KSRTC ಬಸ್ ಮತ್ತು ಓಮ್ನಿ ಕಾರೊಂದರ ಮಧ್ಯೆ ಸಂಭವಿಸಿದ ರಸ್ತೆ Accident ಸಂಭವಿಸಿದೆ.

KSRTC ಬಸ್ ಮತ್ತು ಓಮ್ನಿ ಕಾರೊಂದರ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ಮುಳಿಯ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಓಮ್ನಿ ಕಾರು ಚಾಲಕ ಮೈರ ನಿವಾಸಿ ಮೋನಪ್ಪ ಕುಲಾಲ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಲವರ್ಗೆ ಕೈಕೊಟ್ಟು ಮತ್ತೊಬ್ಬಳ ಜೊತೆ ಹಸೆಮಣೆ ಏರಿದ ಪ್ರೇಮಿ
ಬಸ್-ಕಾರು ನಡುವೆ Accident
ವಿಟ್ಲದಿಂದ ಪೆರುವಾಯಿ ಕಡೆಗೆ ಸಾಗುತ್ತಿದ್ದ ಓಮ್ನಿ ಕಾರು ಮತ್ತು ಪಕಳಕುಂಜದಿಂದ ವಿಟ್ಲದತ್ತ ಬರುತ್ತಿದ್ದ KSRTC ಬಸ್ ಮುಳಿಯ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಓರ್ವ ಸಾವು
ಇನ್ನು Accident ನಲ್ಲಿ ಮೋನಪ್ಪರ ಪತ್ನಿ ಲಲಿತಾ ಹಾಗೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ರಮಣಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಇವರಿಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಘಟನಾ ಸ್ತಳಕ್ಕೆ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಮುಂದು ವರಿಸಿದ್ದಾರೆ.
ಇದನ್ನು ನೋಡಿ : ಮತಗಳ್ಳತನ ವಿರುದ್ಧ CONGRESS ಹೋರಾಟ – ಶಾಸಕ JAYACHANDRA ಏನಂದ್ರು ನೋಡಿ




