Love Dhoka : ಮದುವೆ ನಿಲ್ಲಿಸಲು ಮದುವೆ ಮನೆಗೆ ಬಂದ ಮಾಜಿ ಪ್ರೇಯಸಿ.

Love Dhoka : ಒಂದಲ್ಲಾ, ಎರಡಲ್ಲಾ ಮೂರೂ ಅಲ್ಲ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿ ಮಾಡಿ, ಈಗ ಲವರ್ಗೆ ಕೈಕೊಟ್ಟು ಬೇರೆ ಯುವತಿಯ ಜೊತೆ ಮದುವೆ ಮಾಡಿಕೊಂಡಿದ್ದು, ಮದುವೆ ಮನೆಗೆ ನುಗ್ಗಿ ಪ್ರೇಯಸಿ ರಂಪಾಟ ಮಾಡಿದ್ದಾಳೆ. ಈ ಘಟನೆಗೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರಿನಲ್ಲಿ. ಲವರ್ಗೆ ಕೈಕೊಟ್ಟಿರುವ ಹುಡುಗನ ಶರತ್ ಅಂತಾ.ಕಲ್ಯಾಣ ನಗರದ ನಿವಾಸಿಯಾಗಿದ್ದ. ಹಾಸನ ಜಿಲ್ಲೆಯ ಬೇಲೂರು ಮೂಲದ ಅಶ್ವಿನಿ ಎಂಬ ಯುವತಿಯನ್ನು ಕಳೆದ 10 ವರ್ಷಗಳಿಂದ ನಿನಗೆ ನಾನು ನನಗೆ ನೀನು ಅಂತಾ ಒಬ್ಬರಿಗೊಬ್ಬರು ಪ್ರೀತಿ ಮಾಡ್ತಾ ಇದ್ರಂತೆ.
ಗ್ರೀನ್ ಸಿಗ್ನಲ್
ಇನ್ನು ಇವರ ಪ್ರೀತಿಗೆ ಯುವತಿ ಅಶ್ವಿನಿ ಮನೆಯಲ್ಲೂ ಒಪ್ಪಿಗೆ ಸೂಚಿಸಿದ್ರಂತೆ.ಅಷ್ಟೇ ಅಲ್ಲ ಅಶ್ವಿನಿ ಮನೆಗೆ ಹೋಗಿ ಶರತ್ ಹೆಣ್ಣನ್ನು ಕೂಡ ಕೇಳಿದ್ನಂತೆ. ಹೇಗೋ ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಬಿಡು ಅಂತಾ ಕೈಕೈ ಹಿಡಿದು ಊರೂರು ಸುತ್ತಾಡಿದ್ದಾರೆ. ಪ್ರಿಯಕರ ಶರತ್ನನ್ನೇ ನಂಬಿ ಯುವತಿ ಅಶ್ವಿನಿ ಜೀವನ ನಡೆಸುತ್ತಿದ್ದಳು. ಹೀಗಿರುವಾಗ ಕಿರಾತಕ ಪ್ರಿಯಕರ ಶರತ್ ಮಾತ್ರ ತನ್ನ ನೀಚ ಬುದ್ದಿ ತೋರಿಸಿದ್ದಾನೆ.
ಫುಲ್ ಶಾಕ್
ನೀನೆ ಜೀವ ಅಂತಾ ಬದುಕುತ್ತಿದ್ದ ಅಶ್ವಿನಿ ಬಾಳಿಗೆ ಬೆಂಕಿ ಇಡಲು ಶರತ್ ಮುಂದಾಗಿದ್ದು, ಪ್ರೇಯಸಿ ಅಶ್ವಿನಿ ಗೊತ್ತಾಗದಂತೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ. ಇವತ್ತು ಪ್ರಿಯಕರ ಶರತ್ ಮದುವೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು. ಈ ವಿಚಾರ ನಿನ್ನೆ ಪ್ರೇಯಸಿ ಅಶ್ವಿನಿಗೆ ಗೊತ್ತಾಗಿ, ಫುಲ್ ಶಾಕ್ಗೆ ಒಳಗಾಗಿದದ್ದಳು.
ಇದನ್ನು ಓದಿ : ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದು ಬಾಲಕಿ ಸಾವು

