ತಮಿಳುನಾಡಲ್ಲಿ ಗೆದ್ದ ಕನ್ನಡಿಗ – TVK ಪಕ್ಷದಿಂದ ಗೆದ್ದು ಶಾಸಕನಾದ ಸುನಿಲ್ ಆನಂದ್ ಯಾರು?

ತಮಿಳುನಾಡಿನ ಚುನಾವಣೆಯಲ್ಲಿ TVK ಪಕ್ಷ ಇತಿಹಾಸವನ್ನೇ ಸೃಷ್ಟಿಸಿದೆ. ದಳಪತಿ ವಿಜಯ್ ನೇತೃತ್ವದ ಪಕ್ಷ ಅಧಿಕಾರ ಚುಕ್ಕಾಣಿಯನ್ನು ಹಿಡಿದಿದೆ. ಇದೀಗ ತಮಿಳಗ ವೆಟ್ರಿ ಕಳಗಂ ಪಕ್ಷದಿಂದ ಕನ್ನಡಿಗನೊಬ್ಬ ಗೆಲುವನ್ನು ಸಾಧಿಸಿದ್ದಾರೆ.
ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!
ನೆ. ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸುನೀಲ್ ಆನಂದ್ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆಯ ವಡಕೆಘಟ್ಟ ಗ್ರಾಮದವರು. ದಶಕಗಳ ಹಿಂದೆ ಉದ್ಯಮಕ್ಕಾಗಿ ತಮಿಳುನಾಡಿಗೆ ವಲಸೆ ಹೋಗಿದ್ದ ಕುಟುಂಬದ ಕುಡಿ ಇಂದು ಅಲ್ಲಿನ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.
READ THIS : ಸಚಿವ Zameer ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ!

ಸುನೀಲ್ ಆನಂದ್ ರಾಜಕೀಯ ಪಯಣ
ಸುನೀಲ್ ಆನಂದ್ ಅವರ ಕುಟುಂಬ ಹಲವು ವರ್ಷಗಳ ಹಿಂದೆಯೇ ತಮಿಳುನಾಡಿಗೆ ವಲಸೆ ಹೋಗಿತ್ತು. ಸುಮಾರು 96 ವರ್ಷಗಳ ಹಿಂದೆ ಬರಗಾಲದ ಸಂದರ್ಭದಲ್ಲೇ ಉದ್ಯಮಕ್ಕಾಗಿ ಅವರ ಪೂರ್ವಜರು ಊರು ತೊರೆದು ತಮಿಳುನಾಡಿಗೆ ತೆರಳಿದ್ದರು. ತಮಿಳುನಾಡಿನಲ್ಲೇ ಶಿಕ್ಷಣ ಪೂರ್ಣಗೊಳಿಸಿದ ಸುನೀಲ್ ಆನಂದ್, ಅಡಿಕೆ ತೋಟ, ಹೋಟೆಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ತಮ್ಮ ಮೂಲ ಗ್ರಾಮವಾದ ವಡಕೆಘಟ್ಟಕ್ಕೆ ಪ್ರತಿವರ್ಷ ಭೇಟಿ ನೀಡುವುದನ್ನು ಮರೆತಿಲ್ಲ.
ತಮಿಳುನಾಡಿನಲ್ಲಿ MLA ಆದ ಕನ್ನಡಿಗ
ಮೊದಲು AIADMK ಪಕ್ಷದಲ್ಲಿದ್ದ ಸುನೀಲ್ ಆನಂದ್, ಬಳಿಕ ವಿಜಯ್ ಅವರ ಸಿದ್ಧಾಂತಗಳಿಗೆ ಮನಸೋತು ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ ಶಾಸಕರಾಗಿ ಹೊರಹೊಮ್ಮಿದ್ದಾರೆ.

MUST WATCH : ಪೊಲೀಸರ ಮುಂದೆಯೇ ಆಟೋ ಚಾಲಕರ ಗಲಾಟೆ.!




