ತುಮಕೂರು : ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ನಾಯಿಗಳ ಕಾಟ ಹೆಚ್ಚಾಗ್ತಾ ಇದೆ. ಬೀದಿಗೆ ಬಂದರೆ ಸಾಕು ಎಲ್ಲಿ ನಾಯಿಗಳು ಎರಗುತ್ತಾವೋ ಅನ್ನೋ ಭಯ. ಆತಂಕದಲ್ಲೇ ನಿತ್ಯ ಜನರು ಓಡಾಡುವ ಪರಿಸ್ಥಿತಿ ಇದ್ದು ಪಾಲಿಕೆ ವಿರುದ್ಧ ಜನರ ಆಕ್ರೋಶದ ಕಟ್ಟೆ ಹೊಡೆದಿದೆ.
ತುಮಕೂರಿನ ವಿನೋಬನಗರದ ಮೊದಲನೇ ಕ್ರಾಸ್ನಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಅಟ್ಯಾಕ್ ಮಾಡ್ತಾ ಇದ್ದು, ನಾಯಿ ದಾಳಿಗೆ ಜನರು ಆಸ್ಪತ್ರೆ ಪಾಲಾಗ್ತಿದ್ದಾರೆ. ಹೀಗಾಗಿ ಸ್ಥಳೀಯ ನಿವಾಸಿಗಳು ಮನೆಯಿಂದ ಆಚೆ ಬರಲು ಹೆದರುವಂತಾಗಿದೆ, ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರ ಮೇಲೆ ನಾಯಿಗಳು ದಾಳಿ ಮಾಡ್ತಾ ಇದ್ದು ಮಕ್ಕಳನ್ನು ಒಬ್ಬರೇ ಆಚೆ ಬಿಡಲು ಪೋಷಕರು ಭಯ ಪಡ್ತಾ ಇದ್ದಾರೆ.
ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಾವುಗಳು ರೋಡ್ನಲ್ಲಿ ಓಡಾಡಲು ಭಯಪಡುವಂತಾಗಿದೆ. ಒಮ್ಮೆಯೇ 10 ರಿಂದ 20 ನಾಯಿಗಳು ನಾವು ಸುಮ್ಮನೆ ಇದ್ದರು, ಏಕಾಏಕಿ ನಮ್ಮ ಮೇಲೆ ಅಟ್ಯಾಕ್ ಮಾಡ್ತಿವೆ, ನಾಯಿಗಳ ಕಾಟದಿಂದ ಈ ಏರಿಯಾ ಜನರನ್ನು ರಕ್ಷಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದರು.
ಇಲ್ಲಿನ ನಾಯಿಗಳ ಕಾಟದಿಂದ ಬೇಸತ್ತ ನಾವು ಪಾಲಿಕೆಗೆ ಅದೆಷ್ಟು ಬಾರಿ ದೂರು ನೀಡಿದರೂ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸ್ತಾ ಇಲ್ಲ ಅಂತಾ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ, ನಾಯಿಗಳನ್ನು ಸೆರೆ ಹಿಡಿದು ಜನರನ್ನು ನಾಯಿಗಳ ಕಾಟದಿಂದ ದೂರವಾಗಿಸಬೇಕಿದೆ.