ಪಾವಗಡ:
ಇಂದು ಮೇ ಒಂದನೇ ತಾರೀಖು. ದೇಶದಾದ್ಯಂತ ಇವತ್ತು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಣೆ ಮಾಡ್ತಿದ್ದು, ಸರ್ಕಾರಿ ರಜೆಯನ್ನ ಕೂಡ ಘೋಷಿಸಲಾಗಿದೆ. ಆದರೆ ಈ ಕಾರ್ಮಿಕ ದಿನಾಚರಣೆಯ ಬಗ್ಗೆ ಪಾಪಾ ಅದೇಷ್ಟೋ ಕಾರ್ಮಿಕರಿಗೆ ಗೊತ್ತೇ ಇಲ್ಲ. ಹೀಗಾಗಿ ಇಂತಹ ಕಾರ್ಮಿಕರಿಗೆ ಕಾರ್ಮಿಕರ ದಿನದ ಅರಿವು ಮೂಡಿಸುವವರು ಯಾರು ಎಂಬ ಪ್ರಶ್ನೆ ಮೂಡುತ್ತಿದೆ.
ಕಾರ್ಮಿಕ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಿರೋದು ಯಾರಿಗೋಸ್ಕರ ಅನ್ನೋದು ಇನ್ನೊಂದು ಪ್ರಶ್ನೆ. ಯಾಕಂದ್ರೆ ದೊಡ್ಡ ದೊಡ್ಡ ಕೆಲಸದಲ್ಲಿದ್ದು, ಮೈ ಕೈ ದಣಿವು ಮಾಡಿಕೊಳ್ಳದೇ ಲಕ್ಷ ಲಕ್ಷ ಸಂಬಳ ಎಣಿಸೋರು ಇವತ್ತು ರಜಾ ಅಂತಾ ಮನೆಯಲ್ಲಿದ್ರೆ, ಪಾವಗಡ ಪುರಸಭೆಯ ಪೌರಕಾರ್ಮಿಕರು ಮಾತ್ರ ಇವತ್ತು ಎಂದಿನಂತೆಯೇ ಫೀಲ್ಡಿಗಿಳಿದು ನಗರ ಸ್ವಚ್ಛತೆಯ ಕೆಲಸದಲ್ಲಿ ಭಾಗಿಯಾಗಿದ್ದರು. ಕಾರ್ಮಿಕ ದಿನಾಚರಣೆಯ ದಿನವೂ ಪಾವಗಡ ಪುರಸಭೆಯ ಪೌರಕಾರ್ಮಿಕರು ಕೆಲಸದಲ್ಲಿ ತೊಡಗಿದ್ದ ದೃಶ್ಯ ಪ್ರಜಾಶಕ್ತಿ ಟಿವಿಯ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಇವತ್ತು ಕಾರ್ಮಿಕರ ದಿನಾಚರಣೆ, ನಿಮಗೆ ರಜೆಯಿಲ್ವಾ ಅಂತಾ ನಮ್ಮ ಪ್ರತಿನಿಧಿ ಈ ಪೌರಕಾರ್ಮಿಕರನ್ನ ಪ್ರಶ್ನಿಸಿದ್ರೆ, ಅದರ ಬಗ್ಗೆ ಅವರಿಗೆ ಅರಿವೇ ಇರಲಿಲ್ಲ.
ಪುರಸಭೆ ಪೌರಕಾರ್ಮಿಕರು ಮಾತ್ರವಲ್ಲ, ಲಾರಿ ಹಮಾಲಿಗಳು. ರಸ್ತೆ ಬದಿಯಲ್ಲಿ ಕೇಬಲ್ ಅಳವಡಿಕೆ ಮಾಡುತ್ತಿರುವ ಕಾರ್ಮಿಕರು ಕೂಡ ಎಂದಿನಂತೆ ಕೆಲಸ ಮಾಡ್ತಾ ಇದ್ದದ್ದು ಕಂಡುಬಂತು. ಪಾಪಾ ಕೆಲವರಿಗೆ ಇದು ಅನಿವಾರ್ಯವಾಗಿದ್ರೆ, ಇನ್ನೂ ಕೆಲವರಿಗೆ ಹೊಟ್ಟೆ ಪಾಡಿನ ಸಂಗತಿ. ಹಾಗಿದ್ರೆ ಈ ಕಾರ್ಮಿಕರ ದಿನಾಚರಣೆ ಯಾರಿಗಾಗಿ ಆಚರಣೆ ಮಾಡೋದು ಅನ್ನೋ ಪ್ರಶ್ನೆ ಮೂಡೋದಂತೂ ಸತ್ಯ.