ರೆಕ್ಟಲ್ ಕ್ಯಾನ್ಸರ್ನಿಂದ ಬಳಲುತ್ತಿರುವ ಅಭಿಮಾನಿ ಆರೋಗ್ಯ ವಿಚಾರಿಸಿದ ನಟ Yash.

ರೆಕ್ಟಲ್ ಕ್ಯಾನ್ಸರ್ನಿಂದ ಬಳಲುತ್ತಿರುವ ತಮ್ಮ ಅಭಿಮಾನಿಯ ಆರೋಗ್ಯವನ್ನು ಕೆಜಿಎಫ್ ಸ್ಟಾರ್ ನಟ ಯಶ್ ವಿಚಾರಿಸಿ ಮಾನವೀಯತೆ ಮೆರೆದಿದ್ದಾರೆ. ವೀಡಿಯೋ ಕಾಲ್ ಮೂಲಕ ಮಾತನಾಡಿದ ಯಶ್, ಅಭಿಮಾನಿಗೆ ಧೈರ್ಯ ತುಂಬಿ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಸಲಹೆ ನೀಡಿದ್ದಾರೆ.

ಅಭಿಮಾನಿ ಆರೋಗ್ಯ ವಿಚಾರಿಸಿದ ನಟ Yash
ಶಿವಮೊಗ್ಗ ಯಶ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಕುಮಾರ್ ಕಳೆದ ನಾಲ್ಕೈದು ತಿಂಗಳಿಂದ ರೆಕ್ಟಲ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದ ಕೂಡಲೇ ಯಶ್ ಅವರು ವೀಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನು ಓದಿ : ನಟ Yash ತಾಯಿಗೆ ಮೊದಲ ಜಯ – ಜಾಗದ ವಿಚಾರಕ್ಕೆ ಸ್ಟೇ ಕೊಟ್ಟ ಕೋರ್ಟ್

ಧೈರ್ಯ ಕಳೆದುಕೊಳ್ಳಬೇಡಿ
ಅಭಿಮಾನಿಯೊಂದಿಗೆ ಮಾತನಾಡಿದ ಯಶ್, ವಿಷಯ ಇವತ್ತು ಗೊತ್ತಾಯಿತು. ತಕ್ಷಣ ಮಾತಾಡುತ್ತಿದ್ದೇನೆ. ಹೋಪ್ ಕಳೆದುಕೊಳ್ಳುವುದು ಬೇಡ, ಧೈರ್ಯವಾಗಿರಿ ಎಂದು ಹಾಸಿಗೆ ಹಿಡಿದಿರುವ ಅಭಿಮಾನಿಗೆ ಯಶ್ ಧೈರ್ಯದ ಮಾತುಗಳನ್ನಾಡಿದ್ದಾರೆ.

ಇದನ್ನು ನೋಡಿ : ರಾಷ್ಟ್ರಪತಿ ಪದಕ ಪುರಸ್ಕೃತ ಖಡಕ್ ಕಾಪ್ ನಿವೃತ್ತಿ- ASI MUNAWAR PASHAಗೆ ಹೃದಯಸ್ಪರ್ಶಿ ಬೀಳ್ಕೊಡುಗೆ




