Vijayapur News : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ.ಎ ಗ್ರಾಮದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ, ಕೊಲೆ ಬಳಿಕ ಅಮಾಯಕರಂತೆ ಓಡಾಡುತ್ತಿದ್ದ ಹಂತಕರು ಕೊನೆಗೂ ಬಂಧನವಾಗಿದ್ದು, ಆರು ತಿಂಗಳ ಬಳಿಕ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Vijayapur News : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ.ಎ ಗ್ರಾಮದಲ್ಲಿ ದೃಶ್ಯಂ ಸಿನಿಮಾ ಸ್ಟೈಲ್ನಲ್ಲಿ ನಡೆದಿದ್ದ ಅನೈತಿಕ ಸಂಬಂಧದ ಕೊಲೆ ಪ್ರಕರಣ ಆರು ತಿಂಗಳ ಬಳಿಕ ಬಯಲಾಗಿದ್ದು,
ಬ್ರೈನ್ ಮ್ಯಾಪಿಂಗ್ ಮತ್ತು ಪಾಲಿಗ್ರಾಫ್ ಟೆಸ್ಟ್ ಮೂಲಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಮೀನು ಯಜಮಾನಿ ಮಲ್ಲಮ್ಮ ಕೆಲಸದಾಳು ಮಹಾದೇವಪ್ಪನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ ಕಾರಣಕ್ಕೆ, ಆಕೆಯ ಮಗ ಅಪ್ಪುಗೌಡ ಕಟ್ಟಿಗೆಯಿಂದ ಹೊಡೆದು ಮಹಾದೇವಪ್ಪನನ್ನು ಕೊಲೆ ಮಾಡಿದ್ದು,
ನಂತರ ತಾಯಿ ಮಲ್ಲಮ್ಮ ಮತ್ತು ತಂದೆ ಸಿದ್ದನಗೌಡನ ಸಹಾಯದಿಂದ ಶವವನ್ನು ಬೇರೆ ಜಮೀನಿನ ಮುಳ್ಳು ಕಂಟಿಯಲ್ಲಿ ಬಿಸಾಕಲಾಗಿದೆ.
ಕೊಲೆ ಬಳಿಕ ಪೊಲೀಸ್ ವಿಚಾರಣೆಗೆ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಲು, ಅಪ್ಪುಗೌಡ ತಂದೆ–ತಾಯಿಗೆ ದೃಶ್ಯಂ ಸಿನಿಮಾ ಶೈಲಿಯಲ್ಲಿ ಟ್ರೈನಿಂಗ್ ನೀಡಿದ್ದು,
ಮೊಬೈಲ್ ಬಳಸದಂತೆ, ಊರು ಬಿಡದಂತೆ, ಮತ್ತು ಕೊಲೆ ಬಗ್ಗೆ ಊರಿನವರೊಂದಿಗೆ ದಿನವೂ ಮಾತನಾಡುವಂತೆ ಸೂಚಿಸಿದ್ದರು.
ಇದರ ಪರಿಣಾಮವಾಗಿ, ಮನೆಯವರು ಯಾರಿಗೂ ಅನುಮಾನ ಬಾರದಂತೆ ನಡೆದುಕೊಂಡಿದ್ದರು.
ಕೊಲೆ ನಡೆದ ನಾಲ್ಕು ದಿನಗಳ ಬಳಿಕ ಮಹಾದೇವಪ್ಪನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಸಹಜ ಸಾವು ಎಂದು ತಿಳಿಸಲಾಗಿತ್ತು.
ಆದರೆ ಶವ ಪರೀಕ್ಷೆಯಲ್ಲಿ ಹಲ್ಲೆಯಿಂದ ನಡೆದ ಕೊಲೆ ಎಂಬುದು ದೃಢಪಟ್ಟಿತು.ಸರ್ವೇಯರ್ ಹುದ್ದೆಯಲ್ಲಿದ್ದ ಆರೋಪಿ ಅಪ್ಪುಗೌಡ ತನ್ನ ಚಾಣಾಕ್ಷತನದಿಂದ ಸಾಕ್ಷ್ಯಗಳನ್ನು ನಾಶ ಮಾಡುತ್ತಿದ್ದುದರಿಂದ ಯಾವುದೇ ಸಾಕ್ಷ್ಯಗಳು ಸಿಗದಂತೆ ತೋರಿಸಿದ್ದ.
ಆರೋಪಿಗಳು ಸಿಕ್ಕಿಬಿದ್ದದ್ದು ಹೇಗೆ?
ಒಂದು ಹಂತದಲ್ಲಿ ಮಹಾದೇವಪ್ಪನನ್ನು ತನ್ನ ಮಗನಿಂದಲೇ ಕೊಲೆಯಾಗಿರಬಹುದು ಎಂಬ ಸಂಶಯ ಮೂಡಿಸುವಂತೆ ಅಪ್ಪುಗೌಡ ವರ್ತಿಸಿದ್ದ.
ಈ ಜಟಿಲ ಪ್ರಕರಣವನ್ನು ತಮ್ಮ ಸುಪರ್ದೆಗೆ ಪಡೆದ ಎಸ್ಪಿ ಲಕ್ಷ್ಮಣ ನಿಂಬರಗಿ, ಮಹಾದೇವಪ್ಪ ಕುಟುಂಬ ಮತ್ತು ಸಂಬಂಧಿತ ಆರೋಪಿಗಳ—ಮಲ್ಲಮ್ಮ, ಅಪ್ಪುಗೌಡ, ಸಿದ್ದನಗೌಡ—ಬ್ರೇನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫ್ ಟೆಸ್ಟ್ ಮೂಲಕ ಬಯಲಿಗೆ ತಂದಿದ್ದಾರೆ.
ಬ್ರೇನ್ ಮ್ಯಾಪಿಂಗ್ನಲ್ಲಿ ಅಪ್ಪುಗೌಡ, ಜಮೀನು ಯಜಮಾನಿ ಮಲ್ಲಮ್ಮ ಮತ್ತು ಆಕೆ ಗಂಡ ಸಿದ್ದನಗೌಡ ಆರೋಪಿಗಳೆಂದು ಪತ್ತೆಯಾಗಿದೆ.
ಮೇ 31 ರಂದು ಸಿಟ್ಟಿನಿಂದ ಅಪ್ಪುಗೌಡ ಕಟ್ಟಿಗೆಯಿಂದ ಮಹಾದೇವಪ್ಪನ ಮೇಲೆ ತಲೆ ಹಲ್ಲೆ ನಡೆಸಿದ್ದಾಗ ಮಹಾದೇವಪ್ಪ ಸ್ಥಳದಲ್ಲೇ ಪ್ರಾಣಕಳೆದುಕೊಂಡಿದ್ದರು. ಕೊಲೆ ಮುಚ್ಚಲು ಅಪ್ಪುಗೌಡ ಸಿನಿಮಾ ಶೈಲಿಯಲ್ಲಿ ಸ್ಕೆಚ್ ರೂಪಿಸಿದ್ದ.
ಇದೀಗ, ಹಂತಕ ಅಪ್ಪುಗೌಡ, ತಾಯಿ ಮಲ್ಲಮ್ಮ ಮತ್ತು ಶವ ಸಾಗಾಟಕ್ಕೆ ನೆರವಾದ ತಂದೆ ಸಿದ್ದನಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.




