಆದರೆ, ಇತ್ತೀಚಿನ ಕೆಲ ತಿಂಗಳಿಂದ ರಫೀಕ್ ಮದುವೆಯಾಗುವಂತೆ ರಂಜಿತಾಳ ಮೇಲೆ ನಿರಂತರ ಒತ್ತಡ ಹೇರುತ್ತಿದ್ದ.ಇದಕ್ಕೆ ರಂಜಿತಾ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿ,
“ನಾನು ಈಗಾಗಲೇ ಮದುವೆಯ ಅನುಭವ ಹೊಂದಿದ್ದೇನೆ. ಮತ್ತೆ ಮದುವೆಯಾಗಲು ನನಗೆ ಇಷ್ಟವಿಲ್ಲ. ನಮ್ಮ ಸಂಬಂಧ ಹೀಗೆಯೇ ಇರಲಿ, ಆದರೆ ಮದುವೆ ಸಾಧ್ಯವಿಲ್ಲ”
ಎಂದು ತಿಳಿಸಿದ್ದಳು.
ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿ
ಶನಿವಾರ ಎಂದಿನಂತೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ, ರಫೀಕ್ ರಂಜಿತಾಳನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ“ಮದುವೆಯಾಗುತ್ತೀಯೋ ಇಲ್ಲವೋ” ಎಂದು ಪ್ರಶ್ನಿಸಿದ್ದಾನೆ.ಈ ವೇಳೆ ರಂಜಿತಾ ಮದುವೆಗೆ ನಿರಾಕರಿಸಿದ ಕಾರಣ, ಕೋಪಗೊಂಡ ರಫೀಕ್ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.ಗಂಭೀರವಾಗಿ ಗಾಯಗೊಂಡ ರಂಜಿತಾಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪೊಲೀಸ್ ತನಿಖೆ ಆರಂಭ
ಈ ಘಟನೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಆರೋಪಿ ರಫೀಕ್ಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಮರಕ್ಕೆ ಕಾರು ಡಿಕ್ಕಿಯಾಗಿ ಆಕ್ಸಿಡೆಂಟ್ – ಕಾರಿನಲ್ಲಿದ್ದ ಶಿಕ್ಷಕ ದಾರುಣ ಸಾ*




