Suicide : ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯವರಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೆ ಆತುರದ ನಿರ್ಧಾರ ತೆಗೆದುಕೊಳ್ಳುವುದು ಹೆಚ್ಚಾಗ್ತಾ ಇದೆ.

Suicide : ತುಮಕೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ರೂಮಿನಲ್ಲಿ ನೇಣಿಗೆ ಶರಣಾಗಿರೋ ದಾರುಣ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಹೆಸರು ಸುರೇಶ್. ಮೂಲತಃ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಿಲೇ ಗ್ರಾಮದವ. ತನ್ನೂರನ್ನ ಬಿಟ್ಟು ತುಮಕೂರಿಗೆ ಬಂದು ಅಶ್ವಿನಿ ಕಾಲೇಜಿನಲ್ಲಿ ಬಿಎಸ್ಇ ನರ್ಸಿಂಗ್ ವ್ಯಾಸಾಂಗ ಮಾಡ್ತಾ ಇದ್ದ.
ಇನ್ನೇನು ಮೂರ್ನಾಲ್ಕು ವರ್ಷ ಹೋಗಿದ್ದವರೆ ಒಳ್ಳೆ ಕೆಲಸ ಸಿಗ್ತಾ ಇತ್ತು. ಆದ್ರೆ ಇದ್ದಕ್ಕಿದ ಹಾಗೆ ರೂಂನಲ್ಲಿ ನಿನ್ನೆ ಮಧ್ಯರಾತ್ರಿ ನೇಣಿಗೆ ಕೊರಳೊಡ್ಡಿ ಸಾವಿಗೆ ಶರಣಾಗಿದ್ದಾನೆ.
ಇದನ್ನು ಓದಿ : ಬಿಗ್ ಬಾಸ್ ಕಾಲೇಜ್ ಆರಂಭ
ಅಶ್ವಿನಿ ಕಾಲೇಜಿನಲ್ಲಿ ಎರನೇ ವರ್ಷದ ಬಿಎಸ್ಇ ನರ್ಸಿಂಗ್ ಓದ್ತಾ ಇದ್ದ ಸುರೇಶ್, ನಗರದ ಸರಸ್ವತಿಪುರಂನ ದೇವರಾಜ್ ಅರಸು ರಸ್ತೆಯಲ್ಲಿ ರೂಂ ಮಾಡಿಕೊಂಡಿದ್ದ. ಕಾಲೇಜಿನಲ್ಲಿ ಚೆನ್ನಾಗಿಯೇ ಓದುತ್ತಿದ್ದ ಸುರೇಶ್ ನಿನ್ನೆ ಮಧ್ಯರಾತ್ರಿ 1:15ರ ಸುಮಾರಿಗೆ GOOD BYE TO MY Dear….RIP ಎಂದು ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾನೆ,
ಇನ್ನು ಮದ್ಯರಾತ್ರಿ ಸುರೇಶ್ ಸ್ಟೇಟಸ್ ಹಾಕಿಕೊಂಡಿರೋದನ್ನ ನೋಡಿದ ಸ್ನೇಹಿತರು ಕೂಡಲೇ ಆತನ ಹೆತ್ತ ತಂದೆ-ತಾಯಿಗೆ ತಿಳಿಸಿದ್ದಾರೆ.

ಮಧ್ಯರಾತ್ರಿ ಮೂರುವರೆ ಗಂಟೆಗೆ ಮಗ ಸುರೇಶ್ಗೆ ಕಾಲ್ ಮಾಡಿದ್ರೆ ಕಾಲ್ ಪಿಕ್ ಮಾಡಲಿಲ್ವಂತೆ… ಮಗ ಏನು ಮಾಡಿಕೊಂಡ ಎಂದು ಹೆತ್ತ ತಂದೆ- ತಾಯಿಗೆ ಬರಸಿಡಿಲೆ ಬಡಿದಂತಾಗಿತ್ತು. ರಾತ್ರೋ ರಾತ್ರಿಯೇ ಕೊಪ್ಪಳದಿಂದ ತುಮಕೂರಿಗೆ ಪೋಷಕರು ಮಗನನ್ನು ನೋಡಲು ಬಂದಿದ್ದಾರೆ.
ಸುರೇಶ ಪ್ರೇಯಸಿಯೊಂದಿಗೆ ಜಗಳ ಆಡಿದ್ದು, ಬೇಸರದಲ್ಲಿ ಇಂತಹ ಅವಘಡ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೂಂಗೆ ಎಫ್ಎಸ್ಎಲ್ ಟೀಂ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸದ್ಯ ವಿದ್ಯಾರ್ಥಿ ಸುರೇಶ್ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಪೋಷಕರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುವುದು. ಇನ್ನು ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ತನಿಖೆ ಬಳಿಕ ವಿದ್ಯಾರ್ಥಿ ಸುರೇಶ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.





