ಹೊನ್ನುಡಿಕೆ : ಮಣ್ಣಿನ ಫಲವತ್ತತ್ತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಮಣ್ಣಿನ ಫಲವತ್ತತೆ ಹೇಗೆ ಗುರುತಿಸಬೇಕು ಎಂಬುದರ ಬಗ್ಗೆ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಮಣ್ಣಿನ ವಿಜ್ಞಾನಿ ರಮೇಶ್ ಇಂದು ಹೊನ್ನುಡುಕೆ ಪಂಚಾಯ್ತಿಯ ರೈತರಿಗೆ ಮತ್ತು ಸ್ಥಳದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ರು.
ಇಂದು ಮಣ್ಣು ವಿಜ್ಞಾನಿ ರಮೇಶ್ ಬೆಳಿಗ್ಗೆ ಇತಿಹಾಸ ಪ್ರಸಿದ್ಧವಾದ ಹೊನ್ನಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡ್ರು. ನಂತರ ಹೊನ್ನುಡಿಕೆ ಪಂಚಾಯತಿ ವ್ಯಾಪ್ತಿಯ ಕುರಗುಂದ. ಸಾಸಲು. ಬಸೇಗೌಡನ ಪಾಳ್ಯ ಸೇರಿ 20ಕ್ಕೂ ಹೆಚ್ಚಿನ ತೋಟಗಳಿಗೆ ಭೇಟಿ ನೀಡಿದ್ರು ರೈತ ರಾಮಚಂದ್ರಪ್ಪ ತಮಗೆ ಮಣ್ಣಿನ ಫಲವತ್ತತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಡಬೇಕೆಂದು ಕೇಳಿಕೊಂಡ್ರು. ಇದೇ ವೇಳೆ ವಿಜ್ಞಾನಿ ರಮೇಶ ಮಣ್ಣು ಪರೀಕ್ಷೆ ನಡೆಸಿದ್ರು. ಸ್ಥಳದಲ್ಲಿಯೇ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಫಲವತ್ತತೆಯ ಕುರಿತು ಮಾಹಿತಿ ನೀಡಿದ್ರು.
ಈ ಸಂದರ್ಭದಲ್ಲಿ ಜಗದೀಶ್ ಗೌಡ. ಗಂಗಾಧರಯ್ಯ. ವೆಂಕಟೇಶ್. ಅಧಿಕಾರಿ ಬಸವರಾಜ್. ಕೃಷಿ ಇಲಾಖೆ ಸಂಬಂಧಪಟ್ಟ ವಿದ್ಯಾರ್ಥಿಗಳು ಹಾಜರಿದ್ರು.