Tumakuru : ಕೋರ್ಟ್ ಆವರಣದಲ್ಲೇ ವಕೀಲನ ಮೇಲೆ ಹಲ್ಲೆ! ಹಲ್ಲೆ ಖಂಡಿಸಿ ಕಲಾಪದಿಂದ ಹೊರಗುಳಿದ ವಕೀಲರು

ವಕೀಲರ ಮೇಲೆಯೇ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ನಡೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಸಿವಿಲ್ ನ್ಯಾಯಾಲಯದ ಕಲಾಪ ಮುಗಿಸಿ ಹೊರಬರುತ್ತಿದ್ದ ವೇಳೆ ಹಿರಿಯ ವಕೀಲ ಎಂ.ಸಿ. ರವೀಶ್ ಅವರ ಮೇಲೆ ಏಕಾಏಕಿ ಪ್ರತಿವಾದಿಯಾಗಿರುವ ಬಿ.ಎ. ನಿರಂಜನ್ ಎಂಬುವರು ಮಾರಾಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಕೋರ್ಟ್ ಆವರಣದಲ್ಲೇ ವಕೀಲ ರವೀಶ್ ಮೇಲೆ ಹಲ್ಲೆ!
ಇನ್ನು ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಿರಂಜನ್ ಅವರ ಅಕ್ಕನ ಪರವಾಗಿ ಹಿರಿಯ ವಕೀಲ ರವೀಶ್ ವಕಾಲತ್ತು ವಹಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನಿರಂಜನ್ ಎರಡನೇ ಪ್ರತಿವಾದಿಯಾಗಿದ್ದು, ನನ್ನ ವಿರುದ್ಧವೇ ಪ್ರಕರಣವನ್ನು ಏಕೆ ತೆಗೆದುಕೊಂಡಿದ್ದೀಯಾ ಎಂದು ಪ್ರಶ್ನಿಸಿ ಕೋರ್ಟ್ ಆವರಣದಲ್ಲೇ ವಕೀಲ ರವೀಶ್ ಅವರ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದನ್ನು ನೋಡಿ : GOWRIBIDNURU ಅಭಿವೃದ್ಧಿಗೆ ಭಾರಿ ಅನುದಾನ – ವರದಿ ಬಿಡುಗಡೆ ಮಾಡಿದ ಸಂಸದ SUDHAKAR

ಹಲ್ಲೆ ಖಂಡಿಸಿ ಕಲಾಪದಿಂದ ಹಪರಗುಳಿದ ವಕೀಲರು
ಹಲ್ಲೆಯಿಂದ ರವೀಶ್ ಅವರ ಮುಖದಲ್ಲಿ ರಕ್ತಸ್ರಾವವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಬಳಿಕ ಆರೋಪಿ ನಿರಂಜನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು ನ್ಯಾಯಾಲಯದ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ತುಮಕೂರಿನ ವಕೀಲರು ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದ್ದು, ವಕೀಲರ ಮೇಲಿನ ದೌರ್ಜನ್ಯಕ್ಕೆ ಘೋಷಣೆ ಕೂಗಿ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Tumakuru ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಲವ್ ಜಿಹಾದ್ ಆರೋಪ – ಮದುವೆಗೆ ನಿರಾಕರಿಸಿದ ಯುವತಿ ಮೇಲೆ ಹಲ್ಲೆ?!




