ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲಪ್ಪನಹಳ್ಳಿ ಗ್ರಾಮದಲ್ಲಿ ನಾಗಲಮುದ್ದಮ್ಮ ದೇವಿ ದೇವಾಲಯದ 9 ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ಮಹಿಳೆಯರು ವಿಶೇಷ ಅಲಂಕೃತವಾದ ದೀಪಗಳನ್ನು ತಮಟೆ ವಾಧ್ಯಗಳೊಂದಿಗೆ ಹೊತ್ತು ಸಾಗಿದರು. ಇಡೀ ಊರಿಗೆ ಊರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಜೃಂಭಣೆಯಿಂದ ದೇವಿಯನ್ನು ಊರತುಂಬಾ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ಅರ್ಚಕರು ಮಾತನಾಡಿ, ಅನಾದಿಕಾಲದಿಂದಲೂ ಈ ದೇವಿ ಕ್ಷೇತ್ರದಲ್ಲಿ ನೆಲೆಸಿದ್ದಾಳೆ. ಕಳೆದ 9 ವರ್ಷಗಳಿಂದಲೂ ಬಹಳ ವಿಜೃಂಭಣೆಯಿಂದ ವಾರ್ಷಕೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ದೇವಿಯ ಬಳಿ ಕಷ್ಟಗಳನ್ನು ಹೇಳಿ ಪಾರ್ಥಿಸಿದರೆ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.