ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳ ಮೂಲಕ ಜನಪ್ರಿಯತೆ ಗಳಿಸೋಣ ಎಂಬ ಉದ್ದೇಶದಿಂದ ಕೆಲವರು ಅಸಭ್ಯ ಹಾಗೂ ಅಸಹ್ಯ ವಿಷಯಗಳನ್ನು ಪ್ರಸಾರ ಮಾಡುತ್ತಿರುವುದು ಇದೀಗ ಕಾನೂನು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಸಾರ್ವಜನಿಕ ಅಶಿಷ್ಟತೆ ಹಾಗೂ ಶಿಸ್ತು ಉಲ್ಲಂಘನೆ ಆಗಿರುವಂತಹ ರೀಲ್ಸ್ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಕಳೆದ ಮೂರು ವರ್ಷಗಳಲ್ಲಿ 127 ಕೇಸ್‌ಗಳನ್ನು ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.
ವರ್ಷವಾರು ದಾಖಲಾಗಿರುವ ಪ್ರಕರಣಗಳ ವಿವರ ಇಂತಿದೆ:
-
2023: 38 ಕೇಸ್‌ಗಳು
-
2024: 74 ಕೇಸ್‌ಗಳು
-
2025 (ಇವರೆಗೆ): 15 ಕೇಸ್‌ಗಳು
ಕೆಲವು ರೀಲ್ಸ್‌ಗಳಲ್ಲಿ ಅಸಭ್ಯ ಭಾಷೆ, ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟದ ಪ್ರದರ್ಶನ, ಮತ್ತು ಸಾಮಾಜಿಕ ಮಾನ್ಯತೆಗಳಿಗೆ ಧಕ್ಕೆ ತರೋ ರೀತಿ ಅನಿರೀಕ್ಷಿತ ವರ್ತನೆ ತೋರಿದರೆ ಇವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. "ರೀಲ್ಸ್ ಮಾಡುವ ಉದ್ದೇಶ ಇಷ್ಟೇನಾದರೂ ತಪ್ಪಲ್ಲ. ಆದರೆ ಅದರಲ್ಲಿರುವ ವಿಷಯ ಮಿತಿ ಮೀರುವಾಗ, ಕಾನೂನು ಕ್ರಮ ಅನಿವಾರ್ಯವಾಗುತ್ತದೆ," ಎಂದು ಪೊಲೀಸ್ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ಹಿತವಾಗಿ, ಉದ್ದೇಶಪೂರ್ಣವಾಗಿ ಬಳಸುವ ನಿಟ್ಟಿನಲ್ಲಿ ಯುವಜನತೆಗೆ ಕಠಿಣ ಸಂದೇಶ ನೀಡಲು ಇದು ಒಂದು ಎಚ್ಚರಿಕೆ ಸಂದೇಶವಾಗಿದೆ.