SANDLEWOOD : ಜನಪ್ರಿಯ 'ಯಜಮಾನ' ಧಾರಾವಾಹಿಯ ಮೂಲಕ ಮನೆಮಾತಾದ ನಟ ಗಜೇಂದ್ರ ಮರಸಣಿಗೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ವೇತಾ ಎಂಬ ಯುವತಿಯನ್ನು ತಮ್ಮ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿರುವ ಗಜೇಂದ್ರ, . ಶೃಂಗೇರಿಯ ಮುಂಡಗಾರು ಎಂಬ ಊರಿನಲ್ಲಿ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.
ಪರಿವಾರದ ಸದಸ್ಯರ ಸಮ್ಮುಖದಲ್ಲಿ ನಡೆದ ಈ ವಿವಾಹ ಸಮಾರಂಭ ಸರಳವಾಗಿ ನಡೆದಿದ್ದು, ಗಜೇಂದ್ರ ಮತ್ತು ಶ್ವೇತಾ ಅವರ ಮದುವೆಯ ಸುಂದರ ಕ್ಷಣಗಳ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಮ್ಮ ಖಾತೆ ಮೂಲಕ ನಟ ಗಜೇಂದ್ರ ತಮ್ಮ ವಿವಾಹದ ಫೋಟೋಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳಿಂದ ಅಪಾರವಾಗಿ ಶುಭಾಶಯಗಳು ಹರಿದು ಬರುತ್ತಿವೆ.
ಗಜೇಂದ್ರ ಅವರು 'ಯಜಮಾನ', 'ಅಣ್ಣ ತಂಗಿ', 'ಪಾರ್ವತಿ ಪರಮೇಶ್ವರ', 'ಪರಿಣಿತ', 'ಅನುಬಂಧ' ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, 'ಕಾಮಿಡಿ ಕಿಲಾಡಿಗಳು' ಶೋ ಮತ್ತು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ಸ್ನೇಹಿತನ ಪಾತ್ರದಿಂದಾಗಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದ ಗಜೇಂದ್ರ, ಇದೀಗ ನಿಜ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಟ್ಟಿದ್ದಾರೆ.