ಬೆಂಗಳೂರು : ಕಾಂಗ್ರೆಸ್ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ಗರಂ

ಬೆಂಗಳೂರು : ಕಾಂಗ್ರೆಸ್‌ ಸರ್ಕಾರ ತಾನು ಅಧಿಕಾರಕ್ಕೆ ಬಂದು 2 ವರ್ಷವಾಗಿದೆ, ಜನಪರ ಕೆಲಸ ಮಾಡಿದ್ದೇವೆ ಎಂದು ಸಾಧನಾ ಸಮಾವೇಶವನ್ನು ಮಾಡ ಹೊರಟಿದೆ. ಇದೇ ಮೇ 20ಕ್ಕೆ ಹೊಸಪೇಟೆಯಲ್ಲಿ ಸಮಾವೇಶ ಮಾಡಲು ಸಿದ್ಧವಾಗ್ತಿದೆ. ಇದರ ಬೆನ್ನಲ್ಲೆ ಬಿಜೆಪಿ ಕಾಂಗ್ರೆಸ್‌ ಗೆ ಟಕ್ಕರ್‌ ಕೊಡಲು ಪೋಸ್ಟರ್‌ ಅಭಿಯಾನಕ್ಕೆ ಮುಂದಾಗಿದೆ. ಬಿಜೆಪಿ ನಾಯಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಂಗ್ರೆಸ್‌ ಸಾಧನಾ ಸಮಾವೇಶದ ಕುರಿತು ಟೀಕೆ ಮಾಡ್ತಿದ್ದು, ಕಾಂಗ್ರೆಸ್‌ ಕೆಲಸಗಳ ವಿರುದ್ಧ ಪೋಸ್ಟರ್‌ ಅಭಿಯಾನ ಮಾಡ್ತಿದೆ.

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ಪೋಸ್ಟರ್‌ ಅಭಿಯಾನ ಶುರು ಮಾಡ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸಾಧನೆ ಏನು ಇಲ್ಲ. ಎಲ್ಲಾ ಬರೀ ಬೂಟಾಟಿಕೆ. ಜನರ ದುಡ್ಡನ್ನು ಲೂಟಿ ಮಾಡಿ ಜನರಿಗೆ ಕೊಡುವ ಕೆಲಸ ಮಾಡ್ತಿದೆ. ಮತ್ತೊಂದು ಕಡೆ ಎಸ್‌ಸಿ/ಎಸ್‌ಟಿ ನಿಗಮದ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ತಿದೆ ಅಂತ ಬಿಜೆಪಿ ಪೋಸ್ಟರ್‌ ಅಭಿಯಾನ ಮಾಡ್ತಿದ್ದು, ಕಾಂಗ್ರೆಸ್‌ಗೆ ಛೀಮಾರಿ ಹಾಕ್ತಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್‌ ವಿರುದ್ಧ ಹರಿ ಹಾಯ್ದಿದ್ದಾರೆ. ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡ್ತಿದ್ದಾರೆ. ಕಾಂಗ್ರೆಸ್‌ ನಾಯಕರು ದುಂದು ವೆಚ್ಚವನ್ನು ಮಾಡಿಕೊಂಡು ಶೂನ್ಯ ಸಾಧನೆಯ ಸಮಾವೇಶವನ್ನು ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಈ ವಿಚಾರವಾಗಿ ತುಮಕೂರಿನಲ್ಲಿ ಬಿಜೆಪಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯ್ತು. ಈ ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಶಾಸಕ ಸುರೇಶ್‌ ಗೌಡ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಂದ ಏನು ಉಪಯೋಗವಿಲ್ಲ. ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ದಿವಾಳಿ ಮಾಡ್ತಾ ಇದೆ. ಭ್ರಷ್ಟ ಸರ್ಕಾರ ಜನರಿಗೆ ಟೋಪಿ ಹಾಕುವ ಕೆಲಸ ಮಾಡ್ತಿದೆ. ಅಭಿವೃದ್ಧಿಗೋಸ್ಕರ ಶಾಸಕರು ಅನುದಾನ ನೀಡುವಂತೆ ಭಿಕ್ಷೆ ಬೇಡುತ್ತಿದಾರೆ. ಆದರೆ ಸರ್ಕಾರ ತಲೆ ಕೆಡಿಸಿಕೊಳ್ತಿಲ್ಲ. ಬಿಟ್ಟಿ ಭಾಗ್ಯಗಳ ಹೆಸರಲ್ಲಿ ಲೂಟಿ ಮಾಡ್ತಿದ್ದಾರೆ ಅಂತ ಕಿಡಿಕಾರಿದರು.

ಇನ್ನು ಬಿಜೆಪಿ ತನ್ನ ಪೋಸ್ಟರ್‌ ಅಭಿಯಾನದಲ್ಲಿ ಮುಡಾ ವಾಲ್ಮೀಕಿ ನಿಗಮ ಕಾರ್ಮಿಕ ಇಲಾಖೆ ಹಗರಣ. ಎಸ್.ಸಿ, ಎಸ್.ಪಿ.ಟಿ. ಎಸ್.ಪಿ ಹಣ ದುರ್ಬಳಕೆ, ಮುಸ್ಲಿಮರಿಗೆ ಶೇ.4% ಮೀಸಲಾತಿ. ಅಭಿವೃದ್ದಿಗಿಲ್ಲ ಅನುದಾನ, ಕರ್ನಾಟಕದಿಂದ ಪ್ರಮುಖ ಕೈಗಾರಿಕೆಗಳ ವಲಸೆ, ಹಣದುಬ್ಬರ ಏರಿಕೆಯಾಗಿದೆ ಎಂದು ಅಭಿಯಾನ ಮಾಡ್ತಿದೆ. ಬಿಜೆಪಿ ಪೋಸ್ಟರ್‌ ಅಭಿಯಾನದ ನಡುವೆ ಕಾಂಗ್ರೆಸ್‌ ಸಾಧನಾ ಸಮಾವೇಶ ಮಾಡುತ್ತಿದೆ. ಸಾಧನಾ ಸಮಾವೇಶ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews