ರಾಜ್ಯ : ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ

ರಾಜ್ಯ : ದ್ವೀತಿಯ ಪಿಯು ಪರೀಕ್ಷೆಯ ಫಲಿತಾಂಶವು 2025 ಏಪ್ರಿಲ್‌ 08 ರಂದು ಈಗಾಗಲೇ ಪ್ರಕಟವಾಗಿತ್ತು. ಆದರೆ ದ್ವಿತೀಯ ಪಿಯುಸಿ ಯಲ್ಲಿ ಅನುತ್ತೀರ್ಣರಾಗಿದ್ದ ಸಂಖ್ಯೆಯೂ 1.70 ಲಕ್ಷ ವಿದ್ಯಾರ್ಥಿಗಳಲ್ಲಿ 1.57 ಲಕ್ಷ ವಿದ್ಯಾರ್ಥಿಗಳು ಮರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅಲ್ಲದೆ ಸರ್ಕಾರವು ಪರೀಕ್ಷಾ ಶಲ್ಕವಿಲ್ಲದೇ ನೋಂದಣಿ ಮಾಡಿಕೊಳ್ಳಲು ಅವಕಾಶವನ್ನು ನೀಡಿತ್ತು. ಇದರಿಂದ ಶೇ 92.4 ರಷ್ಟು ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. 70 ಸಾವಿರ ವಿದ್ಯಾರ್ಥಿಗಳು ಫಲಿತಾಂಶ ವೃದ್ದಿಗೆ ಹಾಜರಾಗಿದ್ದರು.

ಅಲ್ಲದೇ ಏ.24 ರಿಂದ ಮೇ 8 ರವರೆಗೆ  ದ್ವಿತೀಯ ಪಿಯುಸಿ ಯವರಿಗೆ ನಡೆಯುವ ಎರಡನೇ ಪರೀಕ್ಷೆ ನಡೆದಿತ್ತು. ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಟ್ಟತ್ತು, ಫಲಿತಾಂಶಕ್ಕೂ ಮೊದಲು ಕರ್ನಾಟಕ ಶಾಲಾ ಪರೀಕ್ಷೆಯನ್ನು ಹಾಗೂ ಮರು ಪರೀಕ್ಷೆ-2 ಫಲಿತಾಂಶವನ್ನು ಸಿದ್ದಪಡಿಸಿದೆ. 

Author:

...
Keerthana J

Copy Editor

prajashakthi tv

share
No Reviews