ಮದುವೆ ಮನೆಗೆ ನುಗ್ಗಿ ಪ್ರೇಯಸಿ ರಂಪಾಟ
ಕೂಡಲೇ ಎದ್ನೋ ಬಿದ್ನೋ ಅಂತಾ, ತನ್ನ ಪ್ರೀತಿಯನ್ನು, ತನ್ನ ಪ್ರಿಯಕರನ್ನು ಉಳಿಸಿಕೊಳ್ಳಲು ಓಡೋಡಿ ಮದುವೆ ಮನೆಗೆ ಬಂದಿದ್ದಾಳೆ. ಆದ್ರೆ ಅಶ್ವನಿ ಬರುವಷ್ಟರಲ್ಲೇ ಪ್ರಿಯಕರನ ಮದುವೆ ಮದುವೆ ಮುಗಿದು ಹೋಗಿದ್ದು, ರಿಸೆಪ್ಷನ್ಗೆ ರೆಡಿ ಮಾಡಿಕೊಳ್ಳುತ್ತಿದ್ರು. ಈ ವೇಳೆ ಮದುವೆ ಮನೆಗೆ ನುಗ್ಗಿದ ಪ್ರೇಯಸಿ ರಂಪಾಟ ಮಾಡಿದ್ಳು. ಮದುವೆ ಮಂಟಪದಲ್ಲೇ ದರಣಿ ಕೂತು ನನಗೆ ನ್ಯಾಯ ಬೇಕು, ಇದೇ ಮಂಟಪದಲ್ಲಿ ಶರತ್ ನನ್ನನ್ನು ಮದುವೆ ಆಗಬೇಕು ಅಂತಾ ಹಠ ಹಿಡಿದ್ದಳು.
ಮದುವೆ ಆಗಿ ಎರಡು ತಿಂಗಳಲ್ಲೇ ಡಿವೋರ್ಸ್
ಇನ್ನು ಪ್ರೇಯಸಿಯ ರಂಪಾಟ ಕಂಡ ಮದುವೆಗೆ ಬಂದಿದ್ದ ಸಂಬಂಧಿಕರು, ಕುಟುಂಬಸ್ಥರು ಶಾಕ್ಗೆ ಒಳಗಾದ್ರು. ಈ ವೇಳೆ ಶರತ್ ಕುಟುಂಬಸ್ಥರು ಹಾಗೂ ಯುವತಿ ಜೊತೆ ಕೆಲ ಕಾಲ ವಾಗ್ವಾದವೂ ಕೂಡ ಏರ್ಪಟ್ಟಿತ್ತು. ಆತ ನನ್ನನ್ನು ಮದುವೆ ಆಗ್ತೀನಿ ಅಂತಾ ನನಗೆ ಮೋಸ ಮಾಡಿದ್ದಾನೆ. ನನ್ನಿಂದ ಸುಮಾರು ನಾಲ್ಕೂವರೆ ಲಕ್ಷ ದುಡ್ಡನ್ನು ಕೂಡ ಪಡೆದುಕೊಂಡಿದ್ದಾನೆ. ಅಲ್ದೇ ತನ್ನ ಪ್ರಿಯಕರ ಶರತ್ಗೆ ಈಗಾಗಲೇ ಬೇರೊಂದು ಹುಡುಗಿ ಜೊತೆ ಮದುವೆ ಕೂಡ ಆಗಿತ್ತು. ಮದುವೆ ಆಗಿ ಎರಡು ತಿಂಗಳಲ್ಲೇ ಡಿವೋರ್ಸ್ ಕೂಡ ಆಗಿದೆ.
ಬೇರೊಂದು ಯುವತಿ ಜೊತೆ ಹಸೆಮಣೆ ಏರಿದ್ದಾನೆ
ಈಗ ಇನ್ನೊಂದು ಯುವತಿ ಜೊತೆ ಹಸೆಮಣೆ ಏರಿದ್ದಾನೆ. ನನಗೆ ಹಾಗೂ ಆ ಹುಡುಗಿಗೆ ಶರತ್ ಮೋಸ ಮಾಡಿದ್ದಾನೆ ಅಂತಾ ಯುವತಿ ಅಶ್ವಿನಿ ಗಂಭೀರ ಆರೋಪ ಮಾಡಿದ್ದಾಳೆ. ಇನ್ನು ಈಗಾಗಲೇ ಶರತ್ ಮೇಲೆ ಮೂರು ಕೇಸ್ಗಳು ಇದ್ದು, ಕೇಸ್ಗಳಿಗೆ ಸ್ಟೇ ತಂದು ಮತ್ತೊಂದು ಮದುವೆ ಮಾಡಿಕೊಳ್ಳುತ್ತಿದ್ದಾನೆ. ಮದುವೆ ಮನೆಗೆ ಬಂದಿದ್ದಕ್ಕೆ ಅವನ ಕುಟುಂಬಸ್ಥರು ನನ್ನನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ಅಶ್ವಿನಿ ಆರೋಪ ಮಾಡಿದ್ದಾಳೆ.

ಹಣ ಕೊಟ್ಟು ಮೋಸ
ಅದೇನೆ ಆಗಲಿ, 10 ವರ್ಷ ನೀನೆ ಜೀವ ಅಂತಾ ಪ್ರೀತಿ ಮಾಡಿದ್ದಲ್ಲದೇ, ಆತನಿಗೆ ಹಣವನ್ನು ಕೂಡ ಕೊಟ್ಟು ಈಗ ಯುವತಿ ಮೋಸ ಹೋಗಿದ್ದಾಳೆ. 10 ವರ್ಷ ಬರೋ ಸಂಬಂಧವನ್ನು ತಿರಸ್ಕರಿಸಿ ಶರತ್ಗಾಗಿ ಕಾಯುತ್ತಿದ್ದ ಅಶ್ವಿನಿಗೆ ಶರತ್ ಕೈಕೊಟ್ಟಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಯುವತಿ ಮಾಡುತ್ತಿರೋ ಆರೋಪ ಸುಳ್ಳಾ ಅನ್ನೋದನ್ನ ತನಿಖೆ ಬಳಿಕ ತಿಳಿದುಬರಬೇಕಿದೆ. ಅಲ್ದೇ ತನಿಖೆ ಬಳಿಕ ಪ್ರೀತಿಸಿದ ಯುವತಿಗೆ ಹಾಗೂ ಮದುವೆಯಾದ ಯುವತಿಗೆ ನ್ಯಾಯ ಸಿಗುತ್ತಾ..? ಅಂತಾ ಕಾದುನೋಡಬೇಕಿದೆ.
ಇದನ್ನು ನೋಡಿ : LOVE SEX DHOKA ಪ್ರೇಯಸಿಗೆ ಕೈಕೊಟ್ಟು ಮದುವೆ ಆಗಲು ಹೋಗಿದ್ದವ -ಮದುವೆ ಮನೆಗೆ ಹೋಗಿ ಮಾಡಿದ್ದಾದರೂ ಏನು?




