ಗುಬ್ಬಿ:
ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಡೇಪಾಳ್ಯದ ಶ್ರೀಮತಿ ಪವನಾ ಅವಿರೋಧ ಆಯ್ಕೆಯಾದ್ರು. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಬಿಲ್ಕಿಸ್ ಬಾನು ಎಂಬುವರು ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು. ಮೀಸಲು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿ ಕಡೇಪಾಳ್ಯ ಸದಸ್ಯೆ ಪವನಾ ನಾಮಪತ್ರ ಸಲ್ಲಿಸಿದ್ರು. ಹೀಗಾಗಿ ಪವನಾ ಅವರನ್ನೇ ಅವಿರೋಧವಾಗಿ ಉಪಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯ್ತು.
ಪಂಚಾಯ್ತಿ ಕಚೇರಿಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿ ಶಿವಪ್ರಕಾಶ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಇನ್ನು ನೂತನ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ರು. ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಾಧಾಮಣಿ, ಸದಸ್ಯರಾದ ಶ್ರೀನಿವಾಸ್, ಶಿವಪ್ಪ, ಉಮಾದೇವಿ ಮುಖಂಡರು ಸೇರಿ ಹಲವರು ಉಪಸ್ಥಿತರಿದ್ರು. ಇನ್ನು ಅಧ್ಯಕ್ಷೆ ರಾಧಾಮಣಿ ಮಾತನಾಡಿ ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಉಪಾಧ್ಯಕ್ಷರ ಜೊತೆ ಸೇರಿ ಎಲ್ಲಾ ಸದಸ್ಯರ ವಿಶ್ವಾಸಗಳಿಸಿ ಕೆಲಸ ಮಾಡುತ್ತೇವೆ ಎಂದರು.