BBK 12 : ಕನ್ನಡ ನಾಡಿನ ಬಿಗ್ ಶೋ ಎಂದರೆ ಅದು ಬಿಗ್ ಬಾಸ್. ಈ 12ನೇ ಸೀಸನ್ ಅಂದ, ಚೆಂದ ಹಾಗೂ ಜಗಳ, ಟಾಸ್ಕ್ಗಳಿಂದ ಮುನ್ನುಗ್ಗುತ್ತಿದೆ.

BBK 12 : ಬಿಗ್ ಬಾಸ್ 12ನೇ ಸೀಸನ್ ಈಗ ಜಗಳ ಹಾಗೂ ಟಾಸ್ಕ್ಗಳಿಂದ ಭರ್ಜರಿಯಾಗಿ ಮುಂದುವರಿಯುತ್ತಿದೆ. ಈಗಾಗಲೇ ನಾಲ್ವರು ಸ್ಪರ್ಧಿಗಳು ಮನೆಯಿಂದ ಹೊರಬಿದ್ದಿದ್ದಾರೆ. ಇದೇ ವೇಳೆ ಮೂವರು ವೈಲ್ಡ್ಕಾರ್ಡ್ ಎಂಟ್ರಿ ಮೂಲಕ ಆಟದಲ್ಲಿ ತೊಡಗಿದ್ದಾರೆ.
ಈ ಎಲ್ಲದರ ನಡುವೆ ಬಿಗ್ ಹೌಸ್ನಲ್ಲಿ ಬಿಬಿ ಕಾಲೇಜ್ ಆರಂಭವಾಗಿದೆ. ಎಲ್ಲ ಸ್ಪರ್ಧಿಗಳನ್ನು ಗೋಲ್ಡನ್ ಪೀರಿಯಡ್ಗೆ ಬಿಗ್ ಬಾಸ್ ಕರೆದುಕೊಂಡು ಹೋಗಿದ್ದಾರೆ. ಅಂದರೆ ತಮ್ಮ ಕಾಲೇಜು ದಿನಗಳ ನೆನಪಿಸುವಂತೆ ಬಿಗ್ ಬಾಸ್ ಕಾಲೇಜು ಕ್ಯಾಂಪಸ್ನಲ್ಲಿ ಕಂಟೆಸ್ಟೆಂಟ್ಗಳು ರಂಜಿಸಬೇಕಿದೆ. ಕಾಲೇಜು ಸ್ಟುಡೆಂಟ್ಸ್ಗಳಂತೆ ಎಲ್ಲರೂ ತಮ್ಮ ತಮ್ಮ ಡ್ರೆಸ್ಗಳನ್ನು ಧರಿಸಿಕೊಂಡು ಫುಲ್ ಎಂಜಾಯ್ ಮೂಡ್ನಲ್ಲಿದ್ದಾರೆ. ಈ ನಡುವೆ ಗಿಲ್ಲಿ ನಟ, ಮಲ್ಲಮ್ಮರನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
ಇದನ್ನು ಓದಿ : ಚಿಕ್ಕನಾಯಕನಹಳ್ಳಿಯಲ್ಲಿ ಮಹಿಳಾ ದಿನಾಚರಣೆ ಹೆಸರಿನಲ್ಲಿ ನಡಿತಾ ಸ್ಕ್ಯಾಮ್ ?

ಪಿಂಕ್ ಶರ್ಟ್ ಹಾಗೂ ಬ್ಲ್ಯಾಕ್ ಪ್ಯಾಂಟ್ ಧರಿಸಿದ ಚಂದ್ರಪ್ರಭ “ನಮಸ್ಕಾರ ಸರ್, ನನ್ನ ಹೆಸರು ಚಂದ್ರಪ್ರಭ, ನನ್ನ ವಯಸ್ಸು 21” ಎಂದು ಹೇಳುತ್ತಿದ್ದಂತೆ ಮನೆಯವರೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನು ಬಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ಎರಡು ಗ್ರೂಪ್ ಆಗಿದ್ದು ಅಭಿಷೇಕ್ ನೇರ ಹೋಗಿ ಸ್ಪಂದನಾ ಅವರ ಕೆನ್ನೆ ಮುಟ್ಟಿದ್ದಾರೆ. ಇದಕ್ಕೆ ನನ್ನ ಕೆನ್ನೆ ಮುಟ್ಟೋಕೆ ಬರುತ್ತಿದ್ದಾರೆ ಎಂದು ಗಿಲ್ಲಿಗೆ ಸ್ಪಂದನಾ ಹೇಳಿದ್ದಾರೆ.
ಅದಕ್ಕೆ ಗಿಲ್ಲಿ “ನಮ್ಮ ಟೀಮ್ ಹುಡುಗಿಗೆ ನೀನು ಮುಟ್ಟೋದು ಹೇಗೆ?” ಎಂದು ಹೇಳಿ, ತಾನೇ ಸ್ಪಂದನಾ ಅವರ ಕೆನ್ನೆ ಮುಟ್ಟಿ ಹೋಗಿದ್ದಾರೆ. ಈ ದೃಶ್ಯ ಮನೆತನವನ್ನೇ ನಗಿಸಿದೆ.
ಇನ್ನೊಂದೆಡೆ ಸೂರಜ್ ಮತ್ತು ರಾಶಿಕಾ ನಡುವಿನ ಬಾಂಧವ್ಯ ಮುಂದುವರಿಯುತ್ತಿದೆ. ಸೂರಜ್ ಹುಡುಗಿಯರಿಗೆ ಲೈನ್ ಹೊಡೆಯಬಹುದಾ ಎಂದು ಕೇಳಿದರೆ, ರಾಶಿಕಾ “ನೀನು ಅದರಲ್ಲಿ ಇದ್ದು ಬಿಡು, ನನಗೆ ಇವನು ಇಷ್ಟ” ಎಂದು ಕೈ ತೋರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನು ನೋಡಿ : BIGG BOSS ಕಾಲೇಜ್ ಆರಂಭ.. ಇವನು ನನಗೆ ಇಷ್ಟ, ಸೂರಜ್ ನೋಡಿ ಹೇಳಿದ್ರಾ ರಾಶಿಕಾ..?




