Hassan : ಬಸ್ ಹತ್ತುವಾಗ ಕೆಳಗೆ ಬಿದ್ದು ಬಾಲಕಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ.

ಬಸ್ ಹತ್ತುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ದುರ್ಘಟನೆ Hassan ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊಳಲ್ಕೆರೆ ಗೇಟ್ ಬಳಿ ಸಂಭವಿಸಿದೆ.
ಇದನ್ನು ಓದಿ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್ ಪಂದ್ಯ?
ಬಾಲಕಿ ಮೇಲೆ ಹರಿದ ಬಸ್
ಮೃತ ಬಾಲಕಿಯನ್ನು ಭಾರ್ಗವಿ (4) ಎಂದು ಗುರುತಿಸಲಾಗಿದೆ. ಭಾರ್ಗವಿ ತನ್ನ ತಾಯಿ ಯಮುನಾ ಅವರೊಂದಿಗೆ ದೊಡ್ಡಮೇಟಿಕುರ್ಕೆ ಗ್ರಾಮದ ಆಸ್ಪತ್ರೆಗೆ ತೆರಳುತ್ತಿದ್ದಳು. ಬಸ್ ಹತ್ತುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಸಾರಿಗೆ ಬಸ್ಸಿನ ಚಕ್ರ ಭಾರ್ಗವಿ ಮೇಲೆ ಹರಿದಿದೆ. ಘಟನೆಯ ಪರಿಣಾಮ ಭಾರ್ಗವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರ್ಘಟನೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನು ನೋಡಿ : ಕೇಂದ್ರದ ವಿರುದ್ಧ CONGRESS ಹೋರಾಟ – DELHIಗೆ ಯಾವ್ಯಾವ ನಾಯಕರು ಹೋಗಿದ್ದಾರೆ




