ದೇಶ: ಅಪರೇಷನ್‌ ಸಿಂಧೂರ್‌ ಬರಿ ಟ್ರೈಲರ್‌, ಪಿಕ್ಚರ್‌ ಅಬಿ ಬಾಕಿ ಹೈ-ರಾಜನಾಥ್‌ ಸಿಂಗ್‌

ದೇಶ : ಆಪರೇಷನ್‌ ಸಿಂಧೂರ್‌ ಪಾಕಿಸ್ತಾನಕ್ಕೆ ಬರೀ ಟ್ರೈಲರ್‌ ಅಷ್ಟೆ ಸಿನಿಮಾ ಅಭೀ ಬಾಕಿ ಹೈ ಅನ್ನೋ ರೀತಿಯಲ್ಲಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ ವೇಳೆ ಭಾರತೀಯ ವಾಯುಪಡೆ ಮತ್ತು ಸಶಸ್ತ್ರ ಪಡೆಗಳ ಕಾರ್ಯವೈಖರಿಯನ್ನು ಶ್ಲಾಘಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದು ಭಾರತದ ಮಿಲಿಟರಿ ಶಕ್ತಿ ಮತ್ತು ಸನ್ನದ್ಧತೆಗೆ ಅದ್ಭುತ ನಿದರ್ಶನ. ಶುಕ್ರವಾರ ಗುಜರಾತ್‌ನ ಭುಜ್ ವಾಯು ನೆಲೆಗೆ ಭೇಟಿ ನೀಡಿ, "ವಾಯುಪಡೆಯ ವೀರ ಯೋಧರ" ಜೊತೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿಅವರು, ನಮ್ಮ ಮೂರು ಪಡೆಗಳ ಶೌರ್ಯ ಮತ್ತು ಧೈರ್ಯವನ್ನು ನಾವು ಮೆಚ್ಚಲೇಬೇಕು. ಭಯೋತ್ಪಾಧನೆಯ ವಿರದ್ಧ ಆಪರೇಷನ್‌ ಸಿಂಧೂರ್‌ ಅಭಿಯಾನ ಭಾರತದ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿದೆ. ನಮ್ಮ ದೇಶದ ಸೈನಿಕರ ಮಾಡಿದ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಅಕ್ಷರಶಃ ನಲುಗಿ ಹೋಗಿದೆ.

ನಾವು ಆಪರೇಷನ್‌ ಸಿಂಧೂರ್‌ ಮಾಡಿತ್ತು ಕೇವಲ ಶತ್ರುಗಳ ಮೇಲೆ ಪ್ರಾಬಲ್ಯ ಸಾದಿಸಲು ಅಷ್ಟೇ ಅಲ್ಲ. ಭಾರತೀಯ ಮೂರು ಪಡೆಗಳ ಶಕ್ತಿ ಎಷ್ಟಿದೆ ಎಂದು ತೋರಿಸಿಕೊಡಲಿಕ್ಕೆ. ಆ ವಿಚಾರದಲ್ಲಿ ದೇಶ ಇಂದು ಯಶಸ್ವಿಯಾಗಿದೆ. ಭಾರತದ ದಾಳಿಗೆ ಪಾಕಿಸ್ತಾನದ ಹಲವು ವಾಯು ನೆಲೆಗಳು ನುಚ್ಚುನೂರಾಗಿವೆ. ಪಾಕಿಸ್ತಾನ 9 ಉಗ್ರ ನೆಲೆಗಳು ಧ್ವಂಸಗೊಂಡಿವೆ. ಇಂತಹ ದೃಶ್ಯವನ್ನು ಇಡೀ ವಿಶ್ವವೇ ನೋಡಿದೆ. ಆ ಮೂಲಕ ಭಾರತ ಸಾಮರ್ಥ್ಯ ಜಗತ್ತಿಗೆ ರವಾನಿಸಿದಂತಾಗಿದೆ. ಅತ್ತ ಪಾಕಿಸ್ತಾನಕ್ಕೆ ಐಎಂಎಫ್‌ ಹಣ ನೀಡುವ ವಿಚಾರವಾಗಿ ಮಾತನಾಡಿದ ಅವರು, ಐಎಂಎಫ್‌ ನೀಡುತ್ತಿರುವ ಹಣ ಭಯೋತ್ಪಾದನೆಗೆ ವಿನಿಯೋಗವಾಗ್ತಿದೆಯ ಎಂದು ತಿಳಿಯಬೇಕಿದೆ. ಈ ಕುರಿತು ಒಮ್ಮೆ ಐಎಂಎಪ್‌ ಕ್ರಾಸ್‌ ಚೆಕ್‌ ಮಾಡಬೇಕಾಗಿರುವ ಅನಿರ್ವಾಯತೆ ಇದೆ ಎಂದರು.

 

Author:

...
Keerthana J

Copy Editor

prajashakthi tv

share
No Reviews