
ಸ್ಟಿಂಗ್ ಒಂದು ರಾಜಕೀಯ ಹುನ್ನಾರ – RAJANNA
ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಶತ್ರುವಿನ ಶತ್ರು ಮಿತ್ರ ಎಂಬ ಗಾದೆಯಿದೆ. ಆದರೆ ಇಂತಹ ಸಂದರ್ಭದಲ್ಲಿ ಕನಿಷ್ಠ ಮಾನವೀಯತೆ ವ್ಯಕ್ತಪಡಿಸುವುದು ಮಾನವ ಧರ್ಮ ಎಂದು ಹೇಳಿದ್ದಾರೆ.
ಮಾನವೀಯತೆ ತೋರಿಸುವುದು ಮುಖ್ಯ
ಇನ್ನು ಸ್ಟಿಂಗ್ ಆಪರೇಷನ್ ಕುರಿತು ಕುಮಾರಸ್ವಾಮಿ ಅವರು ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಇಂತಹ ಸಂದರ್ಭದಲ್ಲಿ ಮಾನವೀಯತೆ ತೋರಿಸುವುದು ಮುಖ್ಯ ಎಂದಿದ್ದಾರೆ.
READ THIS : ಸ್ಟಿಂಗ್ ಆಪರೇಷನ್ ವಿವಾದ – ಕೆ. ಎನ್ ರಾಜಣ್ಣ ಹೇಳಿದ್ದೇನು?

RAJANNA – ಸ್ಟಿಂಗ್ ಒಂದು ರಾಜಕೀಯ ಹುನ್ನಾರ
ಮತ್ತೊಂದೆಡೆ ಸಚಿವರ ಮೇಲೆ ಮಾತ್ರವಲ್ಲ, ರಾಜಕಾರಣಿಗಳ ಮೇಲೂ ಸ್ಟಿಂಗ್ ಕಾರ್ಯಾಚರಣೆಗಳು ನಡೆಯುತ್ತಿವೆ. ಇದನ್ನೆಲ್ಲ ಗಮನಿಸಿದಾಗ ಇದರ ಹಿಂದೆ ರಾಜಕೀಯ ಹುನ್ನಾರವಿದೆ ಎಂಬುದು ಗೊತ್ತಾಗುತ್ತದೆ.
ಸ್ಟಿಂಗ್ ಕಾರ್ಯಾಚರಣೆಯನ್ನು ಯಾರೇ ಮಾಡಿರಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಇಂತಹ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಒತ್ತಾಯಿಸಿದ್ದಾರೆ.
MUST WATCH : ರೈತರೊಂದಿಗೆ PRAHALAD JOSHI ಮಾತಾಡಿದ್ದಾರೆ – SWAMINATHAN ವರದಿ ದೇಶದಲ್ಲಿ ಜಾರಿ ಆಗಬೇಕು




