ತಿಪಟೂರು:
ತಿಪಟೂರು ಅಂದ್ರೆ ಥಟ್ ಅಂತಾ ನೆನಪಾಗೋದು ಕೊಬ್ಬರಿ. ಹೌದು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಪೇಮಸ್ ಆಗಿರೋ ತಾಲೂಕು. ಪ್ರತ್ಯೇಕ ಜಿಲ್ಲೆಯ ಕೂಗು ಕೂಡ ಕೇಳಿ ಬಂದಿದೆ. ಆದ್ರೆ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯ ಸ್ಥಿತಿ ಹೀನಾಯವಾಗಿದೆ ಅಂದ್ರೆ ತಪ್ಪಾಗಲಾರದು. ಕಳೆದ ಬಾರಿ ತಿಪಟೂರು ಕ್ಷೇತ್ರದ ಶಾಸಕ ಬಿ,ಸಿ ನಾಗೇಶ್ ಅವರೇ ಸಚಿವರಾಗಿದ್ರು ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಹೇಳಿಕೊಳ್ಳಲು ತಾಲೂಕು ಸಾರ್ವಜನಿಕ ಆಸ್ಪತ್ರೆ, ಆದ್ರೆ ಅಲ್ಲಿಗೆ ಬರುವ ರೋಗಿಗಳ ಗೋಳು ಯಾರಿಗೂ ಬೇಡ. ವೈದ್ಯರು ಟ್ರೀಟ್ಮೆಂಟ್ ಏನೋ ಕೊಡ್ತಾರೆ.. ಆದ್ರೆ ಟ್ರೀಟ್ಮೆಂಟ್ಗೆ ಬೇಕಾದ ವ್ಯವಸ್ಥೆಯೇ ಇಲ್ಲವೇಂದ್ರೆ.. ಅಲ್ಲಿನ ಶಾಸಕರು, ಅಧಿಕಾರಿಗಳು ಏನ್ಮಾಡ್ತಾ ಇದ್ದಾರೆ ಅನ್ನೋ ಪ್ರಶ್ನೆ ಕಾಡುತ್ತೆ,
ತಿಪಟೂರು ಸರ್ಕಾರಿ ಆಸ್ಪತ್ರೆಗೆ ನಿತ್ಯ ಹತ್ತಾರು ಮಂದಿ ಡಯಾಲಿಸಿಸ್ ಪೇಷೆಂಟ್ ಬರ್ತಾರೆ. ಡಯಾಲಿಸಿಸ್ ಪೇಷೆಂಟ್ಗಳು ಕನಿಷ್ಠ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗುತ್ತೆ. ಆದ್ರೆ ಡಯಾಲಿಸಿಸ್ ಪೇಷೆಂಟ್ಗೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಇಲ್ಲಿನ ರೋಗಿಗಳು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಹೌದು ಡಯಾಲಿಸಿಸ್ ಪಾಸಿಟಿವ್ ಪೇಷೆಂಟ್ಗಳಿಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಕೊಡಲಾಗಲ್ಲ ಅಂತಾ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಇಲ್ಲಿನ ವೈದ್ಯರು ಹೇಳ್ತಾ ಇದ್ದಾರಂತೆ. ಇಲ್ಲಿ ಕೇವಲ ಡಯಾಬಿಟಿಸ್ ನೆಗಟಿವ್ ಪೇಷೆಂಟ್ಗೆ ಮಾತ್ರ ಟ್ರೀಟ್ಮೆಂಟ್ ಕೊಡಲಾಗುತ್ತಂತೆ. ಇದ್ರಿಂದ ನಾವು ವಾರಕ್ಕೆ ಮೂರು ದಿನ ತುಮಕೂರಿಗೆ ಹೋಗಲು ಸಾಧ್ಯವಾಗಲ್ಲ. ಡಯಾಲಿಸಿಸ್ ಪಾಸಿಟಿವ್ ಪೇಷೆಂಟ್ಗೆ ಇಲ್ಲೇ ಟ್ರೀಟ್ಮೆಂಟ್ಗೆ ವ್ಯವಸ್ಥೆ ಮಾಡಿಕೊಡಿ ಎಂಬ ಆಗ್ರಹ ಕೇಳಿ ಬಂದಿದೆ.
ಇನ್ನು ಸರ್ಕಾರಿ ಆಸ್ಪತ್ರೆ ಅಂದ್ರೆ ಅಲ್ಲಿಗೆ ಬರುವವರು ಬಡ ರೋಗಿಗಳು. ಅವರು ಒಮ್ಮೆ ತುಮಕೂರಿಗೆ ಹೋಗಿ ಬರಲು ಸಾವಿರಾರು ರೂಪಾಯಿ ಖರ್ಚು ಆಗಿತ್ತೆ. ಅಷ್ಟು ಹಣ ಖರ್ಚು ಮಾಡಲು ಸಾದ್ಯವಾಗಲ್ಲ, ಅಲ್ದೇ ವಾರಕ್ಕೆ ಮೂರು ಬಾರಿ ನಾವು ತುಮಕೂರು ಜಿಲ್ಲಾಸ್ಪತ್ರೆಗೆ ಹೋಗಿ ಬರಲು ಕಷ್ಟ ಆಗುತ್ತೆ. ಜೊತೆಗೆ ಡಯಾಲಿಸಿಸ್ ಕಂಪ್ಲೀಟ್ ಚೆಕಪ್ ಮಾಡಿಸಬೇಕು ಅಂದ್ರೆ ಬೆಂಗಳೂರಿಗೆ ಹೋಗಬೇಕು. ಬೆಂಗಳೂರಿಗೆ ಹೋಗಲು ಕನಿಷ್ಠ 3 ರಿಂದ 4 ಸಾವಿರ ಬೇಕು ನಾವು ಬಡವರು ಎಲ್ಲಿಂದ ತರೋದು ಅಷ್ಟೋಂದು ಹಣವನ್ನ, ಹಾಗಾಗಿ ಕೂಡಲೇ ಡಯಾಲಿಸಿಸ್ ಪಾಸಿಟಿವ್ ಪೇಷೆಂಟ್ಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲೇ ಟ್ರೀಟ್ಮೆಂಟ್ ಕೊಡಿಸುವ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ತಿಪಟೂರು ತಾಲೂಕಿನ ರೋಗಿಗಳ ಆಗ್ರಹವಾಗಿದೆ.
ತಿಪಟೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರೋ ನಗರವಾಗಿದ್ದು, ತಾಲೂಕಿನ ಡಯಾಲಿಸಿಸ್ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಪಾಸಿಟಿವ್ ಪೇಷೆಂಟ್ಗಳ ಟ್ರೀಟ್ಮೆಂಟ್ಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟು ರೋಗಿಗಳ ಜೀವವನ್ನು ಉಳಿಸಬೇಕಿದೆ.