SIRA: ನೀರು ಪೋಲಾಗ್ತಾ ಇದ್ರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್

ಶಿರಾ: 

ನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ, ಆದ್ರೂ ಕೂಡ ಜನರಿಗೆ ಶುದ್ದವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೌದು ಶಿರಾ ತಾಲೂಕಿನ ಹಳ್ಳಿಗಳಿಗೆ ಸಮರ್ಪಕ ನೀರು ಸಿಗದೇ ಸಂಕಷ್ಟ ಪಡುವಂತಾಗಿದೆ.  ಶಿರಾ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌಡಗೆರೆ ಗ್ರಾಮದ ನೀರು ಸರಬರಾಜು ಘಟಕ ಅವ್ಯವಸ್ಥೆಯಿಂದ ಕೂಡಿದೆ, ನೀರಿನ ಯೋಜನೆಗೆ ಕಳಪೆ ಗುಣಮಟ್ಟದ ಪೈಪ್‌ ಬಳಸಿಕೊಂಡಿರೋದ್ರಿಂದ ನೀರು ನಿರಂತರ ಉಕ್ಕಿ ಪಾಲಾಗುತ್ತಿದೆ, ಅದ್ರೆ ನೀರು ಪೋಲಾಗ್ತಾ ಇದ್ರು ಕೂಡ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.  

ಹೌದು ಕಳೆದ ಹಲವು ತಿಂಗಳಿಂದ ನೀರಿನ ಪೈಪ್‌ ಜೋಡಣೆ ಮಾಡಲಾಗಿದೆ. ಆದ್ರೆ ಪೈಪಗಳಿಂದ ನೀರು ಉಕ್ಕಿ ಬಂದು ಪೋಲಾಗ್ತಾ ಇದ್ರೆ, ಒಡೆದ ಪೈಪ್ ಗೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಕವರ್‌ ಸುತ್ತಿ ಹೋಗ್ತಾ ಇದ್ದಾರೆ ಹೊರತು … ಪೈಪ್‌ ಗಳನ್ನ ಸರಿಪಡಿಸುವ ಗೋಜಿಗೆ ಹೋಗ್ತಾ ಇಲ್ಲ ಎಂದು ಸಾರ್ವಜನಿಕರು ಅಕ್ರೋಶ ಹೊರಹಾಕಿದ್ದಾರೆ, ಇದಲ್ಲದೇ ನೀರು ಅಷ್ಟು ಪೋಲಾಗ್ತಾ ಇದ್ರು ಕೂಡ ಅಧಿಕಾರಿಗಳು ಕಂಡು ಕಾಣದಂತೆ ಹೋಗ್ತಾ ಇದ್ದಾರೆ, ನಿರಂತರವಾಗಿ ಪೋಲಾಗ್ತಿರೋ ನೀರನ್ನು ಸಂರಕ್ಷಿಸದಿದ್ರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸುವುದು ಖಚಿತ , ಹಾಗಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ವ್ಯರ್ಥವಾಗೋದನ್ನ ಸರಿಪಡಿಸಿ, ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕಾಗಿದೆ.

Author:

...
Sub Editor

ManyaSoft Admin

Ads in Post
share
No Reviews