ಸಚಿವ Zameer ಮನೆಯಲ್ಲಿ 1.20 ಕೆ.ಜಿ ಚಿನ್ನಾಭರಣ ಕಳ್ಳತನ – ಇಬ್ಬರು ಅರೆಸ್ಟ್

ಸಚಿವ ಜಮೀರ್ ಅಹ್ಮದ್ ಅವರ ಮನೆಗೆ ಕನ್ನ ಹಾಕಿ ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಇಬ್ಬರು ಆರೋಪಿಗಳನ್ನು ಶಿವಾಜಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಚಿವರ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬಂಧಿತ ಆರೋಪಿಗಳನ್ನು ಅಮೀರ್ ಅಹ್ಮದ್ ಹಾಗೂ ಅವೀನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ಸುಮಾರು 1 ಕೆಜಿ 200 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

2023 ರಿಂದಲೇ ಕಳ್ಳತನ
ಸಚಿವರ ಆರೋಗ್ಯ ವಿಚಾರಿಸಲು ಪದೇ ಪದೇ ಮನೆಗೆ ಬರುತ್ತಿದ್ದ ಅಮೀರ್, ಈ ಪರಿಚಯವನ್ನು ದುರುಪಯೋಗಪಡಿಸಿಕೊಂಡು 2023ರಿಂದಲೇ ಕಳ್ಳತನ ನಡೆಸುತ್ತಿದ್ದಾನೆ ಎಂಬುದು ತಿಳಿದುಬಂದಿದೆ.
READ THIS : ಮಿಸ್ ಇಂಡಿಯಾ ವಿಜೇತೆ ಸಾಧ್ವಿ ಸೈಲ್ಗೆ CM ಅಭಿನಂದನೆ

ಕಳ್ಳತನಕ್ಕೆ ಕಾರಣವೇನು?
ಟ್ರಾವೆಲ್ಸ್ ಬ್ಯುಸಿನೆಸ್ನಲ್ಲಿ ಲಾಸ್ ಆಗಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಆ ಹಣ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿ ಲಾಭಕ್ಕೆ ಪ್ಲ್ಯಾನ್ ಮಾಡಿದ್ದರು. ಆದರೆ ಕಾಲ್ ಮಾಡಿದಾಗ ರಿಸೀವ್ ಮಾಡದಿದ್ದಾಗ ಇಬ್ಬರ ಮೇಲೆ ಅನುಮಾನ ವ್ಯಕ್ತವಾಗಿದ್ದು, ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.

ಬಂಧಿತರಿಂದ ಚಿನ್ನಾಭರಣ ವಶಕ್ಕೆ
ಸಚಿವ ಜಮೀರ್ ಅಹ್ಮದ್ ಅವರ ತಾಯಿ ನೀಡಿದ ದೂರಿನ ಮೇರೆಗೆ ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಬಂಧಿತರಿಂದ ಸದ್ಯ 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ ಸುಮಾರು 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
MUST WATCH : ತಮಿಳುನಾಡಿನ ಜನರು CRAZY PEOPLES – ಹೀಗ್ಯಾಕಂದ್ರು ಶಾಸಕ SURESH BABU





