ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವ Satish Jarkihoi ಸ್ಪಷ್ಟಪಡಿಸಿದ್ದಾರೆ. ಐಟಿ ಸೆಲ್ನಿಂದ ಅನಗತ್ಯ ಪ್ರಚಾರ ನಡೆದಿದ್ದು, 2028ರ ಸಿಎಂ ಚರ್ಚೆ ಈಗ ಬೇಡ ಎಂದಿದ್ದಾರೆ.

ಸಚಿವ Satish Jarkihoi ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಭಿನ್ನಾಭಿಪ್ರಾಯದ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದು, “
ನಮ್ಮಿಬ್ಬರ ನಡುವೆ ಯಾವುದೇ ಭಿನ್ನಮತ ಅಥವಾ ಗೊಂದಲ ಇಲ್ಲ” ಎಂದು ಹೇಳಿದ್ದಾರೆ. ಈ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಅನಗತ್ಯವಾಗಿದ್ದು, ಕೆಲ ಐಟಿ ಸೆಲ್ಗಳಿಂದ ಹೆಚ್ಚು ಪ್ರಚಾರ ಪಡೆದಿವೆ ಎಂದು ಅವರು ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರೊಂದಿಗಿನ ತಮ್ಮ ಸಂಬಂಧ ಮೊದಲಿನಂತೆಯೇ ಉತ್ತಮವಾಗಿದ್ದು, ಅದನ್ನು ಹಾಳು ಮಾಡುವಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದರು.
ಅಹಿಂದ ಸಂಘಟನೆ ಪಕ್ಷದ ಚಟುವಟಿಕೆಗಳ ಜೊತೆಗೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಮತ್ತಷ್ಟು ಬಲಪಡಿಸುವ ಕೆಲಸವನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.
MUST READ : Gold & Silver Rate : ಇಂದು ಕರ್ನಾಟಕ ಸೇರಿ ದೇಶಾದ್ಯಂತ ಚಿನ್ನ, ಬೆಳ್ಳಿ ಬೆಲೆ ಎಷ್ಟು…?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಹುದ್ದೆಗೆ ಯಾವುದೇ ನೇರ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪಕ್ಷಕ್ಕಾಗಿ ದುಡಿಯುವವರಿಗೆ ಸೂಕ್ತ ಸಮಯದಲ್ಲಿ ಅವಕಾಶ ಮತ್ತು ಅಧಿಕಾರ ಸಿಗುತ್ತದೆ.
ಡಿ.ಕೆ. ಶಿವಕುಮಾರ್ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಕಾರಣ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.

2028ರ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇನ್ನೂ ಸಾಕಷ್ಟು ಸಮಯವಿದ್ದು, ಈಗಲೇ ಅಂತಹ ಚರ್ಚೆಗಳು ಅನಗತ್ಯ. ಕೆಲಸ ಮಾಡಿದವರಿಗೆ ಅದರ ಪ್ರತಿಫಲ ಸಿಗುತ್ತದೆ.
ನನಗೂ ಪಕ್ಷ ಸೂಕ್ತ ಸ್ಥಾನಮಾನ ನೀಡಿದ್ದು, ಸಚಿವನಾಗಿರುವುದರಿಂದ ತೃಪ್ತಿ ಇದೆ” ಎಂದು ಹೇಳಿದರು.
ಇದೇ ವೇಳೆ, ಕ್ರೀಡಾ ಖಾತೆ ಬಗ್ಗೆ ಮಾತನಾಡಿದ ಸಚಿವರು, ತಮಗೆ ಕ್ರೀಡಾ ಇಲಾಖೆ ಮೇಲೆ ವಿಶೇಷ ಆಸಕ್ತಿ ಇತ್ತು ಮತ್ತು ಆ ಖಾತೆಯನ್ನು ಕೇಳಿದ್ದೆ ಎಂದು ತಿಳಿಸಿದರು.
ಪ್ರತಿ ವರ್ಷ ಕ್ರೀಡಾ ಚಟುವಟಿಕೆಗಳಿಗೆ ವೈಯಕ್ತಿಕವಾಗಿ ನೆರವು ನೀಡುತ್ತಿರುವುದಾಗಿ ಹೇಳಿದ ಅವರು,
ಕ್ರೀಡಾ ಖಾತೆ ಸಿಕ್ಕಿದ್ದರೆ ರಾಜ್ಯವನ್ನು ಈ ಕ್ಷೇತ್ರದಲ್ಲಿ ಮಾದರಿಯನ್ನಾಗಿ ಮಾಡುತ್ತಿದ್ದೆವು ಎಂದು ಅಭಿಪ್ರಾಯಪಟ್ಟರು. ಆದರೆ, ಆ ಖಾತೆ ಡಾ. ಜಿ. ಪರಮೇಶ್ವರ್ ಅವರಿಗೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಕೃಷ್ಣ ಬೈರೇಗೌಡ ಅವರ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ,
ಇಲಾಖೆಗಳ ಹಂಚಿಕೆ ಮತ್ತು ಇತರೆ ವಿಚಾರಗಳನ್ನು ಪಕ್ಷ ಹಾಗೂ ಸರ್ಕಾರ ಸೂಕ್ತ ರೀತಿಯಲ್ಲಿ ಬಗೆಹರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
MUST WATCH : ರಸ್ತೆಗಾಗಿ ಚರಂಡಿ ಮುಚ್ಚಿ ಅವಾಂತರ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.




