SIR ಕರ್ತವ್ಯದ ವೇಳೆ ವಿಎ ಭುವನ ಸಾವು – 30 ಲಕ್ಷ ಪರಿಹಾರಕ್ಕೆ ಡಿಸಿ ಮನವಿ

SIR ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿಎ ಭುವನ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಭಾರತ ಚುನಾವಣಾ ಆಯೋಗಕ್ಕೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮನವಿ ಸಲ್ಲಿಸಿದ್ದಾರೆ.
ಚಿಕಿತ್ಸೆ ಫಲಿಸದೇ ಸಾವು
ಜುಲೈ 4ರಂದು ಬೆಳಿಗ್ಗೆ ಗುಳೂರು ಸಮೀಪ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭುವನ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಇದನ್ನು ಓದಿ : ಪಡಿತರ ಅಂಗಡಿಗಳನ್ನ ರಾತ್ರಿವರೆಗೂ ತೆರೆಯುವಂತೆ ಡಿಸಿ ಖಡಕ್ ಸೂಚನೆ!

SIR ಕರ್ತವ್ಯದ ವೇಳೆ – 30 ಲಕ್ಷ ಪರಿಹಾರಕ್ಕೆ ಡಿಸಿ ಮನವಿ
ಕರ್ತವ್ಯದ ವೇಳೆ ಅಕಾಲಿಕವಾಗಿ ಮೃತಪಟ್ಟಿರುವುದರಿಂದ, ಚುನಾವಣಾ ಆಯೋಗದ ಜಾರಿಯಲ್ಲಿರುವ ನಿಯಮದಂತೆ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರಧನ ಮಂಜೂರು ಮಾಡುವಂತೆ ನವದೆಹಲಿಯಿಂದ ಆಗಮಿಸಿದ್ದ ಭಾರತ ಚುನಾವಣಾ ಆಯೋಗದ ಡೆಪ್ಯೂಟಿ ಎಲೆಕ್ಷನ್ ಕಮಿಷನರ್ ಅವರಿಗೆ ಡಿಸಿ ಮನವಿಯನ್ನ ಸಲ್ಲಿಸಿದ್ದಾರೆ.

ಇದನ್ನು ನೋಡಿ : ಮಾದರ ಮಹಾಸಭೆಯಲ್ಲಿ ಭುಗಿಲೆದ್ದ ವಿವಾದ – ವಿವಾದಗಳಿಗೆ ಸ್ಪಷ್ಟನೆ ಕೊಟ್ಟ ಅಧ್ಯಕ್ಷರು




