ತುಮಕೂರು : RBI ವ್ಯಾಪ್ತಿಗೆ ಬರೋ ಬ್ಯಾಂಕಿನ ರಿಕವರಿ ಏಜೆಂಟ್ ಗಳಿಂದ ಟಾರ್ಚರ್..!

ತುಮಕೂರು:

ಮೈಕ್ರೋ ಫೈನಾನ್ಸ್‌ಗಳ ಕಾಟ ಎಲ್ಲೆ ಮೀರಿದ್ದು, ಸಾಕಷ್ಟು ಮಂದಿ ಅಮಾಯಕ ಜೀವಗಳು ಬಲಿಯಾಗಿದ್ದು, ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ಗಳಿಗೆ ಮೂಗುದಾರ ಹಾಕಲು ಸುಗ್ರೀವಾಜ್ಞೆಯನ್ನು ಕೂಡ ಜಾರಿಗೆ ತರಲಾಗಿತ್ತು. ಆದರೆ ಸುಗ್ರೀವಾಜ್ಞೆ ಜಾರಿಗೂ ಕ್ಯಾರೆ ಅನ್ನದ ಕೆಲ ಮೈಕ್ರೋ ಫೈನಾನ್ಸ್‌ಗಳು ಟಾರ್ಚರ್‌ ಕೊಡ್ತಾನೆ ಇರೋದು ಬೆಳಕಿಗೆ ಬಂದಿದೆ. ಇನ್ನು ನಿನ್ನೆ ತುಮಕೂರಿನಲ್ಲಿ ಸಾಲಗಾರರ ಕಾಟಕ್ಕೆ ಓರ್ವ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾನೆ. ಇದೀಗ RBI ಅಂಡರ್‌ನಲ್ಲಿ ಬರುವ IDFC ಬ್ಯಾಂಕ್‌ನಿಂದ ಸಾಲಗಾರನಿಗೆ ಟಾರ್ಚರ್‌ ಕೊಡ್ತಾ ಇರೋದು ಬೆಳಕಿಗೆ ಬಂದಿದೆ.

ಇಷ್ಟು ದಿನ ಆರ್‌ಬಿಐ ವ್ಯಾಪ್ತಿಗೆ ಬರುವ ಬ್ಯಾಂಕ್‌ಗಳಿಂದ ಜನರಿಗೆ ಟಾರ್ಚರ್‌ ಕೊಡ್ತಾ ಇರೋದು ಕಂಡು ಬಂದಿತ್ತು. ಆದರೀಗ ಆರ್‌ಬಿಐ ವ್ಯಾಪ್ತಿಗೆ ಬರುವ IDFC ಬ್ಯಾಂಕ್‌ನಿಂದ ಸಾಲಗಾರನಿಗೆ ಕಿರುಕುಳ ಕೊಡ್ತಾ ಇದ್ದು, ಸಾಲ ಕಟ್ಟುತ್ತಿವಿ ಸ್ವಲ್ಪ ಟೈಂ ಕೊಡಿ ಅಂತಾ ಕೇಳಿದರೂ ಬಿಡದೇ ಟಾರ್ಚರ್‌ ಕೊಡ್ತಾ ಇದ್ದಾರೆ ಎಂದು ವ್ಯಕ್ತಿಯೋರ್ವ ಅಳಲು ತೋಡಿಕೊಳ್ಳುತ್ತಿದ್ದಾನೆ, ನೆಲಮಂಗಲ ಮೂಲದ ಇದಾಯತ್‌ ಎಂಬಾತ ಆನ್‌ಲೈನ್‌ನಲ್ಲಿ IDFC ಬ್ಯಾಂಕ್‌ನಿಂದ ಸುಮಾರು 1 ಲಕ್ಷದ 40 ಸಾವಿರ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, 80 ಸಾವಿರದಷ್ಟು ಸಾಲವನ್ನು ವಾಪಸ್‌ ಕಟ್ಟಿದ್ದಾನೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಅನಿವಾರ್ಯ ಕಾರಣಗಳಿಂದ ಸಾಲದ ಕಂತನ್ನು ಕಟ್ಟಲಾಗಿಲ್ಲ. ಹೀಗಾಗಿ ಕರೆ ಮಾಡಿ ಸಾಲ ಕಟ್ಟುವಂತೆ ಟಾರ್ಚರ್‌ ಕೊಡ್ತಾ ಇದ್ದಾರಂತೆ, ಅಲ್ಲದೇ ಎಲ್ಲೇ ಹೋದರೂ ಫಾಲೋ ಮಾಡಿಕೊಂಡು ಟಾರ್ಚರ್‌ ಕೊಡ್ತಾ ಇದ್ದಾರೆ ಜೊತೆಗೆ  ತುಮಕೂರಿನ ಜಯನಗರ ಪೊಲೀಸ್‌ ಠಾಣೆಗೆ ಬರುವಂತೆ ಹೆದರಿಸ್ತಾ ಇದ್ದಾರಂತೆ.

ಇನ್ನು IDFC ಬ್ಯಾಂಕ್‌ನಿಂದ ಸಾಲ ಪಡೆದಿರುವ ಇದಾಯತ್‌ ಕುಟುಂಬಕ್ಕೆ ಬ್ಯಾಂಕ್‌ನ ರಿಕವರಿ ಏಜೆಂಟ್‌ಗಳು ಸುಗ್ರೀವಾಜ್ಞೆ ಹಾಗೂ ಮಾನವೀಯತೆಯನ್ನು ಕಡೆಗಣಿಸಿ, ಅವರನ್ನು ಹಿಂಬಾಲಿಸುತ್ತಾ, ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದಾರೆ.

ನಾವು RBI ಗೆ ಒಳಪಡುತ್ತೇವೆ , ನಮ್ಮ ಮೇಲೆ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ ಎಂದು ದರ್ಪ ತೋರಿಸಿ ಮಾತನಾಡುತ್ತಿದ್ದಾರೆ ಎಂದು ಮಾನವ ಹಕ್ಕು ಆಯೋಗದ ಜಿಲ್ಲಾಧ್ಯಕ್ಷ ಮಧುಸೂದನ್‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅದೇನೆ ಆಗಲಿ, ಇಷ್ಟು ದಿನ ಆರ್‌ಬಿಐ ವ್ಯಾಪ್ತಿಗೆ ಬರದ ಸಣ್ಣ- ಪುಟ್ಟ ಮೈಕ್ರೋ ಫೈನಾನ್ಸ್‌ಗಳಿಂದ ಜನಸಾಮಾನ್ಯರಿಗೆ ಟಾರ್ಚರ್‌ ಕೊಡ್ತಾ ಇದಾರೆ, ಇದೀಗ RBI ಅಂಡರ್‌ಗೆ ಬರುವ ಬ್ಯಾಂಕ್‌ಗಳಿಂದಲೇ ಈ ರೀತಿಯ ಮಾನಸಿಕ ಕಿರುಕುಳ ಹೆಚ್ಚಾಗ್ತಾ ಇದ್ದು ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕೋ ಆ ದೇವರೇ ಬಲ್ಲ. ಸರ್ಕಾರದ ಸುಗ್ರೀವಾಜ್ಞೆಗೂ ಫೈನಾನ್ಸ್‌ಗಳು ಕ್ಯಾರೇ ಅನ್ನದಿರೋದು ಜನರನ್ನು ಚಿಂತೆಗೆ ದೂಡುವಂತೆ ಮಾಡಿರೋದಂತೂ ಸುಳ್ಳಲ್ಲಾ.

Author:

...
Editor

ManyaSoft Admin

Ads in Post
share
No Reviews