ಗುಬ್ಬಿ : ಗುಬ್ಬಿ ಪಟ್ಟಣ ಪಂಚಾಯಿತಿಗೆ ನೂತನ ಸಾರಥಿ ಆದ ಆಯಿಷಾ

ಗುಬ್ಬಿ : ಗುಬ್ಬಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ  7 ನೇ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಸದಸ್ಯೆ ಆಯಿಷಾ ತಾಸಿನ್ ನೂತನ ಅಧ್ಯಕ್ಷರಾಗಿ ಮತ್ತು 18ನೇ ವಾರ್ಡ್ ನ ಶ್ವೇತಾ ಜಗದೀಶ್ ಉಪಾಧ್ಯಕ್ಷರಾಗಿ ಇಂದು ಅವಿರೋಧವಾಗಿ ಆಯ್ಕೆಯಾದ್ರು.ಇದೇ ಸಂದರ್ಭದಲ್ಲಿ ಸದಸ್ಯರು ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಆರತಿ ಅವರ ನೇತೃತ್ವದಲ್ಲಿ ಇಂದು ಚುನಾವಣೆ ನಡೆಯಿತು. ಪಟ್ಟಣ ಪಂಚಾಯತಿಯ ಒಟ್ಟು 19 ಸದಸ್ಯರ ಪೈಕಿ ಒಮ್ಮತದ ನಿರ್ಣಯ ಕೈಗೊಂಡ ಹಿನ್ನಲೆ  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಶಾಸಕರಾದ  ಎಸ್.ಆರ್. ಶ್ರೀನಿವಾಸ್  ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾದ್ರು.

ಇನ್ನು ಇದೇ ವೇಳೇ ಶಾಸಕ ಎಸ್‌.ಆರ್.ಶ್ರೀನಿವಾಸ್‌ ಮಾತನಾಡಿ, ಅವಕಾಶ ವಂಚಿತ ವರ್ಗಗಳನ್ನು ಗುರ್ತಿಸಿ ಅವರಿಗೆ ಅವಕಾಶ ಕಲ್ಪಿಸುವ ಕೆಲಸವನ್ನು 20 ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದೇನೆ. ಅವಕಾಶ ವಂಚಿತ ಸಮಾಜವನ್ನು ಗುರ್ತಿಸುವುದೇ ನನ್ನ ಗುರಿ, ಅಂತಹವರಿಗೆ ನ್ಯಾಯ ಒದಗಿಸಿ ಆ ಮೂಲಕ ಸಾಮಾಜಿಕ ನ್ಯಾಯವನ್ನು ಕಾಪಾಡುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಗುಬ್ಬಿ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು, ಮುಖಂಡರಾದ  ಮಹಮದ್ ಸಾದಿಕ್, ರೇಣುಕಪ್ಪ, ಜಗದೀಶ್, ರೆಹಮತ್ ಉಲ್ಲ ಹಾಜರಿದ್ದರು.

Author:

...
Keerthana J

Copy Editor

prajashakthi tv

share
No Reviews