ಶಿರಾ :
ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಅವರು ಸರ್ವಾಧಿಕಾರ ಧೋರಣೆ ತೋರುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ಗ್ರಾಮ ಪಂಚಾಯ್ತಿ ಸದಸ್ಯರೇ ಈ ಆರೋಪ ಮಾಡ್ತಾ ಇರೋ ಪ್ರಸಂಗ ಎದುರಾಗಿದೆ.
ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಒ ಆಗಿರೋ ಮಂಜುನಾಥ್ ಎಂಬುವವರು ಅನುದಾನ ಬಂದಿದ್ದರೂ ಕೂಡ, ಕೆಲ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಮೀಸಲು ಇಡ್ತಾ ಇದ್ದಾರೆ. ಆದರೆ ನಾವು ಕೇಳಲು ಹೋದರೆ ಅನುದಾನ ಇಲ್ಲ ಅಂತಾರೆ. ಈ ಪಿಡಿಒ ಇಲ್ಲಿಗೆ ಬಂದ ಬಳಿಕ ನಮ್ಮ ವಾರ್ಡ್‌ಗಳಲ್ಲಿ ಯಾವುದೇ ಕೆಲಸಗಳು ಆಗಿಲ್ಲ ಅಂತಾ ಕೆಲ ಗ್ರಾಮ ಪಂಚಾಯ್ತಿ ಸದಸ್ಯರು ಪಿಡಿಒ ವಿರುದ್ಧ ಗಂಭೀರ ಆರೋಪ ಮಾಡ್ತಾ ಇದ್ದಾರೆ.
ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಿನ್ನೆ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಸಾಮಾನ್ಯ ಸಭೆಗೆ ಹಾಜರಾಗುವಂತೆ ಪಿಡಿಒ ನೋಟಿಸ್ ನೀಡಿದ್ದರಂತೆ. ನೋಟಿಸ್ ನೀಡಿದ್ದಕ್ಕೆ ಸದಸ್ಯರು ಸಭೆಗೆ ಹಾಜರಾಗಿದ್ದರು. ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಹಾಗೂ ಅನುದಾನದ ಬಗ್ಗೆ ಸದಸ್ಯರು ಹಾಗೂ ಪಿಡಿಒ ನಡುವೆ ನಡೆದ ವಾದ ವಿವಾದಗಳು ನಡೆದಿದೆ. ಅಲ್ಲದೇ ಸಾಮಾನ್ಯ ಸಭೆಯಲ್ಲಿ ಕೋರಂಗೆ ಸಹಿ ಮಾಡಿಲ್ಲ, ಸಹಿ ಮಾಡಿ ಇಲ್ಲ ಅಂದರೆ ಎದ್ದು ಹೋಗಿ ಅಂದರು. ನಾವು ಎದ್ದು ಹೋದ ಮೇಲೆ ಬೇರೆ ಸದಸ್ಯರಿಗೆ ಫೋನ್ ಮಾಡಿ ಕರೆಸಿಕೊಂಡು ಮೀಟಿಂಗ್ ಮಾಡಿದ್ದಾರೆ ಎಂದು ವಾರ್ಡ್ ನಂಬರ್ 1 ರ ಸದಸ್ಯರಾದ ಉಮೇಶ್ ಎಂಬುವವರು ಆರೋಪ ಮಾಡಿದ್ದಾರೆ. ಅಲ್ಲದೇ ನಾವು ನಮ್ಮ ವಾರ್ಡ್‌ನಲ್ಲಿ ಕೆಲಸ ಆಗಬೇಕು ಅಂತಾ ಒಂದೆರಡು ಅರ್ಜಿ ಕೊಟ್ಟಿದ್ವಿ ಆದರೆ ಅದನ್ನು ಕೂಡ ತಿರಸ್ಕಾರ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ತಮ್ಮ ಮೇಲೆ ಬಂದಿರೋ ಆರೋಪದ ಬಗ್ಗೆ ಪಿಡಿಒ ಮಂಜುನಾಥ್ ಸ್ಪಷ್ಟನೆ ನೀಡಿದ್ದು, ಆವರು ಮಾಡಿರೋ ಆರೋಪಗಳು ಸತ್ಯಕ್ಕೆ ದೂರವಾದ ಮಾತು. ನಿಯಮಾನುಸಾರ ಕಾಮಗಾರಿಗಳನ್ನು ಹೇಗೆ ಮಾಡಬೇಕೋ ಅದನ್ನು ಮಾಡ್ತಾ ಇದ್ದೀವಿ. ಅವರು ಮಾಡಿರೋ ಆರೋಪಗಳೆಲ್ಲವೂ ಎಲ್ಲವೂ ನಿರಾಧಾರ ಎಂದು ಮಂಜುನಾಥ್ ಉತ್ತರ ನೀಡಿದ್ದಾರೆ.
ಒಟ್ಟಿನಲ್ಲಿ ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಒ ಸರ್ವಾಧಿಕಾರ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದು, ಪಿಡಿಒ ಅವರಿಂದ ಯಾವುದೇ ಅಭಿವೃದ್ಧಿ ಕೆಲಸ ಆಗ್ತಾ ಇಲ್ಲ ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ, ಈ ಬಗ್ಗೆ ಇಒ ಗಮನಕ್ಕೂ ಕೂಡ ಸದಸ್ಯರು ತಂದಿದ್ದಾರಂತೆ, ಆದರೆ ಈವರೆಗೂ ಕ್ರಮ ಆಗಿಲ್ವಂತೆ, ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಪಿಡಿಒ ಅವರ ಸರ್ವಾಧಿಕಾರಿ ಧೋರಣೆಯನ್ನು ಕಡಿಮೆ ಮಾಡ್ತಾರಾ ಎಂದು ಕಾದುನೋಡಬೇಕಿದೆ.