ತುಮಕೂರು :
ತುಮಕೂರು ನಗರ ಬೆಂಗಳೂರಿಗೆ ಸರಿ ಸಮಾನವಾಗಿ ಬೆಳೆಯುತ್ತಿರೋದ್ರ ಜೊತೆಗ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಏರಿಯಾ ಏರಿಯಾಗಳೇ ಗಬ್ಬೇದ್ದು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ. ತುಮಕೂರು ಮಹಾನಗರ ಪಾಲಿಕೆ ಕಸದ ನಿರ್ವಹಣೆಯನ್ನು ಸರಿಯಾಗಿ ಮಾಡ್ತಾ ಇಲ್ವೋ.. ಅಥವಾ ಜನರ ನಿರ್ಲಕ್ಷ್ಯದಿಂದಲೋ ಕಸದ ಸಮಸ್ಯೆ ತಾಂಡವ ವಾಡ್ತಾ ಇದ್ದು ಕಸದಿಂದ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.
ನಗರದ ಸದಾಶಿವನಗರದ ಎರಡನೇ ಹಂತದ ರಸ್ತೆ ಬದಿ ಎಲ್ಲೆಂದರಲ್ಲಿ ಕಸವನ್ನು ಎಸೆಯಲಾಗಿದ್ದು, ಇಡೀ ಏರಿಯಾನೇ ಗಬ್ಬೇದು ನಾರುತ್ತಿದೆ. ಇದರಿಂದ ನಾಗರೀಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಜೊತೆಗೆ ರೋಗ ಹತ್ತಿಸಿಕೊಳ್ಳೋ ಭೀತಿಯಲ್ಲಿ ಅಲ್ಲಿನ ನಿವಾಸಿಗಳಿದ್ದಾರೆ. ದಿನೇ ದಿನೇ ತುಮಕೂರು ನಗರ ಸ್ಮಾರ್ಟ್ ಆಗ್ತಾ ಇರೋದರ ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ರಾಶಿ ಹೆಚ್ಚಾಗ್ತಾ ಇದ್ದು, ಏರಿಯಾ ಏರಿಯಾಗಳು ದುರ್ನಾಥ ಬೀಳುವಂತ ಸ್ಥಿತಿಗೆ ಬಂದಿದೆ. ಅಲ್ದೇ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ಸವಾರರು ಕಸ ಬೀಸಾಡಿ ಹೋಗ್ತಾ ಇದ್ದು, ಜೊತೆಗೆ ಕೊಳಚೆ ನೀರು ಆವರಿಸಿರುವುದರಿಂದ ವಾಸನೆಗೆ ಸ್ಥಳೀಯರು ಕಂಗಾಲಾಗಿದ್ದಾರೆ.
ಕಸದ ಜೊತೆ ಕೊಳಚೆ ನೀರು ಕೂಡ ಮಿಶ್ರಿತವಾಗಿ ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿದ್ದು ಜನರಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗುವ ಭೀತಿ ಹೆಚ್ಚಾಗಿದೆ. ಮತ್ತೊಂದೆಡೆ ಕುಡಿಯುವ ನೀರಿನ ಪೈಪ್ ಹೊಡೆದು ಕುಡಿಯುವ ನೀರೊಂದಿಗೆ ಕೊಳಚೆ ನೀರು ಮಿಶ್ರಿತವಾಗುವ ಆತಂಕದಲ್ಲಿ ಸಾರ್ವಜನಿಕರು ಬದುಕುವ ಪರಿಸ್ಥಿತಿ ಎದುರಾಗಿದೆ, ಇನ್ನಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ಎಚ್ಚೆತ್ತುಕೊಂಡು ಕಸದ ಸಮಸ್ಯೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಕಸದ ಸಮಸ್ಯೆಗೆ ಮುಕ್ತಿ ಕೊಡಿಸಬೇಕಿದೆ. ಕಸದ ರಾಶಿ ಇರುವ ಕಡೆ ಕಸ ಎತ್ತುವುದರ ಜೊತೆಗೆ ಕಸ ಎಸೆಯುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕಿದೆ.