Beauty Tips : ತ್ವಚೆಯ ಸಮಸ್ಯೆಗಳಿಗೆ ಹಾಲನ್ನು ಈ ರೀತಿಯಾಗಿ ಬಳಸಿ

Beauty Tips :

ಹಾಲಿನಿಂದ ಮನೆಯಲ್ಲೆ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಪ್ರತಿದಿನ ಹೀಗೆ ಮಾಡೋದರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತವೆ. ಸೌಂದರ್ಯ ಸಮಸ್ಯೆಗಳ ಹೋಗಲಾಡಿಸಲು ಪ್ರತಿದಿನ ಹಾಲನ್ನು ಈ ರೀತಿಯಾಗಿ ಬಳಸಿ

ತ್ವಚೆ ಶುದ್ಧೀಕರಣ : ಹಾಲು ನೈಸರ್ಗಿಕ ಕ್ಲೆನ್ಸರ್ ಆಗಿದ್ದು, ಚರ್ಮದಲ್ಲಿರುವ ಧೂಳು, ಕೊಬ್ಬು ಮತ್ತು ಕಲೆಗಳನ್ನು ತೆಗೆದು ಹಾಕುತ್ತದೆ. ಹಾಲನ್ನು ಕಾಟನ್ ಬಾಲ್‌ನ ಸಹಾಯದಿಂದ ತ್ವಚೆಗೆ ಹಾಕಿ, ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ.

ತ್ವಚೆ ಮಾಯಶ್ಚರೈಸ್ ಮಾಡಲು :‌ ಹಾಲಿನಲ್ಲಿ ಇರುವ ಫ್ಯಾಟ್‌ಗಳು ತ್ವಚೆಗೆ ತೇವಾಂಶ ನೀಡುತ್ತವೆ. ಒಣ ತ್ವಚೆ ಇದ್ದವರಿಗೆ ಹಾಲು ಉತ್ತಮ ಮಾಯಿಶ್ಚರೈಸ್‌ ಆಗಿ ಕೆಲಸ ಮಾಡುತ್ತದೆ.

ಚರ್ಮದ ಬಿಳುಪಿಗೆ : ಹಾಲು ತ್ವಚೆಯ ಬಿಳುಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಇದೆ, ಇದು ಡೆಡ್ ಸೆಲ್‌ಗಳನ್ನು ತೆಗೆದುಹಾಕಿ ಚರ್ಮವನ್ನು ತೆಳುವಾಗಿ ಮತ್ತು ಬಿಳಿಯಾಗಿ ಮಾಡುತ್ತದೆ.

ಟ್ಯಾನ್‌ ಕಡಿಮೆ ಮಾಡುತ್ತದೆ: ತ್ವಚೆಯ ಮೇಲೆ ಬರುವ ಟ್ಯಾನ್ ಅಥವಾ ಗಾಡತನವನ್ನು ಕಡಿಮೆ ಮಾಡಲು ಹಾಲು ಸಹಾಯಕವಾಗಿದೆ. ಹಾಲು ಮತ್ತು ಲಿಂಬೆರಸ ಸೇರಿಸಿ ತ್ವಚೆಗೆ ಹಚ್ಚಬಹುದು.

ಮುಖದ ಕಪ್ಪು ಕಲೆ/ಮಚ್ಚೆಗಳ ನಿವಾರಣೆ (Removing Dark Spots): ಹಾಲು ಮತ್ತು ಕಡಲೇ ಹಿಟ್ಟು ಅಥವಾ ಹಾಲಿನ ಕೆನೆ ಬೆರೆಸಿ ಮುಖದ ಮೇಲೆ ಹಚ್ಚಿದರೆ ಕಪ್ಪು ಕಲೆ ಕಡಿಮೆಯಾಗುತ್ತದೆ.

ಮೊಡವೆಗಳನ್ನು ಕಡಿಮೆ ಮಾಡಲು : ಹಾಲಿನಲ್ಲಿನ ಲ್ಯಾಕ್ಟಿಕ್ ಆಸಿಡ್ ಬಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಮುಖದ ಮೊಡವೆಗಳು ಕಡಿಮೆಯಾಗಬಹುದು.  ಹಾಲನ್ನು ಲಿಂಬೆರಸ ಅಥವಾ ಅರಿಶಿಣ ಜೊತೆಗೆ ಬೆರೆಸಿ ಹಚ್ಚಿದರೆ ಕಂಕುಳಿನ ಭಾಗದಲ್ಲಿ ಬಿಳುಪಾಗಿ ಮಾಡಬಹುದು. ಕಣ್ಣು ಕೆಳಗಿನ ಕಪ್ಪು ಮಸುಕು ಕಡಿಮೆ ಮಾಡಲು ತಣ್ಣನೆಯ ಹಾಲನ್ನು ಕಾಟನ್ ಬಾಲ್‌ನಲ್ಲಿ ಹಾಕಿ ಕಣ್ಣುಗಳ ಕೆಳಗೆ ಇಡಿದರೆ ಶಮನವಾಗುತ್ತದೆ  ಹಾಗೂ ತುಟಿ ಮೃದುವಾಗಿಸಲು ಹಾಲು ಮತ್ತು ತುಪ್ಪ ಅಥವಾ ಪಿಂಕ್ ಲಿಪ್ ಪ್ಯಾಕ್‌ಗಳ ಜೊತೆಗೆ ಬಳಸಿದರೆ ತುಟಿ ಮೃದುವಾಗುತ್ತದೆ

Author:

...
Sushmitha N

Copy Editor

prajashakthi tv

share
No Reviews