CRICKET : ನಾಳೆಯಿಂದ ಅಂದರೆ ಮೇ 17 ರಿಂದ ಪುನರಾರಂಭಗೊಳ್ಳುತ್ತಿದೆ. ಈ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಸಂಜೆ 7:30 ಕ್ಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಈಗಾಗಲೇ ಬೆಂಗಳೂರಿನಲ್ಲಿವೆ.
ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದೆ.ಈ ಮಳೆ ನಾಳೆಯ ಐಪಿಎಲ್ ಪಂದ್ಯಕ್ಕೆ ಅಡ್ಡಿಯಾಗಬಹುದೆಂಬ ಆತಂಕವಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪರಿಸರ ಸಂಪೂರ್ಣವಾಗಿ ನೀರಿನಿಂದ ತುಂಬಿದ್ದು, ಮೈದಾನ ಈಜು ಕೊಳದಂತೆ ಕಾಣುತ್ತಿದೆ. ಈ ನಡುವೆ, ಆರ್ಸಿಬಿಯ ತಾಳಿ ಸ್ಫೋಟಕ ಬ್ಯಾಟ್ಸ್ಮನ್ ಟಿಮ್ ಡೇವಿಡ್ ಮಳೆಯ ನಡುವೆ ಸಖತ್ ಮೋಜಿನಲ್ಲಿ ತೊಡಗಿರುವ ದೃಶ್ಯಗಳು ವೈರಲ್ ಆಗಿವೆ.
ಆದ್ರೆ ಮಳೆಯನ್ನು ಚಿಂತೆ ಮಾಡದೇ ಆರ್ಸಿಬಿಯ ಸ್ಟಾರ್ ಬ್ಯಾಟ್ಸ್ಮನ್ ಟಿಮ್ ಡೇವಿಡ್ ಸಖತ್ ಎಂಜಾಯ್ ಮಾಡಿದ್ದಾರೆ. ನೀರಿನಿಂದ ತುಂಬಿದ್ದ ಕ್ರೀಡಾಂಗಣದಲ್ಲಿ ಈಜುತ್ತಿರುವ ಟಿಮ್ ಡೇವಿಡ್‌ನ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆರ್‌ಸಿಬಿ ತಂಡವೇ ಈ ವಿಡಿಯೋವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಟಿಮ್ ಡೇವಿಡ್ ಮಳೆಯಲ್ಲಿ ಆಟವಾಡಿದ ನಂತರ ಡ್ರೆಸ್ಸಿಂಗ್ ರೂಮಿಗೆ ಬಂದಾಗ, ತಂಡದ ಆಟಗಾರರು ನಗು ಹಾಗೂ ಚಪ್ಪಾಳೆಗಳಿಂದ ಅವರನ್ನು ಸ್ವಾಗತಿಸಿದ್ದಾರೆ.