
ಡಿ ಗ್ರೂಪ್ ನೌಕರರಿಗೆ ಸಂಬಳ ನೀಡುವಂತೆ ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆ ಹಾಗೂ ಜಿಲ್ಲಾಸ್ಪತ್ರೆ ಡಿ ಗ್ರೂಪ್ ನೌಕರರು ಆಗ್ರಹಿಸಿದರು.ತುಮಕೂರು
ತುಮಕೂರು:
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಅವ್ಯವಸ್ಥೆ ಆಗರದ ಜೊತೆಗೆ ಏಜೆನ್ಸಿಗಳ ಹಾವಳಿ ಹೂಡ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಏಜೆನ್ಸಿಗಳು ಕೂಡ ಒಂದು ರೀತಿಯ ಕಾರಣವಾಗಿತ್ತು. ಕಸದ ನಿರ್ವಹಣೆಯಲ್ಲಿಯೂ ಏಜೆನ್ಸಿಗಳು ನಿರ್ಲಕ್ಷ್ಯ ತೋರಿದ್ವು. ಇದರಿಂದ ಆಸ್ಪತ್ರೆ ಅಸ್ವಚ್ಛತೆಯಿಂದ ಕೂಡಿತ್ತು. ಜಿಲ್ಲಾಸ್ಪತ್ರೆಯಲ್ಲಿನ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸ್ತೀವಿ ಅಂತಾ ಹೇಳೋ ಡಿಎಸ್ ಸಾರ್. ಈವರೆಗೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಏಜೆನ್ಸಿಗಳ ಕಾಟದಿಂದ ಬೇಸತ್ತ ಡಿ ಗ್ರೂಪ್ ನೌಕರರು ಇಂದು ಡಿಎಸ್‌ಗೆ ಮನವಿ ಪತ್ರ ಸಲ್ಲಿಸಿ ಆಸ್ಪತ್ರೆಯಲ್ಲಿನ ವ್ಯವಸ್ಥೆ ಸರಿಪಡಿಸುವಂತೆ ಹಾಗೂ ಜಿಲ್ಲಾಧಿಕಾರಿ ಅಡಿಯಲ್ಲಿ ಡಿ ಗ್ರೂಪ್ ನೌಕರರಿಗೆ ಸಂಬಳ ಸಿಗಬೇಕು ಎಂದು ಆಗ್ರಹಿಸಿದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಶ್ರೀ ಏಜೆನ್ಸಿ ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸ್ತಾ ಇದ್ದು, ಡಿ ಗ್ರೂಪ್ ನೌಕರರನ್ನು ಕಡೆಗಣಿಸಿದೆ. ಸೂಕ್ತ ಸಮಯಕ್ಕೆ ಸಂಬಳ ನೀಡದೇ ದಬ್ಬಾಳಿಕೆ ನಡೆಸುತ್ತಿವೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಏಜೆನ್ಸಿ ಹಾವಳಿ ನಿಲ್ಲಿಸಬೇಕು, ಗ್ರೂಪ್ ಡಿ ನೌಕರರಿಗೆ ಜಿಲ್ಲಾಧಿಕಾರಿ ಅವರ ಅಡಿಯಲ್ಲಿ ಸಂಬಳ ನೀಡುವಂತೆ ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆ ಹಾಗೂ ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ನೌಕರರ ವತಿಯಿಂದ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಶ್ರೀ ಏಜೆನ್ಸಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸ್ತಾ ಇದ್ದು ಈ ಏಜೆನ್ಸಿ ಅವಧಿ ಫೆಬ್ರವರಿ 28ರಂದು ಮುಕ್ತಾಯವಾಗಿದೆ. ಆದರೆ ಡಿ ಗ್ರೂಪ್ ನೌಕರರಿಗೆ ಕೊಡಬೇಕಾದ ಸಂಬಳವನ್ನು ಕೊಡದೇ ಸತಾಯಿಸುತ್ತಿದೆ. ಕಷ್ಟ ಕಾಲದಲ್ಲಿ ಶ್ರೀ ಏಜೆನ್ಸಿ ನೌಕರರಿಗೆ ಯಾವುದೇ ಸಹಾಯ ಮಾಡಿಲ್ಲ, ಅಲ್ಲದೇ ಈ ಏಜೆನ್ಸಿಯಿಂದ ನಮಗೆ ಯಾವುದೇ ಒಳಿತಾಗಿಲ್ಲ ಎಂದು ಡಿ ಗ್ರೂಪ್ ನೌಕರರು ಆಕ್ರೋಶ ಹೊರಹಾಕಿದರು. ಅಲ್ಲದೇ ಇನ್ನು ಮುಂದೆ ಡಿ ಗ್ರೂಪ್ ನೌಕರರ ನೌಕರರ ಆಡಳಿತವನ್ನು ಯಾವುದೇ ಏಜೆನ್ಸಿಗೆ ಕೊಡದೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಅವರಿಂದಲೇ ನೇರವಾಗಿ ನಿಮಗೆ ಸಂಬಳ ಬರುವಂತೆ ಮಾಡಬೇಕು ಎಂದು ಡಿಎಸ್‌ಗೆ ಡಿ ಗ್ರೂಪ್ ನೌಕರರು ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಡಿ ಗ್ರೂಪ್ ನೌಕರರೊಬ್ಬರು ಶ್ರೀ ಏಜೆನ್ಸಿಯವರಿಂದ ನಮಗೆ ಯಾವುದೇ ಸಹಾಯವಾಗಿಲ್ಲ. ಆರೋಗ್ಯ ಸಮಸ್ಯೆ ಆಗಿ ಕಾಲ್ ಮಾಡಿ ಸಂಬಳ ಕೊಡುವಂತೆ ಕೇಳಿಕೊಂಡರೆ, ಫೋನ್ ಪೇ ನಂಬರ್ ಕಳುಹಿಸಿ ಎಂದು ಹೇಳಿ ಸುಮ್ಮನೆ ಆದರು ಅಷ್ಟೇ. ನಮಗೆ ಸಂಬಳನೂ ಕೊಡಲಿಲ್ಲ, ಸಹಾಯನೂ ಮಾಡಲಿಲ್ಲ. ಕಷ್ಟಕ್ಕೆ ಸ್ಪಂದಿಸದ ಏಜೆನ್ಸಿಗಳು ನಮಗೆ ಬೇಡ, ನಮಗೆ ಏಜೆನ್ಸಿಗಳಿಂದ ಮುಕ್ತಿ ಕೊಡಿಸಿ ಎಂದು ಹೇಳಿಕೊಂಡರು.
ಅದೇನೆ ಆಗಲಿ, ಜಿಲ್ಲಾಸ್ಪತ್ರೆಯ ಏಜೆನ್ಸಿಗಳಿಂದ ರೋಗಿಗಳಿಗೆ ಮಾತ್ರವಲ್ಲದೇ ಡಿ ಗ್ರೂಪ್ ನೌಕರರಿಗೆ ಸಾಕಷ್ಟು ಸಮಸ್ಯೆ ಆಗಿದ್ದು, ಜಿಲ್ಲಾಸ್ಪತ್ರೆ ಅವ್ಯವಸ್ಥೆ ಸರಿಹೋಗಬೇಕಾದರೆ ಏಜೆನ್ಸಿಗಳನ್ನು ಕಿತ್ತಾಕಬೇಕಿದೆ. ಈ ಬಗ್ಗೆ ಜಿಲ್ಲಾಸ್ಪತ್ರೆ ಡಿಎಸ್, ವೈದ್ಯಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಜಿಲ್ಲಾಸ್ಪತ್ರೆಯ ವ್ಯವಸ್ಥೆಯನ್ನು ಡಿಎಸ್ ಸರಿ ಪಡಿಸ್ತಾರಾ ಇಲ್ವಾ ಎಂದು ಕಾದುನೋಡಬೇಕಿದೆ.