Shivamogga : ಕೆಎಸ್ಆರ್ಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ನಾಡಬಾಂಬ್ ಸ್ಫೋಟಗೊಂಡ ಘಟನೆ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ನಡೆದಿದೆ.

Shivamogga : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿದ ನಾಡಬಾಂಬ್ ಸ್ಫೋಟಗೊಂಡ ಘಟನೆ ಸಂಭವಿಸಿದೆ. ಮುಡಬ ಸಿದ್ದಾಪುರದಿಂದ ಶಿಕಾರಿಪುರ ಕಡೆಗೆ ತೆರಳುತ್ತಿದ್ದ ಬಸ್ ಹಿರೇಕಲವತ್ತಿ ಗ್ರಾಮದ ಬಳಿ ಬಂದಾಗ ಈ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ಚಕ್ರಕ್ಕೆ ಸಿಲುಕಿ ನಾಡಬಾಂಬ್ ಸ್ಫೋಟ
ಸ್ಫೋಟದ ಜೋರಿನ ಶಬ್ದದಿಂದ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು, ರಸ್ತೆಯ ಬದಿಯಲ್ಲಿದ್ದ ಟ್ರಾನ್ಸ್ಫಾರ್ಮರ್ ಗೆ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ವವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಿಯಂತ್ರಣ ತಪ್ಪಿ ಟ್ರಾನ್ಸ್ ಫಾರ್ಮರ್ಗೆ ಡಿಕ್ಕಿ
ಸ್ಫೋಟಕ್ಕೂ ಕೇವಲ 5 ನಿಮಿಷಗಳ ಮುನ್ನ ಹಿಂದಿನ ನಿಲ್ದಾಣದಲ್ಲಿ 45 ಮಂದಿ ವಿದ್ಯಾರ್ಥಿಗಳು ಬಸ್ನಿಂದ ಇಳಿದಿದ್ದರು. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗುವ ಸಾಧ್ಯತೆ ಇತ್ತು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಮತ್ತು ಜೆಸಿಬಿ ನಡುವೆ ಡಿಕ್ಕಿ | ಪ್ರಯಾಣಿಕರಿಗೆ ಗಾಯ
ಬಸ್ ರಿಮ್ಗೆ ನಾಡಬಾಂಬ್ ತಗುಲಿ ಸ್ಫೋಟ
ಬಸ್ಸಿನ ಟೈಯರ್ ರಿಮ್ ಭಾಗಕ್ಕೆ ನಾಡಬಾಂಬ್ ತಗುಲಿ ಸ್ಫೋಟಗೊಂಡಿದ್ದರಿಂದ ಹಾನಿಯ ಪ್ರಮಾಣ ಕಡಿಮೆಯಾಗಿದ್ದು, ಬಾಂಬ್ ಟೈಯರ್ ನಡುವೆ ಅಥವಾ ಬಸ್ನ ಅಡಿಯ ಭಾಗದಲ್ಲಿ ಸ್ಫೋಟಗೊಂಡಿದ್ದರೆ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಚಾಲಕ ಬಸವರಾಜ್ ಕಠಿಣ ಕ್ರಮಕ್ಕೆ ಒತ್ತಾಯ
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಸ್ ಚಾಲಕ ಬಸವರಾಜ್, “ನಾಡಬಾಂಬ್ ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಫೋಟದ ಹಿಂದಿನ ಉದ್ದೇಶ ಮತ್ತು ಬಾಂಬ್ ಇಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
MUST WATCH: ಮರಕ್ಕೆ ಗುದ್ದಿದ ಕೆ KSRTC BUS – 15 ಜನರ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು




