ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿಯೇ ಎದುರಾಯ್ತು ಎಳನೀರಿಗೆ ಅಭಾವ..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು

ತುಮಕೂರು:

ಕಲ್ಪತರು ನಾಡು ತುಮಕೂರು ಜಿಲ್ಲೆ ಅಂದರೆ ಎಳನೀರು, ತೆಂಗು, ಕೊಬ್ಬರಿಗೆ ಬಹಳ ಫೇಮಸ್, ಆದರೆ ಇವತ್ತು ತುಮಕೂರಿನಲ್ಲಿಯೇ ಎಳನೀರಿಗೆ ಪುಲ್ ಡಿಮ್ಯಾಂಡ್ ಶುರುವಾಗಿದೆ. ಹೌದು ತುಮಕೂರು ನಗರದಲ್ಲಿ ಹೋದ ಕಡೆಗಳಲ್ಲಿ ಎಲ್ಲಾ ಎಳನೀರು ಕಡಿಮೆ ದರದಲ್ಲಿ ಸಿಕ್ತಿತ್ತು. ಆದರೆ ಈಗ ಎಲ್ಲಿ ಹುಡುಕಿದರು ಎಳನೀರು ಸಿಗೋದು ಬಹಳ ಕಷ್ಟಕರವಾಗಿದೆ.

ಇನ್ನು ಎಳನೀರು ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕುಡಿಯೋದು ಸರ್ವೇ ಸಾಮಾನ್ಯ. ಅದರಲ್ಲಂತೂ ರೋಗಿಗಳಿಗೆ ಎಳನೀರು ಬೇಕೆಬೇಕು. ಎಳನೀರು ಕಂಡರೆ ಸಾಕು. ಯಾರೇ ಆದರೂ ಒಂದು ಕ್ಷಣ ಆ ಕಡೆಗೆ ಮನಸು ಸೆಳೆದು ಬಿಡುತ್ತೆ. ಒಂದು ಎಳನೀರು ಕುಡಿದೇ ಬಿಡೋಣಾ ಅಂತ ಅನ್ನಿಸುತ್ತೆ. ಇತ್ತೀಚೆಗೆ ನಗರದ ನಿವಾಸಿಗಳು ಎಳನೀರಿಗೆ ಅಂಟಿಕೊಂಡಿದ್ದಾರೆ ಅಂದರು ತಪ್ಪಾಗಲ್ಲ. ಆದರೆ ಆ ಎಳನೀರಿನ ದರ ಇವತ್ತು ಗಗನಕ್ಕೇರಿ ಹಣ ಕೊಟ್ಟರು ಎಳನೀರು ಸಿಗದಂತಹ ಪರಿಸ್ಥಿತಿಗೆ ತುಮಕೂರು ಬಂದು ತಲುಪಿದೆ. ಮೊದಲು ಒಂದು ಎಳನೀರಿನ ದರ 30,40 ಇತ್ತು. ಆದರೀಗ ಇದರ ದರ 60-70ಕ್ಕೆ ಏರಿದೆ.

ಅಲ್ಲದೇ ತುಮಕೂರು ನಗರದಲ್ಲಿ ಹುಡುಕಿದರೂ ಎಳನೀರು ಸಿಗ್ತಿಲ್ಲ. ಅಲ್ಲೋ ಇಲ್ಲೋ ಒಂದೆರಡು ಕಡೆ ಸಿಕ್ಕಿದರೂ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಸದ್ಯ ತುಮಕೂರು ಜಿಲ್ಲೆಯಲ್ಲಿ ಕೇವಲ 7 ರಿಂದ 8 ಸಾವಿರ ಇದ್ದ ಒಂದು ಕ್ವಿಂಟಾಲ್ ಕೊಬ್ಬರಿ ದರ ಇದೀಗ ಬರೊಬ್ಬರಿ 14 ಸಾವಿರಕ್ಕೆ ದಾಟಿದೆ. ಇದರಿಂದ ರೈತರು ಎಳನೀರು ಕೊಡಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಎಳನೀರು ಬರ್ತಿಲ್ಲ. ಎಳನೀರಿನ ದರ ದುಪ್ಪಟ್ಟು ಆಗಿದ್ದು, ವ್ಯಾಪಾರಸ್ಥರಿಗೆ ಮಾರುಕಟ್ಟೆಯಿಂದ ಎಳನೀರು ಖರೀದಿಸಿ ಮಾರಾಟ ಮಾಡಲು ಆಗ್ತಿಲ್ಲ. ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕ್ತಿದ್ದಾರೆ. ಇನ್ನು ಹತ್ತಾರು ವರ್ಷಗಳಿಂದ ಎಳನೀರು ವ್ಯಾಪಾರವನ್ನೇ ನಂಬಿಕೊಂಡು ಬಂದಿದ್ದ ವ್ಯಾಪಾರಸ್ಥರು ಇದೀಗ ಎಳನೀರು ವ್ಯಾಪಾರ ಕೈಬಿಟ್ಟು ಬೇರೆ ವ್ಯಾಪಾರದ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ತುಮಕೂರು ನಗರದಲ್ಲಿ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಮಾತ್ರ ಎಳನೀರು ಸಿಗ್ತಿದೆ.

ರಾಜ್ಯದಲ್ಲಿಯೇ ಅತೀ ಹೆಚ್ಚು ತೆಂಗು ಬೆಳೆಯುವ ತುಮಕೂರು ಜಿಲ್ಲೆಯಲ್ಲೆ ಹೀಗಾದರೆ ಬೇರೆ ಕಡೆಗಳಲ್ಲಿ ಇನ್ನೇಗೆ ಎಂಬ ಮಾತು ಕೇಳಿ ಬರುತ್ತಿದೆ.

Author:

...
Editor

ManyaSoft Admin

Ads in Post
share
No Reviews