
TUMAKURU : ಸ್ಟಿಂಗ್ ಆಪರೇಷನ್ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ
ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಯಾರು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಟಿಂಗ್ ಹಿಂದೆ ಯಾರಿದ್ದಾರೆ ನನಗೆ ಗೊತ್ತಿಲ್ಲ
ಹೌದು.. ಸ್ಟಿಂಗ್ ಪ್ರಕರಣದ ಕುರಿತು ಮಾತನಾಡಿದ ರಾಜಣ್ಣ, ಈ ಹಿಂದೆ ಯಾರಿದ್ದಾರೆ ನನಗೆ ಗೊತ್ತಿಲ್ಲ. ಘಟನೆ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುವುದರಿಂದ ಸೂಕ್ತ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
READ THIS : 2,000 ಕೋಟಿ ವಹಿವಾಟು ನಡೆಸುವವರ ಬಳಿ 2 ಕೋಟಿ ಇರುವುದು ದೊಡ್ಡ ವಿಷಯವೇ? ರಾಜಣ್ಣ ಪ್ರಶ್ನೆ

ರಾಹುಲ್ ಗಾಂಧಿ ರಾಜೀನಾಮೆ ಕೇಳಿದ್ದಾರೆ, ಇವರು ಕೊಟ್ಟಿದ್ದಾರೆ
ಇನ್ನು ಆಡಿಯೋ, ವಿಡಿಯೋ ತೋರಿಸಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದಿದ್ದಾರೆ ಎಂಬ ವಿಚಾರದ ಬಗ್ಗೆಯೂ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಆ ರೀತಿಯಾಗಿ ರಾಜೀನಾಮೆ ಪಡೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲದ ವಿಚಾರ. ರಾಹುಲ್ ಗಾಂಧಿ ರಾಜೀನಾಮೆ ಕೇಳಿದರೆ ಆ ಕ್ಷಣದಲ್ಲೇ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಪದೇಪದೇ ಹೇಳುತ್ತಿದ್ದರು. ರಾಹುಲ್ ಗಾಂಧಿ ರಾಜೀನಾಮೆ ಕೇಳಿದ್ದಾರೆ, ಇವರು ಕೊಟ್ಟಿದ್ದಾರೆ ಎಂದು ರಾಜಣ್ಣ ಹೇಳಿದ್ರು.
TUMAKURU – ಮಹಾನಾಯಕ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ!
ಇನ್ನು ಈ ಪ್ರಕರಣದ ಹಿಂದೆ ಮಹಾನಾಯಕ ಇದ್ದಾರಾ ಎಂಬ ಪ್ರಶ್ನೆಗೂ ರಾಜಣ್ಣ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಹಾನಾಯಕ ಎಂಬ ಸಿನಿಮಾ ಬಂದಿತ್ತು. ಅದನ್ನು ಬಿಟ್ಟು ಬೇರೆ ನನಗೇನೂ ಗೊತ್ತಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸೂಕ್ತ ತನಿಖೆ ನಡೆಸಲಿ ಎಂದು ಹೇಳಿದ್ದಾರೆ.

MUST WATCH : MODI ಜೊತೆ ನಾವಿದ್ದೇವೆ BJPಯಿಂದ ಸೇವಾ ಸಂಕಲ್ಪ ಅಭಿಯಾನ

