Scam : ಚಿಕ್ಕನಾಯಕನಹಳ್ಳಿ ಪುರಸಭೆಯ ಹಣಕಾಸಿನ ಕಳ್ಳಾಟ ಇದೀಗ ಬಟಾಬಯಲಾಗಿದೆ.

ಚಿಕ್ಕನಾಯಕನಹಳ್ಳಿ ಪುರಸಭೆಯ ಹಣಕಾಸಿನ ಕಳ್ಳಾಟ ಇದೀಗ ಬಟಾಬಯಲಾಗಿದೆ. ಸ್ವತಃ ಪುರಸಭೆಯ ಸದಸ್ಯರೇ ಅಧಿಕಾರಿಗಳ, ಅಧ್ಯಕ್ಷರ ಕಳ್ಳಾಟವನ್ನು ಬಯಲು ಮಾಡಿದ್ದಾರೆ. ಹಣಕಾಸು ವ್ಯವಹಾರ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪುರಸಭೆಯ ಮುಖ್ಯಾಧಿಕಾರಿ ಮಂಜುಳಾ ಅವರು ಬಿಡುಗಡೆ ಮಾಡಿರುವ ಅಕ್ಟೋಬರ್ 30, 2025 ನಡೆಯಲಿರುವ ಸಾಮಾನ್ಯ ಸಭೆಯ ಸೂಚನಾ ಪತ್ರದಲ್ಲಿ, “ಮಹಿಳಾ ದಿನಾಚರಣೆ ಕಾರ್ಯಕ್ರಮದ ಬಿಲ್ ಮೊತ್ತ ರೂ. 78,400 ಪಾವತಿಸಲಾಗಿದೆ” ಎಂದು ಸ್ಪಷ್ಟ ಉಲ್ಲೇಖವಿದೆ.

ಆದರೆ, 2024 ಮತ್ತು 2025ನೇ ವರ್ಷಗಳಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವೇ ನಡೆದಿಲ್ಲ ಎಂಬ ವಿಚಾರವನ್ನು ಪುರಸಭೆಯ ಸದಸ್ಯರೇ ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ “ಕಾರ್ಯಕ್ರಮವಿಲ್ಲದಿದ್ದಾಗ ಬಿಲ್ ಪಾವತಿ ಹೇಗೆ?” ಎಂಬ ಪ್ರಶ್ನೆ ಈಗ ಯಕ್ಷಪ್ರಶ್ನೆಯಾಗಿದೆ.
ಸದಸ್ಯರೇ ಬಹಿರಂಗಪಡಿಸಿದ ವಿವಾದ ಸೂಚನಾ ಪತ್ರದಲ್ಲಿನ ವಿವರಗಳನ್ನು ಕಂಡು ಹಲವು ಸದಸ್ಯರು ಪ್ರಶ್ನೆ ಎತ್ತಿದ್ದು, “ಸತ್ಯಘಟನೆಯು ಏನೆಂದು ತನಿಖೆ ಅಗತ್ಯ” ಎಂದು ಆಗ್ರಹಿಸಿದ್ದಾರೆ.
ಈ ವಿಷಯ ಸ್ಥಳೀಯವಾಗಿ ಜನರ ಮಧ್ಯೆ ಚರ್ಚೆಗೆ ಗ್ರಾಸವಾಗಿದ್ದು, ಪಾರದರ್ಶಕತೆ ಮತ್ತು ಜವಾಬ್ದಾರಿತನದ ಕೊರತೆ ಕುರಿತು ಸಾರ್ವಜನಿಕ ಅಸಮಾಧಾನ ವ್ಯಕ್ತವಾಗಿದೆ.
ಇದನ್ನು ಓದಿ : ಮಹಿಳೆ ಮೇಲೆ ಅತ್ಯಾಚಾರ ಆರೋಪ – ಇನ್ಸ್ಪೆಕ್ಟರ್ ಅಮಾನತು
ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯಿಂದ ಹಿಡಿದು ಅಷ್ಟೆ ಯಾಕೆ ತುಮಕೂರು DC, AC, ಮಹಿಳೆಯರೇ. 50% ಮಹಿಳಾ ಸದಸ್ಯರಿರುವ ಪುರಸಭೆಯಲ್ಲಿ ಸಬಲೀಕರಣದ ಮಾತುಗಳು ಕೇವಲ ಮಾತಷ್ಟೇ ಆಗಿವೆ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ಜೋರಾಗಿದೆ.

ಇನ್ನು ಸರ್ಕಾರ ಮಹಿಳೆಯರಿಗಾಗಿ ಹಲವು ಗ್ಯಾರಂಟಿ ಯೋಜನೆಗಳು ಹಾಗೂ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ, ಮಹಿಳಾ ದಿನಾಚರಣೆಯ ಹೆಸರಿನಲ್ಲಿ ಹಣ ಪಾವತಿ ಮಾಡಿಲಾಗಿದೆ. ಅದ್ರೆ ಯಾವುದೇ ಕಾರ್ಯಕ್ರಮವಿಲ್ಲದೆ ಖರ್ಚು ತೋರಿಸಿರುವುದು ಪ್ರಾಮಾಣಿಕತೆಗೆ ಧಕ್ಕೆಯಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಮಹಿಳಾ ದಿನಾಚರಣೆಯ ಹೆಸರಲ್ಲಿ ನಡೆದಿರುವ ಕಳ್ಳಾಟ ಇದೀಗ ಬಟಾಬಯಲಾಗಿದ್ದು, ಸಾರ್ವಜನಿಕರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಅಧಿಕಾರಿಗಳ ಕರ್ಮಕಾಂಡದ ತನಿಖೆಯಾಗಿ, ತಪ್ಪಿತಸ್ಥರ ತಲೆದಂಡವಾಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನು ನೋಡಿ : ಕೆಸರು ಗದ್ದೆಯಾದ ಗ್ರಾಮಗಳ ಸಂಪರ್ಕ ರಸ್ತೆ – ರಸ್ತೆಯಲ್ಲಿ ಓಡಾಡಲು ಗ್ರಾಮಸ್ಥರ ಪರದಾಟ




