Sira ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ.

ಶಿರಾ ನಗರಸಭೆ ಆಡಳಿತ ಅಧಿಕಾರಿಗಳು, ಅಧಿಕಾರ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಹೌದು ನಗರಸಭೆ ಆಡಳಿತ ಕಚೇರಿ ನಿತ್ಯ ನೂರಾರು ಮಂದಿ ಸಾರ್ವಜನಿಕರು ಬರ್ತಾರೆ, ಆದ್ರೆ ನಗರಸಭೆ ಆಡಳಿತ ಕಚೇರಿಯಲ್ಲೇ ರಾಶಿ ರಾಶಿ ಕಸ ಬಿದ್ದಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಬಯಲಾಗಿದೆ.
ಇದನ್ನು ಓದಿ : ಕ್ರಿಸ್ಮಸ್ಗೆ ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ವಿಶೇಷ KSRTC ಬಸ್ಗಳ ಸಂಚಾರ
ಎಲ್ಲೆಂದರಲ್ಲಿ ರಾರಾಜಿಸ್ತಾ ಇದೆ ಕಸ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛವಾಗಿಡಲು ಅಭಿಯಾನವನ್ನು ಕೈಗೊಳ್ಳಲಾಗಿದೆ. ಆದ್ರೆ ಸಾರ್ವಜನಿಕ ಸ್ಥಳವಾದ ನಗರಸಭೆ ಆವರಣದಲ್ಲೇ ರಾಶಿ ರಾಶಿ ಕಸ ಬಿದಿದ್ರು ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ. ನಗರಸಭೆ ಆವರಣದಲ್ಲಿ ಪ್ಲ್ಯಾಸ್ಟಿಕ್ ಕವರ್ಗಳು ಎಲ್ಲೆಂದರಲ್ಲಿ ರಾರಾಜಿಸ್ತಾ ಇದ್ದು, ಕಸವನ್ನು ಎತ್ತಿಸುವ ಕೆಲಸ ಮಾತ್ರ ಮಾಡ್ತಾ ಇಲ್ಲ.
ವಾರ್ಡ್ಗಳ ಸ್ಥಿತಿ ಏನು?
ಇನ್ನು Sira ನಗರಸಭೆ ಆವರಣದಲ್ಲೇ ಕಸವನ್ನು ಎತ್ತಲಿಲ್ಲ ಅಂದ್ರೆ ಇನ್ನು ವಾರ್ಡ್ಗಳ ಸ್ಥಿತಿ ಏನು ಅನ್ನೋದು ಪ್ರಶ್ನೆಯಾಗಿದೆ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಂಡು ನಗರಸಭೆ ಆವರಣದಲ್ಲಿದ್ದ ಕಸವನ್ನು ಎತ್ತುವ ಕೆಲಸ ಮಾಡ್ತಾರಾ ಎಂದು ಕಾದುನೋಡಬೇಕಿದೆ.
ಇದನ್ನು ನೋಡಿ : ಎರಡು ಕುಟುಂಬಗಳ ನಡುವೆ ಕಲಹ; ಕೊಲೆಯಲ್ಲಿ ಅಂತ್ಯ




