Gold Rate ಗ್ರಾಮ್ಗೆ 240 ರೂ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ವಾರಾಂತ್ಯದಲ್ಲೂ ಬಂಗಾರದ ದರದಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, ಒಂದು ಗ್ರಾಂ ಚಿನ್ನದ ಬೆಲೆ ₹240ರಷ್ಟು ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲೇ ಚಿನ್ನದ ಬೆಲೆ ಸುಮಾರು ₹750ರಷ್ಟು ಏರಿಕೆಯಾಗಿದೆ. ಇದೇ ವೇಳೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೆಚ್ಚಿನ ಕಡೆ ಚಿನ್ನದ ದರ ಹೆಚ್ಚಳವಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಈ ಬಾರಿ ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ.
ಸದ್ಯ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,49,500 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆ ₹1,63,090ಕ್ಕೆ ತಲುಪಿದೆ. 100 ಗ್ರಾಂ ಬೆಳ್ಳಿಯ ದರ ₹26,000ರಷ್ಟಿದೆ.
ಆಗಸ್ಟ್ 23ಕ್ಕೆ ಭಾರತದಲ್ಲಿ ಚಿನ್ನ, ಬೆಳ್ಳಿ ದರ
- 24 ಕ್ಯಾರಟ್ ಚಿನ್ನ, 1 ಗ್ರಾಂ: ₹16,309
- 22 ಕ್ಯಾರಟ್ ಚಿನ್ನ, 1 ಗ್ರಾಂ: ₹14,950
- 18 ಕ್ಯಾರಟ್ ಚಿನ್ನ, 1 ಗ್ರಾಂ: ₹12,232
- ಬೆಳ್ಳಿ, 1 ಗ್ರಾಂ: ₹260
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,49,500 ಇದ್ದು, 100 ಗ್ರಾಂ ಬೆಳ್ಳಿಯ ದರ ₹26,000ರಷ್ಟಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
- ಬೆಂಗಳೂರು: ₹14,950 / ಗ್ರಾಂ
- ಚೆನ್ನೈ: ₹14,950 / ಗ್ರಾಂ
- ಮುಂಬೈ: ₹14,950 / ಗ್ರಾಂ
- ದೆಹಲಿ: ₹14,965 / ಗ್ರಾಂ
- ಕೋಲ್ಕತಾ: ₹14,950 / ಗ್ರಾಂ
- ಕೇರಳ: ₹14,950 / ಗ್ರಾಂ
- ಅಹ್ಮದಾಬಾದ್: ₹14,955 / ಗ್ರಾಂ
- ಜೈಪುರ: ₹14,965 / ಗ್ರಾಂ
- ಲಕ್ನೋ: ₹14,965 / ಗ್ರಾಂ
- ಭುವನೇಶ್ವರ: ₹14,950 / ಗ್ರಾಂ
READ THIS : ಇಂದು ಮತ್ತೆ ಏರಿಕೆ ಕಂಡ ಚಿನ್ನದ ದರ – ರೇಟ್ ಚೆಕ್ ಮಾಡಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನಕ್ಕೆ ಬೇಡಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ದರ ಪ್ರತಿ ಗ್ರಾಂಗೆ ಸುಮಾರು 148 ಡಾಲರ್ ಎಂದು ವರದಿಯಾಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು ₹14,163ಕ್ಕೆ ಸಮನಾಗುತ್ತದೆ. ಸ್ಪಾಟ್ ಸಿಲ್ವರ್ ದರ ಪ್ರತಿ ಗ್ರಾಂಗೆ 2.217 ಡಾಲರ್, ಅಂದರೆ ಸುಮಾರು ₹212ರಷ್ಟಿದೆ.
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ
- ಭಾರತ: ₹16,309 / ಗ್ರಾಂ
- ಮಲೇಷ್ಯಾ: 615 ರಿಂಗಿಟ್ (ಸುಮಾರು ₹14,568)
- ದುಬೈ: 544.75 ಡಿರಾಮ್ (ಸುಮಾರು ₹14,448)
- ಅಮೆರಿಕ: 151.50 ಡಾಲರ್ (ಸುಮಾರು ₹14,493)
- ಸಿಂಗಾಪುರ: 198 ಸಿಂಗಾಪುರ್ ಡಾಲರ್ (ಸುಮಾರು ₹14,918)
- ಕತಾರ್: 544 ಕತಾರಿ ರಿಯಾಲ್ (ಸುಮಾರು ₹14,538)
- ಸೌದಿ ಅರೇಬಿಯಾ: 571 ಸೌದಿ ರಿಯಾಲ್ (ಸುಮಾರು ₹14,548)
- ಓಮನ್: 58.90 ಒಮಾನಿ ರಿಯಾಲ್ (ಸುಮಾರು ₹14,635)
- ಕುವೇತ್: 45.87 ಕುವೇತಿ ದಿನಾರ್ (ಸುಮಾರು ₹14,305)

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ
ಬೆಳ್ಳಿ ಬೆಲೆಯಲ್ಲಿ ನಗರದಿಂದ ನಗರಕ್ಕೆ ಸ್ವಲ್ಪ ವ್ಯತ್ಯಾಸ ಕಂಡುಬರುತ್ತಿದೆ.
- ಬೆಂಗಳೂರು: ₹260 / ಗ್ರಾಂ
- ಚೆನ್ನೈ: ₹270 / ಗ್ರಾಂ
- ಮುಂಬೈ: ₹260 / ಗ್ರಾಂ
- ದೆಹಲಿ: ₹260 / ಗ್ರಾಂ
- ಕೋಲ್ಕತಾ: ₹260 / ಗ್ರಾಂ
- ಕೇರಳ: ₹270 / ಗ್ರಾಂ
- ಅಹ್ಮದಾಬಾದ್: ₹260 / ಗ್ರಾಂ
- ಜೈಪುರ: ₹260 / ಗ್ರಾಂ
- ಲಕ್ನೋ: ₹260 / ಗ್ರಾಂ
- ಭುವನೇಶ್ವರ: ₹270 / ಗ್ರಾಂ
- ಪುಣೆ: ₹260 / ಗ್ರಾಂ

ಚಿನ್ನದ ಬೆಲೆ ಇನ್ನಷ್ಟು ಏರಲಿದೆಯೇ?
ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಸತತ ಏರಿಕೆ ಕಂಡುಬರುತ್ತಿದ್ದು, ಹೂಡಿಕೆದಾರರ ಗಮನ ಮತ್ತೊಮ್ಮೆ ಹಳದಿ ಲೋಹದತ್ತ ಸೆಳೆಯುತ್ತಿದೆ. ಜಾಗತಿಕ ಮಾರುಕಟ್ಟೆಯ ಚಲನವಲನ, ಡಾಲರ್ ಮೌಲ್ಯ, ಬಡ್ಡಿದರದ ನಿರೀಕ್ಷೆಗಳು ಹಾಗೂ ಭೌಗೋಳಿಕ-ರಾಜಕೀಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಚಿನ್ನದ ದರದ ಮೇಲೆ ಪರಿಣಾಮ ಬೀರಬಹುದು.
MUST WATCH : ತುಮಕೂರಲ್ಲಿ ಇನ್ಮುಂದೆ ಹೈಟೆಕ್ ಚಿಕಿತ್ಸೆ – HI-TECH ಜಿಲ್ಲಾಸ್ಪತ್ರೆಯ ನಿರ್ಮಾಣ ಶುರು




